ಟಿಂಡರ್ ಮ್ಯಾಚ್‌ನಲ್ಲಿ ಪ್ರೀತಿಯ ಬಲೆಗೆ ಬಿದ್ದ ಹಣಕಾಸು ಸಲಹೆಗಾರ; ಲವ್ ಸ್ಕ್ಯಾಮ್ನಲ್ಲಿ ರೂ.14.8 ಕೋಟಿ ಕಳೆದುಕೊಂಡ!
ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದರಿಂದ ದೊಡ್ಡ ಆದಾಯವನ್ನು ಪಡೆಯಬಹುದು ಎಂದು ಸಂಸ್ತ್ರಾಸ್ತನಿಗೆ ಸಲಹೆ ನೀಡಲಾಗಿತ್ತು.
ಇಂಟರ್ನೆಟ್ ಮೂಲಕ (internet), ಅಥವಾ ಡೇಟಿಂಗ್ ಆಪ್ಗಳ (Dating apps) ಮೂಲಕ ಮೋಸ ಹೋಗುವ ಪ್ರಕರಣಗಳು ಹೊಸದೇನಲ್ಲ. ಇದರ ಬಗ್ಗೆ ತಿಳಿದು ಕೂಡ ಜನ ಮೋಸ ಹೋಗುತ್ತಿದ್ದಾರೆ. ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೆ, ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್ ಟಿಂಡರ್ (Tinder) ಮೂಲಕ ಪರಿಚಯವಾದ ತನ್ನ ಇಂಟರ್ನೆಟ್ ಪ್ರೇಮಿಯಿಂದ ವಂಚನೆಗೊಳಗಾದ ನಂತರ ಇಟಾಲಿಯನ್ ಹಣಕಾಸು ಸಲಹೆಗಾರನು HK$14 ಮಿಲಿಯನ್‌ಗಿಂತಲೂ ಹೆಚ್ಚು (14 ಕೋಟಿ ರೂ.) ಕಳೆದುಕೊಂಡಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ (Morning Post) ವರದಿಯ ಪ್ರಕಾರ, 55 ವರ್ಷ ವಯಸ್ಸಿನ ಮತ್ತು ಹಾಂಗ್ ಕಾಂಗ್‌ನ ಪಶ್ಚಿಮ ಜಿಲ್ಲೆಯಲ್ಲಿ ನೆಲೆಸಿರುವ ಸಂತ್ರಸ್ತ, ಫೆಬ್ರವರಿ ಮಧ್ಯದಲ್ಲಿ ಸಿಂಗಾಪುರದ ಹೂಡಿಕೆ ದಲ್ಲಾಳಿಯಂತೆ ನಟಿಸಿದ ಮಹಿಳೆಯೊಂದಿಗೆ ಟಿಂಡರ್‌ನಲ್ಲಿ ಮ್ಯಾಚ್ ಮಾಡಿಕೊಂಡರು.
ಟಿಂಡರ್ ಲವ್ ಹಗರಣ
ಆರ್ಥಿಕ ಸಲಹೆಗಾರ ಮತ್ತು ಸಿಂಗಪುರದ ಮಹಿಳೆ ಮ್ಯಾಚ್ ಆದ ನಂತರ, ಅವರು ವಾಟ್ಸಾಪ್ ಮೂಲಕ ಸಂಪರ್ಕದಲ್ಲಿರುತ್ತಿದ್ದರು ಮತ್ತು ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ನಂತರ ಸಂತ್ರಸ್ತನಿಗೆ ನಕಲಿ ಟ್ರೇಡಿಂಗ್ ವೆಬ್‌ಸೈಟ್‌ನಲ್ಲಿ ಖಾತೆಯನ್ನು ಸ್ಥಾಪಿಸಲು ಮತ್ತು ಡಿಜಿಟಲ್ ಹಣವನ್ನು ಅಲ್ಲಿ ಹೂಡಿಕೆ ಮಾಡಲು ಆರೋಪಿ ಸಲಹೆ ಮಾಡಿದ್ದಾರೆ. ಮಾರ್ಚ್ 6 ರಿಂದ ಮಾರ್ಚ್ 23 ರವರೆಗೆ, 22 ಪ್ರತ್ಯೇಕ ವಹಿವಾಟುಗಳಲ್ಲಿ ಒಂಬತ್ತು ವಿವಿಧ ಬ್ಯಾಂಕ್ ಖಾತೆಗಳಿಗೆ HK $ 14.2 ಮಿಲಿಯನ್ ಅನ್ನು ವರ್ಗಾಯಿಸಲು ಮನವೊಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ತನ್ನ ಹಣವನ್ನು ಮತ್ತು “ಲಾಭಗಳನ್ನು” ಮರಳಿ ಪಡೆಯಲು ಸಾಧ್ಯವಾಗದಿದ್ದಾಗ ಇದು ಹಗರಣವೆಂದು ಕಂಡುಹಿಡಿಡಿದ್ದಾರೆ. ನಂತರ, ಕಳೆದ ತಿಂಗಳ ಕೊನೆಯಲ್ಲಿ, ಅವರು ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು “ವಂಚನೆಯಿಂದ ಆಸ್ತಿ ಪಡೆಯುವುದು” ಎಂದು ಲೇಬಲ್ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ, ಇದು ಕಳ್ಳತನದ ಅಡಿಯಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗುವ ಅಪರಾಧವಾಗಿದೆ.
ಹೆಚ್ಚುತ್ತಿರುವ ಲವ್ ಹಗರಣಗಳು: ಸುರಕ್ಷಿತವಾಗಿರುವುದು ಹೇಗೆ?
ಈ ನಕಲಿ ಹೂಡಿಕೆ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳು ಕ್ರಿಪ್ಟೋಕರೆನ್ಸಿಗಳು ಅಥವಾ ಸ್ಟಾಕ್‌ಗಳಿಗೆ ಬೆಲೆಗಳು ಮತ್ತು ಆದಾಯವನ್ನು ಹೆಚ್ಚಿಸಿವೆ ಎಂದು ಪೊಲೀಸರು ಹೇಳುತ್ತಾರೆ, ಆದರೆ ಮಾಹಿತಿಯು ನಕಲಿ ಮತ್ತು ಅಪರಾಧಿಗಳಿಂದ ನಿಯಂತ್ರಿಸಲ್ಪಟ್ಟಿದೆ. ಈ ಹೂಡಿಕೆ ಖಾತೆಗಳ ಧನಾತ್ಮಕ ಆದಾಯವು ಜನರು ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಉದ್ದೇಶಿಸುತ್ತದೆ ಎಂದು ವರದಿಯು ಮೂಲಗಳನ್ನು ಉಲ್ಲೇಖಿಸಿದೆ.