Viral Video: ಪಕ್ಕದ ಮನೆಗೆ ಬೆಂಕಿ, ತನ್ನ ಮನೆಯನ್ನು ಆವರಿಸಿಕೊಳ್ಳುವ ಸಮಯದಲ್ಲಿ ಗುಡಿಸಲಿಗೆ ಓಡಿದ ಬಾಲಕಿ

|

Updated on: Mar 24, 2025 | 10:35 AM

ಬಾಲಿವುಡ್ ಸಿನಿಮಾಗಳಲ್ಲಿ ನಾಯಕರು ತಮ್ಮ ಜೀವನದ ಬಗ್ಗೆ ಚಿಂತಿಸದೆ ಉರಿಯುತ್ತಿರುವ ಮನೆಗಳಿಗೆ ನುಗ್ಗಿ ಅಲ್ಲಿದ್ದವರನ್ನು ರಕ್ಷಿಸುವುದನ್ನು ಕಂಡಿರಬಹುದು. ಆದರೆ ಉತ್ತರ ಪ್ರದೇಶದ ಅಂಬೇಡ್ಕರ್ ನನಗರದ ಪುಟ್ಟ ಬಾಲಕಿ ಬೇರೆಯೇ ಉದ್ದೇಶಕ್ಕಾಗಿ ಪಕ್ಕದ ಗುಡಿಸಲು ಸುಟ್ಟು ಇನ್ನೇನು ತನ್ನ ಗುಡುಸಿಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ ಎನ್ನುವ ಸಮಯದಲ್ಲಿ ಓಡಿ ಹೋಗಿ ಪುಸ್ತಕವನ್ನು ತೆಗೆದುಕೊಂಡು ಓಡಿ ಬಂದಿದ್ದಾಳೆ.

Viral Video: ಪಕ್ಕದ ಮನೆಗೆ ಬೆಂಕಿ, ತನ್ನ ಮನೆಯನ್ನು ಆವರಿಸಿಕೊಳ್ಳುವ ಸಮಯದಲ್ಲಿ ಗುಡಿಸಲಿಗೆ ಓಡಿದ ಬಾಲಕಿ
ಬಾಲಕಿ
Follow us on

ಲಕ್ನೋ, ಮಾರ್ಚ್​ 24: ಬಾಲಿವುಡ್ ಸಿನಿಮಾಗಳಲ್ಲಿ ನಾಯಕರು ತಮ್ಮ ಜೀವನದ ಬಗ್ಗೆ ಚಿಂತಿಸದೆ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಮನೆಗಳಿಗೆ ನುಗ್ಗಿ ಅಲ್ಲಿದ್ದವರನ್ನು ರಕ್ಷಿಸುವುದನ್ನು ಕಂಡಿರಬಹುದು. ಆದರೆ ಉತ್ತರ ಪ್ರದೇಶದ ಅಂಬೇಡ್ಕರ್ ನನಗರದ ಪುಟ್ಟ ಬಾಲಕಿ ಬೇರೆಯೇ ಉದ್ದೇಶಕ್ಕಾಗಿ ಪಕ್ಕದ ಗುಡಿಸಲು ಸುಟ್ಟು ಇನ್ನೇನು ತನ್ನ ಗುಡಿಸಲಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ ಎನ್ನುವ ಸಮಯದಲ್ಲಿ ಓಡಿ ಹೋಗಿ ಪುಸ್ತಕವನ್ನು ತೆಗೆದುಕೊಂಡು ಬಂದಿದ್ದಾಳೆ.

ಆಕೆ ಪುಸ್ತಕಗಳು ಸುಡದಂತೆ ಕಾಪಾಡಲು ತನ್ನ ಪ್ರಾಣ ಲೆಕ್ಕಿಸದೆ ತನ್ನ ಗುಡಿಸಲಿಗೆ ಓಡಿ ಹೋಗಿ ಪುಸ್ತಕವನ್ನು ಎತ್ತಿಕೊಂಡು ಬಂದಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆಕೆಯ ಗುಡುಸಿಲಿನ ಪಕ್ಕದ ಗುಡಿಸಿಲು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದನ್ನು ಕಾಣಬಹುದು. ಅಧಿಕಾರಿಗಳು ಬೆಂಕಿಯನ್ನು ನಂದಿಸಲು ನೀರಿಗಾಗಿ ಹುಡುಕಾಡುತ್ತಿದ್ದಾರೆ.

ಆಕೆಯ ಚೀಲದಲ್ಲಿ ಪುಸ್ತಕಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ, ಇದು ಓದಿನ ಬಗ್ಗೆ ಆಕೆಗಿರುವ ಗೌರವ ಶ್ರದ್ಧೆಯನ್ನು ಸೂಚಿಸುತ್ತದೆ. ಆಕೆ ಹತ್ತಿರದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ನಾನು ಅಲ್ಲಿಗೆ ಹೋಗಿ ನನ್ನ ಚೀಲವನ್ನು ಹೊರತರದಿದ್ದರೆ ನನ್ನ ಪುಸ್ತಕಗಳು ಮತ್ತು ಪ್ರತಿಗಳು ಸುಟ್ಟುಹೋಗುತ್ತಿದ್ದವು. ನಾನು ನನ್ನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನನ್ಯ ಹೇಳಿದ್ದಾಳೆ.

ಈ ವಿಡಿಯೋವನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹಂಚಿಕೊಂಡಿದ್ದು, ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಆಡಳಿತ ಅಧಿಕಾರಿಯೊಬ್ಬರು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಜನರ ಗುಡಿಸಲುಗಳನ್ನು ಕೆಡವುತ್ತಿದ್ದಾರೆ ಮತ್ತು ಒಬ್ಬ ಹುಡುಗಿ ತನ್ನ ಪುಸ್ತಕಗಳನ್ನು ಉಳಿಸಿಕೊಳ್ಳಲು ಓಡುವಂತೆ ಒತ್ತಾಯಿಸಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಹೇಳುತ್ತಿರುವ ಬಿಜೆಪಿಯವರೇ ಇವರು ಎಂದು ಬರೆದಿದ್ದಾರೆ.

ಮತ್ತಷ್ಟು ಓದಿ: Video: ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಅಗ್ನಿ ಅವಘಡ

ಅಂಬೇಡ್ಕರ್ ನಗರ ಜಿಲ್ಲೆಯ ಅರೈ ಗ್ರಾಮದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಅನನ್ಯಾ ಅವರ ಹುಲ್ಲಿನ ಗುಡಿಸಲು ಬೆಂಕಿಗೆ ಆಹುತಿಯಾಗಿತ್ತು ಎಂದು ವರದಿಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಬುಲ್ಡೋಜರ್‌ಗಳ ಸಹಾಯದಿಂದ ಅನೇಕ ಗುಡಿಸಲುಗಳನ್ನು ಕೆಡವಿದ್ದರು.
ಸ್ಥಳೀಯ ಎಸ್‌ಪಿ ನಾಯಕರು ಬಾಲಕಿಯನ್ನು ಉತ್ತಮ ಶಾಲೆಗೆ ಸೇರಿಸುವುದಾಗಿ ಮತ್ತು ಆಕೆಯ ಅಧ್ಯಯನದ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಹೇಳಿದರು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:30 am, Mon, 24 March 25