ಬಿಹಾರದ 70 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಸಾವಿನ ನಂತರ 25 ವರ್ಷದ ಯುವತಿಯೊಂದಿಗೆ ಮರುಮದುವೆ ಮಾಡಿಕೊಂಡಿರುವ ಘಟನೆ ಗಯಾ ಜಿಲ್ಲೆಯ ಬೈದಾ ಗ್ರಾಮದಲ್ಲಿ ನಡೆದಿದೆ. ಮೊಹಮ್ಮದ್ ಸಲೀಮುಲ್ಲಾ ನೂರಾನಿ(70) ಹಮ್ಜಾಪುರದ ಇಸ್ಲಾಂನಗರ ನಿವಾಸಿ ರೇಷ್ಮಾ ಪರ್ವೀನ್(25)ಅವರನ್ನು ವಿವಾಹವಾಗಿದ್ದಾರೆ. ವೃದ್ಧ ರೈತನಾಗಿದ್ದು, ಆತನ ಮೊದಲ ಹೆಂಡತಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು.
ತನ್ನ ಮಕ್ಕಳಿಗೆ ಮದುವೆ ಮಾಡಿದ ನಂತರ ನಾನು ಒಂಟಿ ಜೀವನ ನಡೆಸುತ್ತಿದ್ದೇನೆ. ನನಗೆ ಆಸರೆಯಾಗಲು ಯಾರೂ ಇರಲಿಲ್ಲ. ಅದೇ ಸಮಯದಲ್ಲಿ, ಸ್ಥಳೀಯ ಜನರು ವಧು ರೇಷ್ಮಾ ಪರ್ವೀನ್ ಅವರನ್ನ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮುಂದಿಟ್ಟರು. ಅದಕ್ಕೊಪ್ಪಿ ಮದುವೆಯಾದೆ ಎಂದು ಮೊಹಮ್ಮದ್ ಸಲೀಮುಲ್ಲಾ ಹೇಳಿಕೊಂಡಿದ್ದಾರೆ.
गया बिहार में 70 वर्षीय मो कलीमुल्लाह नूरानी ने 25 वर्षीय रेशमा परवीन के साथ शादी रचायी है।
छह बेटियां व एक बेटे वाले कलीमुल्लाह पत्नी की मौत के बाद अकेला महसूस कर रहे थे
अब अकेलापन दूर हो गया है।😀 pic.twitter.com/HCcdeBjQXE
— Anurag Chaddha (@AnuragChaddha) July 25, 2024
ಇದನ್ನೂ ಓದಿ: ಫೇಸ್ ಬುಕ್ ಲವ್; 2 ಮಕ್ಕಳ ತಂದೆಯಾಗಿರುವ ಪ್ರಿಯಕರನ ಭೇಟಿಗೆ ಭಾರತಕ್ಕೆ ಓಡೋಡಿ ಬಂದ ಪಾಕಿಸ್ತಾನಿ ಯುವತಿ
ದಂಪತಿಗಳು ಇಸ್ಲಾಮಿಕ್ ಆಚರಣೆಗಳ ಪ್ರಕಾರ ವಿವಾಹವಾಗಿದ್ದು, ವದು-ವರ ಇಬ್ಬರೂ ಸ್ವ ಇಚ್ಚೆಯಿಂದಲೇ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ವಿವಾಹದ ನಂತರದ ಇವರ ಸಂದರ್ಶನದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. “ಅಕ್ರಮ ಸಂಬಂಧಗಳನ್ನು ಹೊಂದುವುದಕ್ಕಿಂತ ಇದು ಉತ್ತಮ, ಅವರು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ” ಎಂದು ಒಬ್ಬರು ಕಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Sun, 28 July 24