Trending: ಅಪ್ಪ ಸಾರಿಗೆ ಬಸ್ ಚಾಲಕ, ಐಪಿಎಸ್ ಹುದ್ದೆಗೆ ಏರಲು ಸಜ್ಜಾಗುತ್ತಿರುವ ಮಗ!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ಬಾಲ್ಕಿ ಡಿಪೋದಲ್ಲಿ ಚಾಲಕರಾಗಿರುವ ಮಾಣಿಕ್ ರಾವ್ ಅವರ ಪುತ್ರ ಅನುರಾಗ್ ದಾರು ಅಖಿಲ ಭಾರತ ನಾಗರಿಕ ಸೇವೆಗಳ ಪ್ರತಿಷ್ಠಿತ ಪರೀಕ್ಷೆಯಲ್ಲಿ 5ನೇ ಪ್ರಯತ್ನದೊಂದಿಗೆ 569ನೇ ರ್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ.
ಟ್ರೆಂಡಿಂಗ್ ಸುದ್ದಿ: ಸಾರಿಗೆ ಬಸ್ ಚಾಲಕನ ಮಗ ನಾಗರಿಕ ಸೇವಾ ಪರೀಕ್ಷೆಯಲ್ಲಿ 569ನೇ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಐಪಿಎಸ್ (IPS) ಹುದ್ದೆಗೇರಲು ಸಜ್ಜಾಗಿದ್ದಾನೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯ ಬೀದರ್ ಬಾಲ್ಕಿ ಡಿಪೋದಲ್ಲಿ ಚಾಲಕರಾಗಿರುವ ಮಾಣಿಕ್ ರಾವ್ ಅವರ ಪುತ್ರ ಅನುರಾಗ್ ದಾರು ಅಖಿಲ ಭಾರತ ನಾಗರಿಕ ಸೇವೆಗಳ ಪ್ರತಿಷ್ಠಿತ ಪರೀಕ್ಷೆಯಲ್ಲಿ 5ನೇ ಪ್ರಯತ್ನದೊಂದಿಗೆ 569ನೇ ರ್ಯಾಂಕ್ ಪಡೆದು ಅರ್ಹತೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Viral Video: ಸಾಕುನಾಯಿ ಮತ್ತು ಕುದುರೆಯೊಂದಿಗೆ ಸ್ಕೇಟಿಂಗ್ ಮಾಡಿದ ಮಹಿಳೆ, ವಿಡಿಯೋ ವೈರಲ್
ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರದಂದು ಅನುರಾಗ್ ಮತ್ತು ಅವರ ಪೋಷಕರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಮಾತನಾಡಿದ, ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಮಾಣಿಕ್ ರಾವ್ ದಂಪತಿ ತಮ್ಮ ಮಗನಿಗೆ ಉತ್ತಮ ಶಿಕ್ಷಣ ನೀಡಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವಂತೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಆರ್ಥಿಕವಾಗಿ ಹಿಂದುಳಿದ ಜನರು ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯ ಎಂಬುದಕ್ಕೆ ಅನುರಾಗ್ ಮಾದರಿಯಾಗಿದ್ದಾರೆ ಎಂದರು.
ಇದೇ ವೇಳೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕ್‌ಕುಮಾರ್ ಮಾತನಾಡಿ, ಚಂದ್ರಪ್ಪ ಅವರು ಸಮಯಪಾಲನೆ ಮತ್ತು ಶಿಸ್ತಿಗೆ ಮಾದರಿಯಾಗಿದ್ದಾರೆ. ನಮ್ಮ ಚಾಲಕನ ಮಗನೊಬ್ಬನ ಸಾಧನೆ ಇಡೀ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಹೆಮ್ಮೆ ಮತ್ತು ಗೌರವದ ಘಳಿಗೆಯಾಗಿದೆ. ನಿಮ್ಮ ಸಾಧನೆಯಲ್ಲಿ ತಂದೆಯ ಪಾತ್ರವನ್ನು ಸ್ಮರಿಸುವಂತೆ ಅನುರಾಗ್‌ಗೆ ಸಲಹೆ ನೀಡಿದರು.
ಇದನ್ನೂ ಓದಿ: Viral Video: ಯಾವ ಭದ್ರತೆಗೂ ಕಮ್ಮಿ ಇಲ್ಲ ಈ ಆನೆ ಮರಿಯ ಸೆಕ್ಯೂರಿಟಿ! Z+ ಅಲ್ಲ Z+++ ಸೆಕ್ಯೂರಿಟಿ ಇದು
ತಮ್ಮ ಸಾಧನೆ ಬಗ್ಗೆ ಮಾತನಾಡಿದ ಅನುರಾಗ್, ನನ್ನ ಪ್ರಯತ್ನವು ಏರಿಳಿತದಿಂದ ಕೂಡಿತ್ತು. 2017ರಿಂದ ಪರೀಕ್ಷೆ ಬರೆಯುತ್ತಿದ್ದೇನೆ. ಅದರಂತೆ ಐದನೇ ಪ್ರಯತ್ನದಲ್ಲಿ ನಾಗರಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದೇನೆ ಎಂದ ಅವರು ತನ್ನ ಪೋಷಕರು ಬೆಂಬಲವನ್ನು ನೆನಪಿಸಿಕೊಂಡರು.
ನಿರ್ದೇಶಕ (ಸಿಬ್ಬಂದಿ ಮತ್ತು ವಿಜಿಲೆನ್ಸ್, ಕೆಎಸ್‌ಆರ್‌ಟಿಸಿ) ನವೀನ್ ಭಟ್ ವೈ, ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ