ಉತ್ತರ ಪ್ರದೇಶ: ಪತಿ ತ್ರಿವಳಿ ತಲಾಖ್ ನೀಡಿದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದ ಪತಿ ಒಂದು ಸಣ್ಣ ಕಾರಣಕ್ಕೆ ತ್ರಿವಳಿ ತಲಾಖ್ ನೀಡಿ ಬಿಟ್ಟು ಹೋಗಿದ್ದರಿಂದ ಮನನೊಂದಿದ್ದ ಮಹಿಳೆ. ಇದೀಗ ಹಿಂದು ಯುವಕನೊಂದಿಗೆ ದೇವಾಲಯವೊಂದರಲ್ಲಿ ಸಪ್ತಪದಿ ತುಳಿದಿದ್ದಾಳೆ. ಇದೀಗ ರುಬಿನಾದಿಂದ ಪ್ರೀತಿ ಆಗಿ ಹೆಸರನ್ನೂ ಕೂಡ ಬದಲಾಯಿಸಿಕೊಂಡಿದ್ದಾಳೆ.
ಉತ್ತರಾಖಂಡದ ಹಲ್ದ್ವಾನಿ ನಿವಾಸಿಯ ಜೊತೆ ರುಬಿನಾ ಪ್ರೇಮ ಸಂಬಂಧ ಹೊಂದಿದ್ದಳು. ಸುಮಾರು ಒಂಬತ್ತು ವರ್ಷಗಳ ಹಿಂದೆ ಇವರಿಬ್ಬರು ವಿವಾಹವಾಗಿದ್ದರು. ಮದುವೆಯಾದ ಕೆಲವು ವರ್ಷಗಳ ನಂತರ ದಂಪತಿಗಳ ನಡುವೆ ಜಗಳ ಪ್ರಾರಂಭವಾಯಿತು. ವರದಿಗಳ ಪ್ರಕಾರ ಆಕೆಯ ಪತಿ ಆಕೆಯನ್ನು ಥಳಿಸುತ್ತಿದ್ದ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಂದು ವಾರದ ಹಿಂದೆ, ಪತಿಯ ಜೊತೆ ಮತ್ತೆ ಜಗಳವಾಗಿದೆ, ನಂತರ ಆಕೆಯ ಪತಿ ಆಕೆಯ ಮೇಲೆ ಹಲ್ಲೆ ನಡೆಸಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ.
ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ
ಬಳಿಕ ಬರೇಲಿಯ ಹೊರವಲಯದಲ್ಲಿರುವ ನವಾಬ್‌ಗಂಜ್‌ನ ನಿವಾಸಿ ಪ್ರಮೋದ್ ಕಶ್ಯಪ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ರುಬೀನಾ ಆತನನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ. ಇದರಂತೆ ಮಥುರಾ ಮೂಲದ ರುಬೀನಾ ಮತ್ತು ಪ್ರಮೋದ್ ಬರೇಲಿಗೆ ಹೋಗಿ ಹಿಂದೂ ಸಂಪ್ರದಾಯಗಳ ಮೂಲಕ ಮದುವೆಯಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ