
Viral Video : ಪುರುಷನೊಬ್ಬ ತನಗೆ ಕಿರುಕುಳ ನೀಡಿದನೆಂದು ಆರೋಪಿಸಿದ ಮಹಿಳೆಯೊಬ್ಬಳು 20 ಸೆಕೆಂಡುಗಳ ಕಾಲ ಆತನನ್ನು 40 ಬಾರಿ ಚಪ್ಪಲಿಯಿಂದ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯವನ್ನು ಒಳಗೊಂಡ ವಿಡಿಯೋ ಈಗ ವೈರಲ್ ಆಗಿದೆ. ಕಿರುಕುಳ ನೀಡಿದ ವ್ಯಕ್ತಿ ನೆಲದ ಮೇಲೆ ತಲೆ ತಗ್ಗಿಸಿಕೊಂಡು ಕುಳಿತಿದ್ದಾನೆ. ಕೋಪಗೊಂಡ ಮಹಿಳೆ ತನ್ನೆರಡೂ ಚಪ್ಪಲಿಗಳಿಂದ ಆಕ್ರೋಶಭರಿತಳಾಗಿ ಸತತವಾಗಿ ಹೊಡೆಯುತ್ತಿದ್ದಾಳೆ. ನ್ಯೂಸ್ 18 ವರದಿ ಪ್ರಕಾರ, ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಉರಯೀ ನಗರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಮಹಿಳೆಯನ್ನು ಚುಡಾಯಿಸಿದ್ದಾನೆ ಎನ್ನುವುದು ತಿಳಿದು ಬಂದಿದೆ.
ಹೀಗೆ ಸರಿಯಾಗಿ ಥಳಿಸಿದ ನಂತರ ಈ ವ್ಯಕ್ತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಡಿಯೋ ಈತನಕ 50,000 ಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. 530 ಕ್ಕೂ ಹೆಚ್ಚು ಮರುಟ್ವೀಟ್ ಹೊಂದಿದೆ. ಅನೇಕ ನೆಟ್ಟಿಗರು, ಚುಡಾಯಿಸಿದ್ದಕ್ಕೆ ಸರಿಯಾದ ಶಿಕ್ಷೆಯಾಗಿದೆ ಈ ವ್ಯಕ್ತಿಗೆ. ಮಹಿಳೆ ಹೀಗೆ ಅವನಿಗೆ ಚಪ್ಪಲಿಯಿಂದ ಹೊಡೆದಿರುವುದು ಸರಿ ಇದೆ ಎಂದಿದ್ದಾರೆ. ಜನ್ಮದಲ್ಲಿ ಇನ್ನು ಯಾವತ್ತೂ ಈ ವ್ಯಕ್ತಿ ಇಂಥ ಕೆಲಸ ಮಾಡಲಾರ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಇಂಥ ಧೈರ್ಯ ತೋರಬೇಕು. ಆಗ ಮಾತ್ರ ಅತ್ಯಾಚಾರ, ಕಿರುಕುಳ ಸಮಸ್ಯೆಗಳಿಗೆ ಉತ್ತರ ದೊರೆಯುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಏನೇ ಆದರೂ ಈ ಮಹಿಳೆ ಹೀಗೆ ಮಾಡಬಾರದಿತ್ತು. ಕಾನೂನಿಗೆ ಈ ವಿಷಯ ಬಿಡಬೇಕು ಎಂದು ಮಗದೊಬ್ಬರು ಹೇಳಿದ್ಧಾರೆ.
ಅನುಭವಿಸಿದವರಿಗೇ ಗೊತ್ತು ಆ ಪರಿಸ್ಥಿತಿ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:29 pm, Tue, 20 September 22