Find Differences: ನಿಮ್ಮ ಮೆದುಳಿಗೆ ಕಣ್ಣಿಗೆ ಕಸರತ್ತು ಕೊಡಲು ನಾವು ಮತ್ತೊಂದು ಹೊಸ ಸವಾಲಿನೊಂದಿಗೆ ಬಂದಿದ್ದೇವೆ. ಇದೀಗ ವೈರಲ್ ಆಗುತ್ತಿರುವ ಈ ಚಿತ್ರವನ್ನು ಗಮನಿಸಿ. ವಿವಿಧ ಬಣ್ಣದ, ಗಾತ್ರದ, ಬಗೆಬಗೆಯ ಕುಂಬಳಕಾಯಿಗಳನ್ನು ಹೊತ್ತ ಬಂಡಿ ಇಲ್ಲಿದೆ. ಇದನ್ನು ಒಂದಿಷ್ಟು ಪ್ರಾಣಿಗಳು ಸುತ್ತುವರೆದಿವೆ. ಈ ಮೇಲಿನ ಚಿತ್ರವನ್ನು ಮತ್ತು ಕೆಳಗಿನ ಚಿತ್ರವನ್ನು ಗಮನಿಸಿ ಒಟ್ಟು 5 ವ್ಯತ್ಯಾಸಗಳನ್ನು ಗುರುತಿಸುವ ಕೆಲಸ ನಿಮ್ಮದು. ಫೇಸ್ಬುಕ್ನ ಗೆರ್ಗೆಲಿ ಡುಡಾಸ್ ಪುಟದಲ್ಲಿ ಈ ಚಿತ್ರ ಪೋಸ್ಟ್ ಮಾಡಲಾಗಿದೆ. 500 ಜನರು ಈ ಚಿತ್ರವನ್ನು ಲೈಕ್ ಮಾಡಿದ್ದಾರೆ. ಸುಮಾರು 125 ಜನರು ರೀಪೋಸ್ಟ್ ಮಾಡಿದ್ದಾರೆ ಮತ್ತು ಸುಮಾರು 40 ಜನರು ಉತ್ತರ ನೀಡಿದ್ದಾರೆ. ನೀವೂ ಪ್ರಯತ್ನಿಸುವಿರೆ?
ಇದನ್ನೂ ಓದಿ : Viral Video: ಮುಂಬೈ ಲೋಕಲ್ ಟ್ರೇನ್; ಸ್ವಯಂಚಾಲಿತ ಬಾಗಿಲು ತೆರೆಯುವ ಮೊದಲೇ ನುಗ್ಗಿದ ಪ್ರಯಾಣಿಕರು
ಬಣ್ಣಬಣ್ಣದ, ವಿವಿಧ ಗಾತ್ರದ ಕುಂಬಳಕಾಯಿಗಳುಳ್ಳ ಈ ಎರಡು ಚಿತ್ರಗಳಲ್ಲಿ 5 ವ್ಯತ್ಯಾಸಗಳನ್ನು ನೀವು 10 ಸೆಕೆಂಡಿನಲ್ಲಿ ಕಂಡುಹಿಡಿಯಬಲ್ಲಿರಿ. ಏಕೆಂದರೆ ನಿಮ್ಮ ಕಣ್ಣುಗಳು ಅತ್ಯಂತ ಚುರುಕಾಗಿವೆ. ಈತನಕದ ಸವಾಲುಗಳಿಗಿಂದ ಇದು ಸುಲಭವೆನ್ನಿಸಬಹುದು.
ಇದು ತುಂಬಾ ಕಷ್ಟಕರವಾಗಿತ್ತು. ಆದರೂ ನಾನು 5 ವ್ಯತ್ಯಾಸಗಳನ್ನು ಕಂಡುಕೊಂಡೆ ಎಂದಿದ್ದಾರೆ ಒಬ್ಬರು. 10 ಸೆಕೆಂಡುಗಳಲ್ಲಿ ಕಂಡುಹಿಡಿಯಲು ಆಗಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ನನಗೆ ಒಂದು ಮಾತ್ರ ಸಿಕ್ಕಿತು ಎಂದಿದ್ದಾರೆ ಮತ್ತೊಬ್ಬರು. ಎರಡು ಮಾತ್ರ ಸುಲಭವಾಗಿ ಸಿಕ್ಕವು. ಇನ್ನುಳಿದವು ಸಿಗಲೇ ಇಲ್ಲ, ಬಹುಶಃ ನನ್ನ ಮೆದುಳಿವೆ ವಯಸ್ಸಾಯಿತೇನೋ ಎಂದಿದ್ದಾರೆ ಮಗದೊಬ್ಬರು. ನಿಮಗೆ ಸಾಧ್ಯವಾಯಿತೆ? ಇಲ್ಲವಾದರೆ ಈ ಕೆಳಗಿನ ಚಿತ್ರವನ್ನು ನೋಡಿ.
ಅನೇಕರಿಗೆ ಐದು ಸೆಕೆಂಡುಗಳಲ್ಲಿ ಕಂಡುಹಿಡಿಯುವುದು ದೊಡ್ಡ ಸವಾಲಾಗಿತ್ತು ಎನ್ನವುದು ತಿಳಿದುಬಂದಿದೆ. ತುಂಬಾ ಸೂಕ್ಷ್ಮವಾದ ವ್ಯತ್ಯಾಸಗಳು ಇರುವುದರಿಂದ ಇದು ಎಳೆಯ ಕಣ್ಣುಗಳಿಗೆ ಮಾತ್ರ ನಿಲುಕುವಂತಿದೆ ಎಂದಿದ್ದಾರೆ ಕೆಲವರು.
ನಿಮಗೆ ಈ ವ್ಯತ್ಯಾಸಗಳನ್ನು ಗುರುತಿಸಲು ಸುಲಭವಾಗಿ ಸಾಧ್ಯವಾಯಿತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ