Viral News: ಕ್ಯಾನ್ಸರ್ ರೋಗಿಯ ಅದೃಷ್ಟ ಬದಲಿಸಿದ ಲಾಟರಿ ಟಿಕೆಟ್

ಲಾಟರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೆಂಗ್ ಸೈಫನ್ "ತಮ್ಮ ಪತ್ನಿ ಡುವಾನ್‌ಪೆನ್ ಮತ್ತು ಲಾಟರಿ ಟಿಕೆಟ್ ಖರೀದಿಸಲು ಸಹಾಯ ಮಾಡಿದ 55 ವರ್ಷದ ಲಿಸಾ ಚಾವೊ ಅವರೊಂದಿಗೆ ಬಹುಮಾನದ ಹಣವನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ. ಜೊತೆಗೆ ಗೆದ್ದ ಹಣ ತನ್ನ ಕ್ಯಾನ್ಸರ್​​ ಚಿಕಿತ್ಸೆಗೂ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

Viral News: ಕ್ಯಾನ್ಸರ್ ರೋಗಿಯ ಅದೃಷ್ಟ ಬದಲಿಸಿದ ಲಾಟರಿ ಟಿಕೆಟ್
ಕ್ಯಾನ್ಸರ್ ರೋಗಿಯ ಅದೃಷ್ಟ ಬದಲಿಸಿದ ಲಾಟರಿ ಟಿಕೆಟ್

Updated on: May 02, 2024 | 3:03 PM

ಅಮೆರಿಕದ ಪೋರ್ಟ್ ಲ್ಯಾಂಡ್ ನಲ್ಲಿ ನೆಲೆಸಿರುವ 46 ವರ್ಷದ ಚೆಂಗ್ ಸೈಫಾನ್ 8 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇತ್ತೀಚಿಗಷ್ಟೇ ಲಾಟರಿಯಲ್ಲಿ ಗೆದ್ದು ಕೋಟಿ ಕೋಟಿ ಹಣ ಗಳಿಸಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಲಾಟರಿಯಲ್ಲಿ ಕೋಟಿ ಗೆದ್ದಿರುವುದು ಮಾತ್ರವಲ್ಲದೇ ಹಣವನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ. ಇದರೊಂದಿಗೆ ಚೆಂಗ್ ಮೇಲೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಗೆದ್ದ ಹಣ ತನ್ನ ಕ್ಯಾನ್ಸರ್​​ ಚಿಕಿತ್ಸೆಗೂ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಲಾಟರಿ ಪತ್ರಿಕಾಗೋಷ್ಠಿಯಲ್ಲಿ ಚೆಂಗ್ ಸೈಫನ್ ಅವರು ತಮ್ಮ ಪತ್ನಿ ಡುವಾನ್‌ಪೆನ್, ಮಿಲ್ವಾಕಿಯ 55 ವರ್ಷದ ಲಿಸಾ ಚಾವೊ ಅವರೊಂದಿಗೆ ಬಹುಮಾನದ ಹಣವನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಹೇಳಿದರು. ಏಕೆಂದರೆ ಚೆಂಗ್ ಸೈಫಾನ್ ಅವರು ಲಿಸಾ ಅವರೊಂದಿಗೆ ಲಾಟರಿ ಟಿಕೆಟ್ ಖರೀದಿಸಿದ್ದರು.

ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿ ತನ್ನ ಅದೃಷ್ಟ ಬದಲಾಗಲಿದೆ ಎಂದು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ. ಆ ವ್ಯಕ್ತಿ ಒಂದೇ ಏಟಿನಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಅವರು 1.3 ಬಿಲಿಯನ್ ಡಾಲರ್ ಹಣ ಗೆದ್ದಿದ್ದಾರೆ. ಆದ್ರೆ ಇಷ್ಟು ಹಣ ಏನು ಮಾಡ್ತಾರೆ ಅಂತ ಕೇಳಿದ್ರೆ, ತನಗೆ ಲಾಟರಿ ಖರೀದಿಸಲು ಸಹಾಯ ಮಾಡಿದ ಗೆಳತಿ ಲಿಸಾ ಜೊತೆಗೂ ಹಣ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಚೆಂಗ್ ಮೇಲೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: ಸರಳತೆಯ ಸಾಹುಕಾರ, ವಿದ್ಯಾರ್ಥಿನಿಗೆ ತನ್ನ ಆಸನ ಬಿಟ್ಟುಕೊಟ್ಟ ಬಾಗಲಕೋಟೆ ಜಿ.ಪಂ ಸಿಇಒ

ಗೆದ್ದ ಹಣದೊಂದಿಗೆ ಒರೆಗಾನ್‌ನಲ್ಲಿ ಮನೆಯೊಂದನ್ನು ಖರೀದಿಸುವುದಾಗಿ ಮತ್ತು ಲಾಟರಿ ಆಡುವುದನ್ನು ಮುಂದುವರಿಸುವುದಾಗಿ ಚೆಂಗ್ ಹೇಳಿದ್ದಾರೆ. ವರದಿಯ ಪ್ರಕಾರ,ಇದು ಅಮೆರಿಕದ ಎಂಟನೇ ದೊಡ್ಡ ಲಾಟರಿಯಾಗಿದೆ. 2022 ರಲ್ಲಿ, ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರು ಅತಿದೊಡ್ಡ ಜಾಕ್‌ಪಾಟ್ ಅನ್ನು ಗೆದ್ದಿದ್ದರು, ಇದು $2.04 ಬಿಲಿಯನ್ (170 ಶತಕೋಟಿಗಿಂತ ಹೆಚ್ಚು) ಆಗಿತ್ತು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Thu, 2 May 24