Viral: ಹುಟ್ಟು-ಸಾವು ಬಲ್ಲವರ್ಯಾರು, ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ

|

Updated on: Mar 23, 2025 | 9:18 AM

ಹುಟ್ಟು-ಸಾವು ಬಲ್ಲವರ್ಯಾರು, ಹುಟ್ಟು ಹೇಗೆ ಅನಿಶ್ಚಿತವೋ ಸಾವು ಕೂಡ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವ್ಯಾಯಾಮ ಮಾಡುತ್ತಾ ಕುಸಿದುಬಿದ್ದವರಿದ್ದಾರೆ, ವೇದಿಕೆ ಮೇಲೆ ನೃತ್ಯ ಮಾಡುತ್ತಾ ಪ್ರಾಣ ಬಿಟ್ಟವರಿದ್ದಾರೆ. ಹಾಗೆಯೇ ಹಾಡು ಹಾಡುತ್ತಾ, ಮಲಗಿದಲ್ಲಿಯೇ ಪ್ರಾಣ ಕಳೆದುಕೊಂಡವರೂ ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಸಾವು ಸಂಭವಿಸಲು ಕಾಯಿಲೆಗಳೇ ಇರಬೇಕೆಂದೇನಿಲ್ಲ.

Viral: ಹುಟ್ಟು-ಸಾವು ಬಲ್ಲವರ್ಯಾರು, ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ
ಸಾವು
Follow us on

ಬುಲಂದ್​ಶಹರ್, ಮಾರ್ಚ್​ 23: ಹುಟ್ಟು-ಸಾವು ಬಲ್ಲವರ್ಯಾರು, ಹುಟ್ಟು ಹೇಗೆ ಅನಿಶ್ಚಿತವೋ ಸಾವು ಕೂಡ ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವ್ಯಾಯಾಮ ಮಾಡುತ್ತಾ ಕುಸಿದುಬಿದ್ದವರಿದ್ದಾರೆ, ವೇದಿಕೆ ಮೇಲೆ ನೃತ್ಯ ಮಾಡುತ್ತಾ ಪ್ರಾಣ ಬಿಟ್ಟವರಿದ್ದಾರೆ. ಹಾಗೆಯೇ ಹಾಡು ಹಾಡುತ್ತಾ, ಮಲಗಿದಲ್ಲಿಯೇ ಪ್ರಾಣ ಕಳೆದುಕೊಂಡವರೂ ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಸಾವು ಸಂಭವಿಸಲು ಕಾಯಿಲೆಗಳೇ ಇರಬೇಕೆಂದೇನಿಲ್ಲ.

ಉತ್ತರ ಪ್ರದೇಶದ ಬುಲಂದ್​ಶೆಹರ್​ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ.ರಸ್ತೆಯಲ್ಲಿ ನಡೆಯುತ್ತಿದ್ದ ವ್ಯಕ್ತಿಯೊಬ್ಬ ಹಠಾತ್ತನೆ ಕುಸಿದು ಬೀಳುತ್ತಿರುವುದನ್ನು ಕಾಣಬಹುದು. ವರದಿಗಳು ಅವರಿಗೆ ಹಠಾತ್ತನೆ ಹೃದಯಾಘಾತವಾಗಿದೆ ಎಂಬುದನ್ನು ಸೂಚಿಸುತ್ತವೆ.

ವೈರಲ್ ವೀಡಿಯೊದಲ್ಲಿ ದುರಂತಕ್ಕೆ ಕೆಲವೇ ಸೆಕೆಂಡುಗಳ ಮೊದಲು ಅವರು ಸಾಮಾನ್ಯರಂತೆ ನಡೆದುಕೊಂಡು ಬರುತ್ತಿದ್ದರು, ಅಸಹಜವೆನಿಸುವಂಥದ್ದು ಏನೂ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಸ್ಥಳೀಯರು ಸಹಾಯ ಮಾಡಲು ಧಾವಿಸಿದರು, ಆದರೆ ಅಷ್ಟರೊಳಗೆ ಪ್ರಾಣಪಕ್ಷಿ ಹಾರಿ ಹೋಗಿತ್ತು.

ನಿಮಗೆ ಎದೆ ನೋವು ಕಾಣಿಸಿಕೊಳ್ಳಬೇಕೆಂದೇನಿಲ್ಲ. ಆದರೂ 6 ತಿಂಗಳಕ್ಕೊಮ್ಮೆಯಾದರೂ ಸಂಪೂರ್ಣ ದೇಹದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ