ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡಿದ ಕಂಪನಿ

ಕಂಪನಿಯೊಂದು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಸಮಯದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಿರುವ ಪೋಸ್ಟ್ ವೈರಲ್ ಆಗಿದೆ. ಇದು ಕೇವಲ ರಜೆಯಾಗಿರದೇ, ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ. ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್ ಕಾರ್ಪೊರೇಟ್ ಜಗತ್ತಿನಲ್ಲಿ ಉತ್ತಮ ಕೆಲಸದ ಸ್ಥಳ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದೆ. ಕರ್ನಾಟಕ ಸರ್ಕಾರ ಮುಟ್ಟಿನ ರಜೆಯನ್ನು ಜಾರಿಗೆ ತಂದ ಬೆನ್ನಲ್ಲೇ ಈ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ.

ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡಿದ ಕಂಪನಿ
ಸಾಂದರ್ಭಿಕ ಚಿತ್ರ

Updated on: Nov 18, 2025 | 10:09 AM

ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ವೈರಲ್​​ ಆಗಿರುವ ಅದೆಷ್ಟೋ ಪೋಸ್ಟ್​​​ಗಳಲ್ಲಿ ಕಂಪನಿಯ ವ್ಯವಸ್ಥೆಗಳ ಬಗ್ಗೆ ಅಥವಾ ಅಲ್ಲಿನ ಜನರ ಬಗ್ಗೆ ದೂರುವ ಪೋಸ್ಟ್​​​ಗಳು ವೈರಲ್​​ ಆಗುತ್ತಿತ್ತು. ಆದರೆ ಇದೀಗ ಇಲ್ಲೊಂದು ವೈರಲ್ ಆಗಿರುವ ಪೋಸ್ಟ್​​​​​ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಮಹಿಳೆಯರ ಮುಟ್ಟಿನ (menstrual leave policy) ಬಗ್ಗೆ ಒಂದು ಕಂಪನಿಯೂ ಎಷ್ಟೊಂದು ಕಾಳಜಿ ವಹಿಸುತ್ತದೆ ಎಂಬುದಕ್ಕೆ ಈ ಪೋಸ್ಟ್​​​​ ಸಾಕ್ಷಿಯಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರ ಮುಟ್ಟಿನ ರಜೆಯನ್ನು ನೀಡಬೇಕು ಎಂದು ಆದೇಶ ನೀಡಿದೆ. ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂಬ ಉದ್ದೇಶದಿಂದ ಈ ನೀತಿಯನ್ನು ಜಾರಿಗೆ ಮಾಡಲಾಗಿದೆ. ಇದೀಗ ಇಲ್ಲಿ ವೈರಲ್​ ಆಗಿರುವ ಪೋಸ್ಟ್​​​ನಲ್ಲೂ​​​ ಕೂಡ ಮಹಿಳೆಯ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಈ ಪೋಸ್ಟ್​​ನ್ನು ಅರ್ಚನಾ ಶರ್ಮಾ ಎಂಬುವವರು ಲಿಂಕ್ಡ್‌ಇನ್​​ನಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯ ಸಂಸ್ಥಾಪಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಬಗ್ಗೆ ಹೆಮ್ಮೆಯಿಂದ ಇಲ್ಲಿ ಹೇಳಿಕೊಂಡಿದ್ದಾರೆ. ಉತ್ತಮ ಕೆಲಸದ ಸ್ಥಳಗಳಲ್ಲಿ ಒಳ್ಳೆಯ ಸವಲತ್ತು ಹಾಗೂ ನೀತಿಗಳು ಹೇಗಿರುತ್ತದೆ ಎಂಬುದನ್ನು ಈ ಪೋಸ್ಟ್​​ನಲ್ಲಿ ವಿವರಿಸಿದ್ದಾರೆ. ಕಂಪನಿಯ ಸಂಸ್ಥಾಪಕರು ತಮ್ಮ ಉದ್ಯೋಗಿಗಳ ವಾಟ್ಸಾಪ್​​​ ಗ್ರೂಪ್​​ನಲ್ಲಿ ಕಳಿಸಿರುವ ಸಂದೇಶದ ಸ್ಕ್ರೀನ್‌ಶಾಟ್​​ನ್ನು ಲಿಂಕ್ಡ್‌ಇನ್​​ನಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

ಸಂದೇಶದ ಸ್ಕ್ರೀನ್‌ಶಾಟ್​​​​​​ನಲ್ಲಿ ಹೀಗಿದೆ :

“ಪ್ರಿಯ ಮಹಿಳಾ ಉದ್ಯೋಗಿಗಳೇ ಮುಟ್ಟಿನ ಆರೋಗ್ಯವು ಪ್ರತಿಯೊಬ್ಬ ಮಹಿಳೆಯ ಅತ್ಯಗತ್ಯ ಭಾಗವಾಗಿದೆ. ಇಂದಿನಿಂದ, ನಮ್ಮ ಮಹಿಳಾ ಸಹೋದ್ಯೋಗಿಗಳು ತಮ್ಮ ಮುಟ್ಟಿನ ಚಕ್ರಗಳಿಗೆ ಒಳಗಾಗುತ್ತಿದ್ದರೆ, ಅವರು ವಿಶ್ರಾಂತಿ ಪಡೆಯಬಹುದು ಮತ್ತು ಮನೆಯಲ್ಲಿಯೇ ಇರಬಹುದು. ಇದನ್ನು ರಜೆ ಎಂದು ಪರಿಗಣಿಸಲಾಗುವುದಿಲ್ಲ. ಆರೋಗ್ಯ ಮತ್ತು ಯೋಗಕ್ಷೇಮವು ಎಲ್ಲಕ್ಕಿಂತ ಹೆಚ್ಚಾಗಿರುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಕಚೇರಿಯಲ್ಲಿ ಲವ್​​ ಮಾಡಿದ್ರೆ ಕೆಲಸದಿಂದ ವಜಾ! ಹೊಸ ಆದೇಶ ನೀಡಿದ ಕಂಪನಿ

ಸೋಶಿಯಲ್​ ಮೀಡಿಯಾದಲ್ಲಿ ಶ್ಲಾಘಿಸಿದ ನೆಟ್ಟಿಗರು:

ಈ ಪೋಸ್ಟ್​​​ಗೆ ಸೋಶಿಯಲ್​​​ ಮೀಡಿಯಾದಲ್ಲಿ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉದ್ಯೋಗಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಒಳ್ಳೆಯ ಕಂಪನಿಯ ಲಕ್ಷಣ, ಈ ಪೋಸ್ಟ್​​ ಇತತರಿಗೆ ಮಾದರಿ ಎಂದು ಒಬ್ಬರು ಹೇಳಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಇದು ವಿರಳ, ಇಂಥಹ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದು ಮತ್ತೊಬರು ಕಮೆಂಟ್​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ