AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವೇದಿಕೆಯಲ್ಲಿ ಮಾಜಿ ದಂಪತಿ ಸಮಂತಾ-ನಾಗ ಚೈತನ್ಯ? ಆದರೆ ಒಂದು ಟ್ವಿಸ್ಟ್​

ಒಟಿಟಿ ಸಂಸ್ಥೆಯೊಂದರ ಜೊತೆ ಸಮಂತಾ ರುತ್​ ಪ್ರಭು ಮತ್ತು ನಾಗ ಚೈತನ್ಯ ಅವರು ಕೈ ಜೋಡಿಸಿದ್ದಾರೆ. ಇಬ್ಬರು ಕೂಡ ಚಿತ್ರರಂಗದಲ್ಲಿ ಇರುವುದರಿಂದ ಮುಖಾಮುಖಿ ಆಗುವಂತಹ ಸಂದರ್ಭ ಎದುರಾಗುವುದು ಸರ್ವೇ ಸಾಮಾನ್ಯ. ಮುಂಬೈನಲ್ಲಿ ಇಂದು (ಮಾರ್ಚ್​ 19) ನಡೆದ ಕಾರ್ಯಕ್ರಮದಲ್ಲಿ ಸಮಂತಾ, ನಾಗ ಚೈತನ್ಯ, ವರುಣ್​ ಧವನ್​ ಮುಂತಾದವರು ವೇದಿಕೆ ಏರಿಕೆ ಏರಿದ್ದಾರೆ.

ಒಂದೇ ವೇದಿಕೆಯಲ್ಲಿ ಮಾಜಿ ದಂಪತಿ ಸಮಂತಾ-ನಾಗ ಚೈತನ್ಯ? ಆದರೆ ಒಂದು ಟ್ವಿಸ್ಟ್​
ನಾಗ ಚೈತನ್ಯ, ಸಮಂತಾ
ಮದನ್​ ಕುಮಾರ್​
|

Updated on: Mar 19, 2024 | 6:52 PM

Share

ಟಾಲಿವುಡ್​ನ ಕ್ಯೂಟ್​ ಕಪಲ್​ ಆಗಿದ್ದ ಸಮಂತಾ ರುತ್​ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ಅವರು ವಿಚ್ಛೇದನ ಪಡೆದು ಎರಡೂವರೆ ವರ್ಷ ಕಳೆದಿದೆ. ಅವರಿಬ್ಬರು ದೂರಾಗಿದ್ದಕ್ಕೆ ಇಂದಿಗೂ ಅಭಿಮಾನಿಗಳಿಗೆ ಬೇಸರ ಇದೆ. ಇಬ್ಬರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಒಂದಲ್ಲ ಒಂದು ಸಂದರ್ಭದಲ್ಲಿ ಅವರು ಮುಖಾಮುಖಿ ಆಗಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಂದು (ಮಾರ್ಚ್​ 19) ಮುಂಬೈನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಸಮಂತಾ ಮತ್ತು ನಾಗ ಚೈತನ್ಯ (Naga Chaitanya) ಅವರು ಪಾಲ್ಗೊಂಡಿದ್ದಾರೆ. ಬೇರೆ ಬೇರೆ ಸಂದರ್ಭದಲ್ಲಿ ಇಬ್ಬರೂ ವೇದಿಕೆ ಏರಿದ್ದಾರೆ.

‘ಅಮೇಜಾನ್​ ಪ್ರೈಂ ವಿಡಿಯೋ’ ಜೊತೆ ಸಮಂತಾ ರುತ್​ ಪ್ರಭು ಹಾಗೂ ನಾಗ ಚೈತನ್ಯ ಅವರು ಕೈ ಜೋಡಿಸಿದ್ದಾರೆ. ನಾಗ ಚೈತನ್ಯ ನಟಿಸಿದ ‘ಧೂತ’ ವೆಬ್​ ಸಿರೀಸ್​ ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಹಾಗೆಯೇ ಸಮಂತಾ ನಟನೆಯ ‘ದಿ ಫ್ಯಾಮಿಲಿ ಮ್ಯಾನ್​ 2’ ಕೂಡ ಇದೇ ಒಟಿಟಿಯಲ್ಲಿ ಯಶಸ್ವಿ ಶೋ ಎನಿಸಿಕೊಂಡಿದೆ. ಈಗ ಸಮಂತಾ ನಟಿಸಿರುವ ‘ಸಿಟಾಡೆಲ್​ ಹನಿ ಬನಿ’ ಕೂಡ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕವೇ ಪ್ರಸಾರಕ್ಕೆ ಸಜ್ಜಾಗುತ್ತಿದೆ. ಈ ಒಟಿಟಿ ಸಂಸ್ಥೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮಂತಾ, ನಾಗ ಚೈತನ್ಯ, ವರುಣ್​ ಧವನ್​ ಮುಂತಾದ ಕಲಾವಿದರು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ‘ಆ ಡ್ಯಾನ್ಸ್​ ಮಾಡುವಾಗ ಕಂಫರ್ಟ್​ ಇರಲಿಲ್ಲ’: ಈಗ ಬಾಯ್ಬಿಟ್ಟ ಸಮಂತಾ

‘ಧೂತ’ ವೆಬ್​ ಸಿರೀಸ್​ ಸಕ್ಸಸ್​ ಆಗಿದ್ದಕ್ಕೆ ನಾಗ ಚೈತನ್ಯ ಅವರು ಈ ಕಾರ್ಯಕ್ರಮದ ವೇದಿಕೆಗೆ ಬಂದು ಮಾತನಾಡಿದ್ದಾರೆ. ‘ಸಾಗರ್​ ಎಂಬ ಆ ಪಾತ್ರ ತುಂಬ ಚೆನ್ನಾಗಿ ಇದ್ದಿದ್ದರಿಂದ ಅದನ್ನು ನಾನು ಒಪ್ಪಿಕೊಂಡೆ’ ಎಂದು ಹೇಳಿರುವ ಅವರು, ವೆಬ್ ಸಿರೀಸ್​ ಯಶಸ್ವಿ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು, ಸಮಂತಾ ಅವರು ‘ಸಿಟಾಡೆಲ್​ ಹನಿ ಬನಿ’ ವೆಬ್​ ಸಿರೀಸ್​ ಬಗ್ಗೆ ಮಾತನಾಡಲು ವೇದಿಕೆ ಏರಿದ್ದಾರೆ. ಟ್ವಿಸ್ಟ್​ ಏನೆಂದರೆ, ಅವರಿಬ್ಬರೂ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಬೇರೆ ಬೇರೆ ಸಂದರ್ಭದಲ್ಲಿಯೇ ಹೊರತು ಒಟ್ಟಿಗೆ ಅಲ್ಲ.

ನಾಗ ಚೈತನ್ಯ, ಸಮಂತಾ ರುತ್​ ಪ್ರಭು ವೈರಲ್​ ವಿಡಿಯೋ:

‘ಅಮೇಜಾನ್​ ಪ್ರೈಂ ವಿಡಿಯೋ’ ನಡೆಸಿದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಂತಾ ರುತ್​ ಪ್ರಭು ಮತ್ತು ನಾಗ ಚೈತನ್ಯ ಅವರ ಫೋಟೋಗಳನ್ನು ಅಕ್ಕ-ಪಕ್ಕ ಇಟ್ಟು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ. ಇದೇ ರೀತಿ ಅವರಿಬ್ಬರು ಮತ್ತೊಮ್ಮೆ ಒಂದಾಗಲಿ ಎಂದು ಫ್ಯಾನ್ಸ್​ ಅಪೇಕ್ಷಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಯಾಕೆಂದರೆ, ಸಮಂತಾ ಮತ್ತು ನಾಗ ಚೈತನ್ಯ ಅವರು ಈಗಾಗಲೇ ಬೇರೆ ಬೇರೆ ದಾರಿಯಲ್ಲಿ ಮುಂದೆ ಸಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್