ಶೋಭಿತಾ ಜೊತೆ ಕಾಡಿನಲ್ಲಿ ನಾಗ ಚೈತನ್ಯ ಸುತ್ತಾಟ? ಇಲ್ಲಿದೆ ಫೋಟೋ ಸಾಕ್ಷಿ

ನಾಗಪುರದ ತಿಪೇಶ್ವರ್ ವನ್ಯಜೀವಿಧಾಮಕ್ಕೆ ಶೋಭಿತಾ ಭೇಟಿ ನೀಡಿದ್ದರು. ಇದರ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ಕಾಡು ಸುತ್ತಾಡುತ್ತಿರುವ ಫೋಟೋ ಇದೆ. ಅದೇ ರೀತಿ ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್​ಗ್ರೌಂಡ್ ಇದೆ.

ಶೋಭಿತಾ ಜೊತೆ ಕಾಡಿನಲ್ಲಿ ನಾಗ ಚೈತನ್ಯ ಸುತ್ತಾಟ? ಇಲ್ಲಿದೆ ಫೋಟೋ ಸಾಕ್ಷಿ
ಶೋಭಿತಾ-ನಾಗ ಚೈತನ್ಯ
Follow us
ರಾಜೇಶ್ ದುಗ್ಗುಮನೆ
|

Updated on: Apr 23, 2024 | 7:25 AM

ಸಮಂತಾ ರುತ್ ಪ್ರಭು (Samantha Ruth Prabhu) ಜೊತೆ ವಿಚ್ಛೇದನ ಪಡೆದ ನಂತರ ನಾಗ ಚೈತನ್ಯ ಅವರು ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಇದನ್ನು ಈ ಜೋಡಿ ಅಲ್ಲಗಳೆಯುತ್ತಲೇ ಬಂದಿದೆ. ನಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್ ಎಂದು ಇವರು ಹೇಳಿಕೊಂಡಿದ್ದಿದೆ. ಈಗ ಇವರು ಪೋಸ್ಟ್ ಮಾಡಿರೋ ಫೋಟೋ ಒಂದು ವೈರಲ್ ಆಗಿದೆ. ಇಬ್ಬರೂ ಒಂದೇ ಲೊಕೇಷನ್​ನಿಂದ ಫೋಟೋ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಲವು ಸಮಯದ ಹಿಂದೆ ನಾಗಪುರದ ತಿಪೇಶ್ವರ್ ವನ್ಯಜೀವಿಧಾಮಕ್ಕೆ ಶೋಭಿತಾ ಭೇಟಿ ನೀಡಿದ್ದರು. ಇದರ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ಕಾಡು ಸುತ್ತಾಡುತ್ತಿರುವ ಫೋಟೋ ಇದೆ. ಅದೇ ರೀತಿ ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್​ಗ್ರೌಂಡ್ ಇದೆ. ಈ ಕಾರಣದಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.

ಈ ಮೊದಲು ನಾಗ ಚೈತನ್ಯ ಹಾಗೂ ಶೋಭಿತಾ ಲಂಡನ್​ಗೆ ತೆರಳಿದ್ದರು. ಅಲ್ಲಿ ಒಂದು ಹೋಟೆಲ್​ನಲ್ಲಿ ಇವರು ಊಟಕ್ಕೆ ತೆರಳಿದ್ದರು. ಅಲ್ಲಿಯ ಶೆಫ್ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಹಿಂಭಾಗದಲ್ಲಿ ಶೋಭಿತಾ ಇದ್ದರು. ಇದರಿಂದ ಇವರ ಡೇಟಿಂಗ್ ಚಿಚಾರ ಖಚಿತ ಆಗಿತ್ತು.

ನಾಗ ಚೈತನ್ಯ ಹಾಗೂ ಶೋಭಿತಾ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋದು ಸದ್ಯಕ್ಕೆ ವದಂತಿ ಮಾತ್ರ. ಇದನ್ನು ಸಂಪೂರ್ಣವಾಗಿ ಖಚಿತಪಡಿಸೋ ಫೋಟೋಗಳು ಲಭ್ಯವಾಗಿಲ್ಲ. ಸಮಂತಾ ಜೊತೆ ಬ್ರೇಕಪ್ ಆದ ಬಳಿಕ ಅವರು ಶೋಭಿತಾ ಜೊತೆ ಕ್ಲೋಸ್ ಆದರು ಎನ್ನಲಾಗಿದೆ. ಇದು ಸಮಂತಾ ಅಭಿಮಾನಿಗಳಿಗೆ ಖುಷಿ ನೀಡಿಲ್ಲ. ಅವರು ನಾಗ ಚೈತನ್ಯ ಅವರನ್ನು ತೆಗಳುತ್ತಿದ್ದಾರೆ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಮಾಜಿ ದಂಪತಿ ಸಮಂತಾ-ನಾಗ ಚೈತನ್ಯ? ಆದರೆ ಒಂದು ಟ್ವಿಸ್ಟ್​

ಒಂದೊಮ್ಮೆ ನಾಗ ಚೈತನ್ಯ ಹಾಗೂ ಶೋಭಿತಾ ಮತ್ತೆ ಡೇಟಿಂಗ್ ಮಾಡುತ್ತಿರುವ ಚಿಚಾರ ನಿಜವಾಗಿದ್ದೇ ಹೌದಾದಲ್ಲಿ ಸಮಂತಾ ಫ್ಯಾನ್ಸ್ ಸಿಟ್ಟಿಗೇಳೋದ ಪಕ್ಕಾ. ಈಗ ಅವರು ಫೋಟೋ ಪೋಸ್ಟ್ ಮಾಡಿದಾಗೆಲ್ಲ ಸಮಂತಾ ಅಭಿಮಾನಿಗಳು ಕಮೆಂಟ್​ಗಳ ಸುರಿಮಳೆ ಸುರಿಸುತ್ತಾರೆ. ‘ಸಮಂತಾ ಅವರನ್ನು ಬಿಟ್ಟಿದ್ದೇಕೆ’ ಎಂದು ಪ್ರಶ್ನೆ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು