ಹಾವೇರಿ: ಪೊಲೀಸ್ ಸಿಬ್ಬಂದಿಯೊಬ್ಬರು ಹಾವು ಹಿಡಿಯಲು ಹೋಗಿದ್ದ ವೇಳೆ ದೊರೆತಿದ್ದ ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮನೆಯಲ್ಲಿ ಮರಿ ಮಾಡಿಸಲು ತಂದಿಟ್ಟಿದ್ದರು. ಇದೀಗ ಆ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ. ಸದ್ಯ 15 ನಾಗರ ಹಾವಿನ ಮರಿಗಳು ಬುಸುಗುಡಲು ಆರಂಭಿಸಿದ್ದು, ಕಾನ್ಸ್ಟೇಬಲ್ ರಮೇಶ ಹರಿಜನ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್
ಹಾವೇರಿಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿರುವ ರಮೇಶ ಅವರಿಗೆ ಹಾವುಗಳ ಮೇಲೆ ಅತೀವ ಪ್ರೀತಿ. ಅದರಂತೆ ವೃತ್ತಿಯ ಜೊತೆಗೆ ಅವರು ಹಾವುಗಳ ರಕ್ಷಣೆಯಲ್ಲಿ ನಿರತಂರವಾಗಿ ತೊಡಗಿಸಿಕೊಂಡಿದ್ದಾರೆ. ಹಾವು ಬಂದಿದೆ ಎಂದು ಕರೆ ಮಾಡಿದರೆ ಸಾಕು ಸ್ಥಳಕ್ಕೆ ದಾವಿಸುವ ರಮೇಶ, ಹಾವನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ.
ಇದನ್ನೂ ಓದಿ: Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು
ವಿಡಿಯೋ ವೀಕ್ಷಿಸಿ:
ಹೀಗೆ ಒಂದೊಮ್ಮೆ ಹಾವಿನ ರಕ್ಷಣೆಗೆಂದು ಹೋಗಿದ್ದ ವೇಳೆ ರಮೇಶ ಅವರಿಗೆ ನಾಗರ ಹಾವಿನ ಮೊಟ್ಟೆಗಳು ಸಿಕ್ಕಿವೆ. ಈ ಮೊಟ್ಟೆಗಳನ್ನು ಮರಿ ಮಾಡುವ ನಿಟ್ಟಿನಲ್ಲಿ ಮನೆಗೆ ಕೊಂಡೊಯ್ದು ಸೂಕ್ತ ಸ್ಥಳ ಮಾಡಿ ಅದರಲ್ಲಿಟ್ಟು ಅರೈಕೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ರಮೇಶ ಅವರ ತಮ್ಮ ಶ್ರೀಕಾಂತ ಅವರು ಕೂಡ ಸಾಥ್ ನೀಡುತ್ತಾರೆ. ಮನೆಯಲ್ಲಿ ಮರಿಮಾಡಲು ತಂದಿಟ್ಟಿದ್ದ 19 ಮೊಟ್ಟೆಗಳಲ್ಲಿ 15 ಮೊಟ್ಟೆಗಳು ಒಡೆದು ಹಾವಿನ ಮರಿಗಳು ಹೊರಬಂದು ಬುಸುಗುಡುತ್ತಿವೆ. ಪೊಲೀಸ್ ವೃತ್ತಿಯ ಜೊತೆಗೆ ಹಾವುಗಳ ರಕ್ಷಣೆಯಲ್ಲಿ ತೊಡಗಿರುವ ಕಾನಸ್ಟೇಬಲ್ ರಮೇಶ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ