Viral Video: ಮದುವೆ ಮಂಟಪದಿಂದ ವರನನ್ನು ಒದ್ದು ಹೊರ ಹಾಕಿದ ವಧು; ವಿಡಿಯೋ ವೈರಲ್​​

ಸಾಮಾನ್ಯವಾಗಿ, ಮದುವೆ ಗಂಡು ಹೆಣ್ಣಿನ ಜೀವನದ ಸುಂದರಕ್ಷಣ. ಆದರೆ ಇಲ್ಲೊಬ್ಬಳು ಯುವತಿ ಮದುವೆ ದಿನವೇ ತನನ್ನು ಮದುವೆಯಾಗುವ ಯುವಕನಿಗೆ ಮನಬಂದಂತೆ ಥಳಿಸಿದ್ದಾಳೆ. ಅಷ್ಟಕ್ಕೂ ಆಕೆಯ ಕೋಪಕ್ಕೆ ಕಾರಣ ಏನು ಗೊತ್ತಾ? ವಿಡಿಯೋ ಇಲ್ಲಿದೆ ನೋಡಿ.

Viral Video: ಮದುವೆ ಮಂಟಪದಿಂದ ವರನನ್ನು ಒದ್ದು ಹೊರ ಹಾಕಿದ ವಧು; ವಿಡಿಯೋ ವೈರಲ್​​
ಮದುವೆ ಮಂಟಪದಿಂದ ವರನನ್ನು ಒದ್ದು ಹೊರ ಹಾಕಿದ ವಧು
Follow us
ಅಕ್ಷತಾ ವರ್ಕಾಡಿ
|

Updated on:May 08, 2024 | 11:28 AM

ಮದುವೆಗೆ ಸಂಬಂಧಿಸಿದ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದೀಗ ಅಂತದ್ದೇ ವಿಡಿಯೋವೊಂದು ವೈರಲ್​ ಆಗಿದ್ದು, ವರನ ಪಾಡು ಕಂಡು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆ ಮಂಟಪದಲ್ಲಿ ಕೋಪಗೊಂಡ ವಧು ಕೋಪ ತಾಳಲಾರದೇ ವರನನ್ನು ಮದುವೆ ಮಂಟಪದಿಂದಲೇ ಒದ್ದು ಹೊರಹಾಕಿದ್ದಾಳೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಸಾಮಾನ್ಯವಾಗಿ, ಮದುವೆ ಗಂಡು ಹೆಣ್ಣಿನ ಜೀವನದ ಸುಂದರಕ್ಷಣ. ಆದರೆ ಇಲ್ಲೊಬ್ಬಳು ಯುವತಿ ಮದುವೆ ದಿನವೇ ತನನ್ನು ಮದುವೆಯಾಗುವ ಯುವಕನಿಗೆ ಮನಬಂದಂತೆ ಥಳಿಸಿದ್ದಾಳೆ. ಅಷ್ಟಕ್ಕೂ ಆಕೆಯ ಕೋಪಕ್ಕೆ ಕಾರಣ ಏನು ಗೊತ್ತಾ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಸರಳತೆಯ ಸಾಹುಕಾರ, ವಿದ್ಯಾರ್ಥಿನಿಗೆ ತನ್ನ ಆಸನ ಬಿಟ್ಟುಕೊಟ್ಟ ಬಾಗಲಕೋಟೆ ಜಿ.ಪಂ ಸಿಇಒ

ಮಂಟಪದಲ್ಲಿ  ನಡೆದಿದ್ದೇನು?

ಮದುವೆ ಸಮಾರಂಭದಲ್ಲಿ ವರ ವಧುವಿಗೆ ರಸಗುಲ್ಲಾ ತಿನ್ನಿಸಲು ಯತ್ನಿಸಿದ್ದಾನೆ. ಅದಕ್ಕೆ ವಧು ಬೇಡ ಎಂದಳು. ಆದರೆ, ವರ ಬಲವಂತವಾಗಿ ಆಕೆಯ ರಸಗುಲ್ಲಾ ಬಾಯಿಗೆ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧು ಅವನನ್ನು ಆತನಿಗೆ ಮನಬಂದಂತೆ ಥಳಿಸಿ ಮಂಟಪದಿಂದಲೇ ಒದ್ದು ಹೊರಗಡೆ ಹಾಕಿದ್ದಾಳೆ. ಇದನ್ನೆಲ್ಲಾ ನೋಡಿದ ವಧು-ವರರ ಸಂಬಂಧಿಕರು ಹಾಗೂ ಪೋಷಕರು ಬೆಚ್ಚಿಬಿದ್ದಿದ್ದಾರೆ. ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ದುರದೃಷ್ಟವಶಾತ್, ಬದುಕಿದರೆ ಸಾಕು ದೇವರೇ  ಎಂಬಂತಾಗಿದೆ ವರನ ಸ್ಥಿತಿ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Thu, 2 May 24