AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗ ಚೈತನ್ಯ-ಶೋಭಿತಾ ಆಪ್ತವಾಗಿರೋದು ಹೌದು, ಆದರೆ ಮದುವೆ ಆಗೋ ಆಲೋಚನೆ ಇಲ್ಲ

ನಾಗ ಚೈತನ್ಯ ಅವರು ಸಮಂತಾ ಜೊತೆ ವಿಚ್ಛೇದನ ಪಡೆದ ಬಳಿಕ ಸಿಂಗಲ್ ಆಗಿಯೇ ಇದ್ದರು. ಇತ್ತೀಚಿನ ದಿನಗಳಲ್ಲಿ ಅವರು ಶೋಭಿತಾ ಜೊತೆ ಸುತ್ತಾಡುತ್ತಿದ್ದಾರೆ. ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದ್ದು ಹೇಗೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಇವರಿಗೆ ಸದ್ಯಕ್ಕೆ ಮದುವೆ ಆಗುವ ಆಲೋನಚೆ ಇಲ್ಲ.

ನಾಗ ಚೈತನ್ಯ-ಶೋಭಿತಾ ಆಪ್ತವಾಗಿರೋದು ಹೌದು, ಆದರೆ ಮದುವೆ ಆಗೋ ಆಲೋಚನೆ ಇಲ್ಲ
ಶೋಭಿತಾ-ನಾಗ ಚೈತನ್ಯ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 02, 2024 | 11:10 AM

Share

ನಾಗ ಚೈತನ್ಯ (Naga Chaitanya) ಹಾಗೂ ಶೋಭಿತಾ ದುಲಿಪಾಲ್ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ಚರ್ಚೆ ಇತ್ತೀಚೆಗೆ ಜೋರಾಗಿದೆ. ಇವರು ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಮದುವೆ ಆಗುವ ಸಾಧ್ಯತೆ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಫ್ಯಾನ್ಸ್ ಕೂಡ ಇದೇ ರೀತಿಯ ಬೇಡಿಕೆ ಇಟ್ಟಿದ್ದರು. ಇವರು ಆಪ್ತವಾಗಿ ಇರೋದು ಹೌದು, ಆದರೆ, ಮದುವೆ ಆಗೋ ಆಲೋಚನೆ ಇಲ್ಲ ಎಂದು ವರದಿ ಆಗಿದೆ. ಈ ವಿಚಾರವನ್ನು ಅವರು ಎಲ್ಲಿಯೂ ಹಂಚಿಕೊಳ್ಳದೆ ಇರಲು ಕೂಡ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನಾಗ ಚೈತನ್ಯ ಅವರು ಸಮಂತಾ ಜೊತೆ ವಿಚ್ಛೇದನ ಪಡೆದ ಬಳಿಕ ಸಿಂಗಲ್ ಆಗಿಯೇ ಇದ್ದರು. ಇತ್ತೀಚಿನ ದಿನಗಳಲ್ಲಿ ಅವರು ಶೋಭಿತಾ ಜೊತೆ ಸುತ್ತಾಡುತ್ತಿದ್ದಾರೆ. ಇವರ ಮಧ್ಯೆ ಫ್ರೆಂಡ್​ಶಿಪ್ ಬೆಳೆದಿದ್ದು ಹೇಗೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಒಟ್ಟಿನಲ್ಲಿ ಇವರು ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಇವರು ಒಟ್ಟಾಗಿ ತೆರಳಿದ್ದಾರೆ. ಆದರೆ, ಇದನ್ನು ಖಾಸಗಿ ಆಗಿಯೇ ಇಡಲು ಇವರು ಬಯಸಿದ್ದಾರೆ. ಈ ವಿಚಾರ ಅಭಿಮಾನಿಗಳ ಕಣ್ಣಿಗೆ ಬೀಳದಂತೆ ಕಾಪಾಡಿಕೊಳ್ಳುತ್ತಿದ್ದಾರೆ.

ಈ ಕಾರಣದಿಂದಲೇ ನಾಗ ಚೈತನ್ಯ ಹಾಗೂ ಶೋಭಿತಾ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿಲ್ಲ. ಇವರು ಒಟ್ಟಿಗೆ ಇರೋ ಫೋಟೋ ಒಂದು ಸೋಶಿಯ್ ಮೀಡಿಯಾದಲ್ಲಿ ಲೀಕ್ ಆಗಿತ್ತು. ಈ ಬಗ್ಗೆ ಅವರಿಗೆ ತಿಳಿದಿದೆ. ಆದರೆ, ಈ ಬಗ್ಗೆ ಮಾತನಾಡಿದರಲು ಅವರು ನಿರ್ಧರಿಸಿದ್ದಾರೆ. ಒಂದೊಮ್ಮೆ ಈ ವಿಚಾರದ ಬಗ್ಗೆ ಮಾತನಾಡಿದರೆ ಜನರು ಈ ಬಗ್ಗೆಯೇ ಪ್ರಶ್ನೆ ಮಾಡುತ್ತಾರೆ. ಸಿನಿಮಾ ಪ್ರೆಸ್​ಮೀಟ್​ಗಳಲ್ಲಿ ಮಾಧ್ಯಮಗಳು ಈ ಬಗ್ಗೆ ಹೆಚ್ಚು ಕೆದಕಲು ಪ್ರಯತ್ನಿಸುತ್ತಾರೆ. ಈ ಕಾರಣಕ್ಕೆ ಈ ವಿಚಾರದಲ್ಲಿ ಇವರು ಮೌನ ತಾಳಿದ್ದಾರೆ.

ಕೆಲವು ಸಮಯದಿಂದ ನಾಗ ಚೈತನ್ಯ ಹಾಗೂ ಶೋಭಿತಾ ಒಟ್ಟಿಗೆ ಇದ್ದಾರೆ. ಸದ್ಯ ಮದುವೆ ಬಗ್ಗೆ ಅವರು ಯಾವುದೇ ಆಲೋಚನೆ ಮಾಡಿಲ್ಲ. ಈ ವಿಚಾರವನ್ನು ಅಧಿಕೃತ ಮಾಡಿದ ಬಳಿಕವೇ ಅವರು ಮದುವೆ ಆಗುವ ಆಲೋಚನೆ ಮಾಡಲಿದ್ದಾರೆ. ಒಂದೊಮ್ಮೆ ಈ ವಿಚಾರ ನಿಜವೇ ಆದಲ್ಲಿ ಸಮಂತಾ ಅಭಿಮಾನಿಗಳು ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಸಮಂತಾ ಹಾಗೂ ನಾಗ ಚೈತನ್ಯ 2017ರಲ್ಲಿ ಮದುವೆ ಆದರು. 2021ರಲ್ಲಿ ಇವರ ಸಂಬಂಧ ಕೊನೆ ಆಯಿತು. ಇದಕ್ಕೆ ಕಾರಣ ಇನ್ನೂ ರಿವೀಲ್ ಆಗಿಲ್ಲ. ನಾಗ ಚೈತನ್ಯ ಅವರು 2018ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಮಾತನಾಡಿದ್ದರು. ‘ಸಂಬಂಧದಲ್ಲಿ ಯಾವಾಗಲಾದ್ರೂ ಮೋಸ ಮಾಡಿದ್ದೀರಾ’ ಎಂದು ಕೇಳಿದಕ್ಕೆ ನಾಗ ಚೈತನ್ಯ ‘ಹೌದು’ ಎಂದು ಹೇಳಿದ್ದರು.

ಇದನ್ನೂ ಓದಿ: ನಾಗ ಚೈತನ್ಯ ಮಾಡಿದ ಪರಸ್ತ್ರೀ ಸಹವಾಸದಿಂದಲೇ ಸಮಂತಾ ವಿಚ್ಛೇದನ? ವೈರಲ್​ ವಿಡಿಯೋ ಸಾಕ್ಷಿ

‘ಜೀವನದಲ್ಲಿ ಎಲ್ಲರೂ ಎಲ್ಲದರ ಅನುಭವ ಪಡೆಯಬೇಕು. ನೀವು ಆಗಲೇ ಬೆಳೆಯುವುದು. ಅರ್ಥ ಮಾಡಿಕೊಳ್ಳುವುದು. ನಾನು ಎಲ್ಲ ಅನುಭವ ಪಡೆದಿದ್ದೇನೆ. ಆದರೆ ಈಗ ಸೆಟಲ್​ ಆಗುವ ಸಮಯ’ ಎಂದು ನಾಗ ಚೈತನ್ಯ ಈ ಮೊದಲು ಹೇಳಿದ್ದರು. ಇದುವೇ ಸಮಂತಾ- ನಾಗ ಚೈತನ್ಯ ವಿಚ್ಛೇದನಕ್ಕೆ ಕಾರಣ ಎಂದು ಕೆಲವರು ಹೇಳಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಅವರ ವೃತ್ತಿಜೀವನ ಬದಲಾಯಿತು. ಅವರ ಸಿನಿಮಾ ಆಯ್ಕೆಗಳಲ್ಲಿ ಭಾರಿ ವ್ಯತ್ಯಾಸ ಕಾಣಿಸಲು ಆರಂಭ ಆಯಿತು. ಈಗ ಅವರು ಅನೇಕ ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದಾರೆ. ನಾಗ ಚೈತನ್ಯ ಕೂಡ ಸಿನಿಮಾ ಮತ್ತು ವೆಬ್​ ಸಿರೀಸ್​ಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?