Brain Teaser : ನೀವೆಲ್ಲ ವಾರಾಂತ್ಯದ ಮೂಡ್ನಲ್ಲಿದ್ದೀರಿ. ಆದರೂ ವಾರಾಂತ್ಯದಲ್ಲಿ ಮಾಡಬೇಕಾದ ಮನೆಕೆಲಸಗಳು, ವೈಯಕ್ತಿಕ ಕೆಲಸಗಳು ಕೈಮಾಡಿ ಕರೆಯುತ್ತಿವೆ. ಆದರೆ ವಿಶ್ರಾಂತಿ ಬೇಕು ಎಂದು ಮನಸ್ಸು ಹೇಳುತ್ತಿದೆ. ಹಾಗೆಂದು ಸುಮ್ಮನೆ ಮಲಗಲಾದೀತೆ? ಕೆಲಸಗಳನ್ನು ಮಾಡಲೇಬೇಕು. ಈ ಕೆಲಸಗಳಿಗೆ ತೊಡಗುವ ಮೊದಲು ನಿಮ್ಮ ಮೆದುಳಿಗೆ ಅಂಟಿಕೊಂಡ ಜಿಡ್ಡನ್ನು ಬಿಡಿಸಬೇಕಲ್ಲ? ಅದಕ್ಕಾಗಿಯೇ ಇದೀಗ ಮತ್ತೊಂದು ಹೊಸ ಚಟುವಟಿಕೆಯನ್ನು ನಿಮಗಾಗಿ ತರಲಾಗಿದೆ. ರೆಡ್ಡಿಟ್ನಲ್ಲಿ (Reddit) ಹಂಚಿಕೊಳ್ಳಲಾದ ಈ ಮೋಜಿನ ಕಾಮಿಕ್ ಸಾಮಾಜಿಕ ಜಾಲತಾಣಿಗರನ್ನು ಭಾರೀ ರಂಜಿಸುತ್ತಿದೆ. ಬಿರುಬೇಸಿಗೆಯ ವಾತಾವರಣದಲ್ಲಿ ರೆಸಾರ್ಟ್ ಒಂದರಲ್ಲಿ ಸರ್ವರ್ ಬೆಕ್ಕೇಶ್ವರಿ ಅತಿಥಿಗಳಿಗೆ ಐಸ್ ಹಾಕಿದ ಚಹಾ ಕೊಡುತ್ತಿದ್ದಾಳೆ. ಹಾಗೆಂದು ಈ ಕೆಲಸದಲ್ಲಷ್ಟೇ ಈಕೆ ಪರಿಣತೆಯಲ್ಲ!
ಇದನ್ನೂ ಓದಿ : Viral Video: ಮದುವೆಯಲ್ಲಿ ವಿಡಿಯೋಗ್ರಾಫರ್ ನೃತ್ಯ; ಕ್ಯಾ ಬಾತ್ ಹೈ ಎಂದ ನೆಟ್ಟಿಗರು
ಮ್ಯೂಸಿಯಂನಿಂದ ಕದ್ದ ಕೆಲ ವಜ್ರಗಳನ್ನು ಬೆಕ್ಕೇಶ್ವರಿ ತನ್ನ ಬಳಿ ಬಚ್ಚಿಟ್ಟುಕೊಂಡಿದ್ದಾಳೆ. ಬಂದ ಅತಿಥಿಗಳಿಗೆ ಅವುಗಳನ್ನು ಮಾರಿದ್ದಾಳೆ ಕೂಡ. ಆದರೆ ಅವುಗಳನ್ನು ತಲುಪಿಸಲು ಕಾಯುತ್ತಿದ್ದಾಳೆ. ಈ ವಿಷಯ ಪತ್ತೇದಾರಿ ನರಿಯಣ್ಣನಿಗೆ ಗೊತ್ತಾಗಿದೆ. ಆದರೆ ವಜ್ರಗಳನ್ನು ಎಲ್ಲಿ ಅಡಗಿಸಿ ಇಟ್ಟುಕೊಂಡಿದ್ದಾಳೆನ್ನುವುದು ಮಾತ್ರ ಅವನಿಗೆ ತಿಳಿಯುತ್ತಿಲ್ಲ. ಹಾಗಾಗಿ ನಿಮ್ಮ ಕೆಲಸ ಇದೀಗ ನರಿಯಣ್ಣನಿಗೆ ಸಹಾಯ ಮಾಡುವುದು.
After stealing diamonds from a Paris Museum, Cassandra Cat fled to an exclusive tropical resort. When Slylock Fox found her, the felonious feline was posing as a server about to deliver the stolen jewels to a buyer. How did Slylock know which glass the diamonds were hidden in?
by u/slylockbot in comics
ಈ ಪೋಸ್ಟ್ ಅನ್ನು ಸುಮಾರು ಒಂದು ವರ್ಷದ ಹಿಂದೆ ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ನರಿಯಣ್ಣನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ಬೆಕ್ಕೇಶ್ವರಿ ವಜ್ರಗಳನ್ನು ಪ್ಯಾರೀಸ್ ಮ್ಯೂಸಿಯಂನಿಂದ ಕದ್ದಮೇಲೆ ಗ್ಲಾಸ್ನಲ್ಲಿ ಅಡಗಿಸಿ ಇಟ್ಟುಕೊಂಡಿದ್ದಾಳೆ ಎಂದು ಕೆಲವರು. ಆದರೆ ಯಾವ ಗ್ಲಾಸ್ ಎನ್ನುವುದನ್ನು ಪತ್ತೆ ಹಚ್ಚಬೇಕಲ್ಲ? ಐಸ್ಫ್ಲೋಟ್? ಎಂದು ಒಬ್ಬರು ಕೇಳಿದ್ದಾರೆ. ನಾನು ಬಹಳ ಬುದ್ಧಿವಂತ, ಆದರೆ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುವಲ್ಲಿ ಸೋತೆ ಎಂದಿದ್ದಾರೆ ಇನ್ನೊಬ್ಬರು. ಅನೇಕರು ಐಸ್ನೊಳಗೆ ವಜ್ರಗಳಿದ್ದು ಅದು ಗ್ಲಾಸಿನೊಳಗೆ ತೇಲುತ್ತಿದೆ ಎಂದಿದ್ದಾರೆ ಹಲವಾರು ಜನ. ನೀವು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ