
Viral Video : ಆಟೋರಿಕ್ಷಾ ತುಂಬಿ ತುಳುಕುತ್ತಿರುವ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಆದರೆ ಈ ವಿಡಿಯೋ ಎಷ್ಟು ಅಪಾಯಕಾರಿಯಾಗಿದೆ ನೋಡಿ. ಟ್ವಿಟರ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಯಾರನ್ನೂ ಆಘಾತಕ್ಕೆ ತಳ್ಳುವಂತಿದೆ. ಉತ್ತರ ಪ್ರದೇಶದ ಬರೇಲಿದಲ್ಲಿ ಸೆರೆಹಿಡಿಯಲಾದ ದೃಶ್ಯವಿದು. ಆಟೋ ಮೇಲೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾನೆ ಈ ಡ್ರೈವರ್. ‘ಈ ಆಟೋ ಶುಕ್ರವಾರದಂದು ಆರ್ಟಿಒ, ನಕಾಟಿಯಾ ಪೊಲೀಸ್ ಔಟ್ಪೋಸ್ಟ್ನ ಕಚೇರಿಯನ್ನು ದಾಟಿದೆ. ಆದರೆ ಪೊಲೀಸರು ನಿದ್ರಿಸುತ್ತಿದ್ದರೋ ಏನೋ’ ಎಂದು ಈ ಪೋಸ್ಟ್ನಲ್ಲಿ ಬರೆಯಲಾಗಿದೆ.
ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಒಳಗಾಗಿದೆ. ‘ಇಂಥ ಬೇಜವಾಬ್ದಾರ ಚಾಲಕನೊಂದಿಗೆ ಅದು ಹೇಗೆ ತಮ್ಮ ಮಕ್ಕಳನ್ನು ಕಳಿಸುತ್ತಾರೋ?’ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ನಂತರ ಪೋಸ್ಟ್ ಗಮನಿಸಿದ ಬರೇಲಿ ಪೊಲೀಸರು, ಆಟೋ ಚಾಲಕನಿಗೆ ದಂಡ ವಿಧಿಸಿದ್ದಾರೆ. ನಿಯಮಗಳ ಪ್ರಕಾರ ಕಾನೂನು ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:24 pm, Mon, 29 August 22