Viral Video: ಅರೇ.. ಹಾವಿಗೂ ಹಾರ್ಟ್ ಅಟ್ಯಾಕ್ ಆಗುತ್ತಾ? ಇಲ್ಲಿದೆ ನೋಡಿ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನೋಡುಗರಿಗೆ ಅಚ್ಚರಿಯನ್ನು ಉಂಟು ಮಾಡುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ನಾಗರ ಹಾವೊಂದು ಹೃದಯಾಘಾತಕ್ಕೆ ತುತ್ತಾಗಿ ನರಳಾಡಿದೆ. ಈ ದೃಶ್ಯವನ್ನು ಕಂಡು ಅರೇ ಹಾವುಗಳಿಗೂ ಹಾರ್ಟ್ ಅಟ್ಯಾಕ್ ಆಗುತ್ತಾ ಅಂತ ನೆಟ್ಟಿಗರಲ್ಲಿ ಪ್ರಶ್ನೆ ಮೂಡಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿದ್ದು, ಹಾರ್ಟ್ ಅಟ್ಯಾಕ್‌ನಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಪದ್ಧತಿ ಮತ್ತು ಒತ್ತಡವು ಹೃದಯಾಘಾತ ಸಾಧ್ಯತೆಯನ್ನು ಹೆಚ್ಚು ಮಾಡಿದೆ ಅಂತಾನೇ ಹೇಳಬಹುದು. ಆದ್ರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು, ನಾಗರ ಹಾವೊಂದು ಹೃದಯಾಘಾತಕ್ಕೆ ತುತ್ತಾಗಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅರೇ ಪ್ರಾಣಿಗಳಿಗೆ, ಹಾವುಗಳಿಗೂ ಕೂಡಾ ಹಾರ್ಟ್ ಅಟ್ಯಾಕ್ ಆಗುತ್ತಾ ಅಂತ ನೆಟ್ಟಿಗರಲ್ಲಿ ಪ್ರಶ್ನೆ ಮೂಡಿದೆ.
ಹಾವೇರಿಯ ಸ್ನೇಕ್ ನಾಗು (snake..lover..official) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೃದಯಾಘಾತದಿಂದ ಸತ್ತ ನಾಗರ ಹಾವು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನಾಗರ ಹಾವೊಂದು ನೆಲದ ಮೇಲೆ ಬಿದ್ದು ನರಳಾಡುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲಿದ್ದ ಒಬ್ರು ಹಾರ್ಟ್ ಅಟ್ಯಾಕ್ ಆದಾಗ ಹಾವು ಅಥವಾ ಇತರೆ ಯಾವುದೇ ಪ್ರಾಣಿಯಾದ್ರೂ ಇದೇ ರೀತಿ ನರಳಾಡೋದು ಎಂದು ವಿವರಣೆಯನ್ನು ನೀಡಿದ್ದಾರೆ.
View this post on Instagram
ಇದನ್ನೂ ಓದಿ: ಫೇಸ್ ಬುಕ್ ಲವ್; 2 ಮಕ್ಕಳ ತಂದೆಯಾಗಿರುವ ಪ್ರಿಯಕರನ ಭೇಟಿಗೆ ಭಾರತಕ್ಕೆ ಓಡೋಡಿ ಬಂದ ಪಾಕಿಸ್ತಾನಿ ಯುವತಿ
ಜುಲೈ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಹೆಚ್ಚಿನವರು ʼಹಾವುಗಳಿಗೂ ಹಾರ್ಟ್ ಅಟ್ಯಾಕ್ ಆಗೋದು ಉಂಟೆ, ಇದೆಲ್ಲಾ ಸುಳ್ಳುʼ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ʼಬಹುಶಃ ಸುಮಾರು ದಿನಗಳಿಂದ ಆಹಾರ ಸಿಗದೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿರಬಹುದುʼ ಎಂದು ಹೇಳಿದ್ರೆ ಇನ್ನೊಬ್ಬ ಬಳಕೆದಾರರು ʼಇದೆಲ್ಲಾ ಸುಳ್ಳು, ವಾಹನ ಗುದ್ದಿ ಪೆಟ್ಟಾಗಿ ಪಾಪ ಹಾವು ನರಳಾಡುತ್ತಿದೆʼ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ