
Viral Video : ಪ್ರದರ್ಶನ ಮೇಳದಲ್ಲಿ, ಐಸ್ಕ್ರೀಮ್ ಪಾರ್ಲರ್ಗಳೆದುರಲ್ಲಿ, ಉತ್ಸವಗಳಲ್ಲಿ ಹೀಗೆ ಅನೇಕ ಕಡೆ ಐಸ್ಕ್ರೀಮ್ವಾಲಾಗಳ ಈ ಟ್ರಿಕ್ ನೋಡಿರುತ್ತೀರಿ. ಕೆಲವೊಮ್ಮೆ ಈ ಟ್ರಿಕ್ಗೆ ನೀವು ಮುಖಾಮುಖಿಯಾಗಿರುತ್ತೀರಿ. ಇಲ್ಲೊಬ್ಬ ಟರ್ಕಿಷ್ ಐಸ್ಕ್ರೀಮ್ವಾಲಾ ಪುಟ್ಟ ಪೋರಿಯೊಬ್ಬಳಿಗೆ ಮಜಾ ಮಾಡಲು ಹೋಗಿ ನೆಟ್ಟಿಗರಿಂದ ಸರಿಯಾಗಿ ಬಯ್ಯಿಸಿಕೊಂಡಿದ್ದಾನೆ. ಎಲ್ಲ ಮಕ್ಕಳ ಮನಸ್ಸೂ ಒಂದೇ ಥರ ಇರುವುದಿಲ್ಲ ಅಲ್ಲವಾ? ಅದರಲ್ಲೂ ಐಸ್ಕ್ರೀಮ್ ಮುಂದೆ ಇಟ್ಟುಕೊಂಡು ಹೀಗೆ ಆಟವಾಡಿಸಲು ಹೋದರೆ ಏನಾಗುತ್ತದೆ? ನೋಡಿ ವಿಡಿಯೋ.
ಸಾಮಾನ್ಯವಾಗಿ ಈ ಟರ್ಕಿಷ್ ಐಸ್ಕ್ರೀಮ್ ಟ್ರಿಕ್ ದೊಡ್ಡವರ ತಾಳ್ಮೆಯನ್ನೇ ಕಂಗೆಡಿಸುತ್ತದೆ. ಇನ್ನು ಪಂಚಪ್ರಾಣದಂತೆ ಪ್ರೀತಿಸುವ ಮಕ್ಕಳ ಮನಸ್ಸನ್ನು ಗಾಸಿ ಗೊಳಿಸದೇ ಇದ್ದೀತೆ? ಈ ವಿಡಿಯೋ ಅನ್ನು 84,000 ಜನರು ನೋಡಿದ್ದಾರೆ. ಇವರಲ್ಲಿ ಅನೇಕರ ಕೆಂಗಣ್ಣಿಗೆ ಐಸ್ಕ್ರೀಮ್ವಾಲಾ ಗುರಿಯಾಗಿದ್ದಾನೆ.
ತಮಾಷೆ ಎನ್ನುವುದು ಒಂದೋ ಎರಡೋ ಸಲ. ಅದು ಜಾಸ್ತಿಯಾದರೆ ಇನ್ನೇನಾಗುತ್ತದೆ? ಚಿಕ್ಕಮಗುವನ್ನು ಇಷ್ಟೊಂದು ಅಳಿಸುತ್ತೀರಲ್ಲ, ಇದು ತಮಾಷೆ ಅಲ್ಲವೇ ಅಲ್ಲ ಎಂದಿದ್ದಾರೆ ಕೆಲವರು. ನನ್ನ ಮಗಳೇನಾದರೂ ಆಗಿದ್ದರೆ ಐಸ್ಕ್ರೀಮ್ವಾಲಾನ ಮುಖಕ್ಕೆ ಎಸೆದೇ ಬರುತ್ತಿದ್ದಳು ಎಂದಿದ್ದಾರೆ ಇನ್ನೊಬ್ಬರು. ನನ್ನ ಅಪ್ಪ ಅಮ್ಮ ಕೂಡ ಇಷ್ಟೊಂದು ತೊಂದರೆ ಕೊಟ್ಟಿಲ್ಲ ಈತನಕ ಎಂದಿದ್ದಾರೆ ಮಗದೊಬ್ಬರು. ಇದು ಸರಿಯಲ್ಲ ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ ಮತ್ತೂ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:12 pm, Wed, 23 November 22