Viral: ರಸ್ತೆ ಬದಿ ಪಾರ್ಕಿಂಗ್‌ ಮಾಡಿದ್ದ ಕಾರಿನ ಸನ್‌ ರೂಫ್‌ ಒಳಗೆ ದೊಪ್ಪನೆ ಬಿದ್ದ ಕಪಿರಾಯ; ಮುಂದೇನಾಯ್ತು ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 20, 2024 | 5:34 PM

ಕೋತಿಗಳು ಮಾಡುವ ಚೇಷ್ಟೆಗಳು ಅಷ್ಟಿಷ್ಟಲ್ಲ. ಅದರಲ್ಲೂ ಅವುಗಳು ತಮ್ಮ ಚೇಷ್ಟೆಗಳಿಂದ ಮನುಷ್ಯರನ್ನು ಸತಾಯಿಸಿಬಿಡುತ್ತವೆ. ಇಲ್ಲೊಂದು ಕಪಿಚೇಷ್ಟೆಯಿಂದ ಎಡವಟ್ಟಾದ ಘಟನೆ ನಡೆದಿದ್ದು, ಕಪಿರಾಯ ಕಟ್ಟಡದ ಮೇಲಿಂದ ಕೆಳಗೆ ಜಿಗಿಯುವ ಭರದಲ್ಲಿ ಕಾರಿನ ಸನ್‌ರೂಫ್‌ ಒಳಗೆ ದೊಪ್ಪನೆ ಬಿದ್ದಿದೆ. ಕೋತಿ ಬಿದ್ದಂತಹ ಭರಕ್ಕೆ ಸನ್‌ರೂಫ್‌ ಗ್ಲಾಸ್‌ ಪುಡಿ ಪುಡಿಯಾಗಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತವೆ.

ಕೋತಿಗಳು ಮಾಡುವಂತಹ ಚೇಷ್ಟೆ ತುಂಟಾಟಗಳು ತಮಾಷೆಯಾಗಿ ಕಂಡರೂ ಅವುಗಳು ಮಾಡುವ ಕೆಲವು ಕಿತಾಪತಿಗಳಿಗೆ ನಾವು ಸುಸ್ತಾಗಿ ಬಿಡುತ್ತೇವೆ. ಅವುಗಳು ಮೊಬೈಲ್‌ ಅಥವಾ ತಿನ್ನುವ ವಸ್ತುಗಳು ಕೈಯಲ್ಲಿದ್ದರೆ ಮರದಿಂದ ಛಂಗನೆ ಜಿಗಿದು ಕ್ಷಣ ಮಾತ್ರದಲ್ಲಿ ಆ ವಸ್ತುಗಳನ್ನು ಕೊಂಡೊಯ್ದು ನಮ್ಮನ್ನು ಸತಾಯಿಸುತ್ತದೆ. ಕಪಿ ಚೇಷ್ಟೆಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು, ಕೋತಿಯೊಂದು ಕಟ್ಟಡದ ಮೇಲಿಂದ ಕೆಳಗೆ ಜಿಗಿಯುವ ಭರದಲ್ಲಿ ರಸ್ತೆ ಬದಿ ಪಾರ್ಕಿಂಗ್‌ ಮಾಡಿದ್ದ ಕಾರೊಂದರ ಸನ್‌ರೂಫ್‌ ಗ್ಲಾಸ್‌ ಅನ್ನು ಪುಡಿ ಪುಡಿ ಮಾಡಿದೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತವೆ.

ಈ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದ್ದು, ಇಲ್ಲಿನ ವಿಶ್ವೇಶ್ವರ ಗಂಜ್ ಪ್ರದೇಶದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದರ ಮೇಲೆ ಕೋತಿ ಛಂಗನೆ ಜಿಗಿದ ಭರದಲ್ಲಿ ಕಾರಿನ ಸನ್‌ರೂಫ್‌ ಪುಡಿಪುಡಿಯಾಗಿದೆ. ವಾರಣಾಸಿಯಲ್ಲಿ ಮಂಗಗಳ ಹಾವಳಿ ತುಂಬಾನೇ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ವಿಶೇಷ ತಂಡ ಕೋತಿಗಳನ್ನು ಸೆರೆ ಹಿಡಿಯುವ ಕಾರ್ಯವನ್ನು ಮಾಡಿದೆ. ಹೀಗಿದ್ದರೂ ನಗರದ ಹಲವು ಪ್ರದೇಶಗಳಲ್ಲಿ ಮಂಗಗಳ ಹಾವಳಿ ಮುಂದುವರಿದಿದ್ದು, ಇಲ್ಲೊಂದು ಕಡೆ ಕೋತಿಯ ಕಾಟಕ್ಕೆ ಕಾರಿನ ಸನ್‌ ರೂಫ್‌ ಪುಡಿಪುಡಿಯಾಗಿದೆ. ಹೌದು ಕೋತಿಯೊಂದು ಕಟ್ಟಡದ ಮೇಲಿಂದ ರಸ್ತೆ ಬದಿ ಪಾರ್ಕಿಂಗ್‌ ಮಾಡಿದ್ದ ಕಾರಿನ ಮೇಲೆ ಛಂಗನೆ ಜಿಗಿದ್ದು, ಪರಿಣಾಮ ಸನ್‌ರೂಫ್‌ ಗಾಜು ಪುಡಿಯಾಗಿದೆ.

GaurangBhardwa1 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೋತಿಯೊಂದು ಕಟ್ಟಡದ ಮೇಲಿಂದ ರಸ್ತೆ ಬದಿಯಲ್ಲಿ ಪಾರ್ಕಿಂಗ್‌ ಮಾಡಿದ್ದ ಕಾರಿನ ಮೇಲೆ ಜಿಗಿಯುವಂತಹ ದೃಶ್ಯವನ್ನು ಕಾಣಬಹುದು. ಕೋತಿ ಜಿಗಿದ ರಭಸಕ್ಕೆ ಕಾರಿನ ಸನ್‌ರೂಫ್‌ ಗ್ಲಾಸ್‌ ಪುಡಿ ಪುಡಿಯಾಗಿದ್ದು, ತಕ್ಷಣವೇ ಕಪಿರಾಯ ಅಲ್ಲಿಂದ ಓಡಿ ಹೋಗಿದೆ.

ಇದನ್ನೂ ಓದಿ: ಅಕ್ಕನ ಗಂಡನ ಜತೆ ಅನೈತಿಕ ಸಂಬಂಧ, ಮದುವೆ ಮಂಟಪದಲ್ಲಿ ವಧುವಿನ ಸರಸ ಸಲ್ಲಾಪದ ವಿಡಿಯೋ ಪ್ಲೇ ಮಾಡಿದ ವರ

ನವೆಂಬರ್‌ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸನ್‌ ರೂಫ್‌ ಇರುವ ಕಾರುಗಳ ಅಗತ್ಯವಿದೆಯೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾಪಾ ಕಾರ್‌ ಮಾಲೀಕನಿಗೆ ಎಷ್ಟು ನೋವಾಗಿರಬೇಡʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ