AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ನಟನೆಯ ಸಿಟಾಡೆಲ್​ ಇಂಡಿಯನ್​ ವರ್ಷನ್​ಗೆ ‘ಹನಿ ಬನಿ’ ಶೀರ್ಷಿಕೆ

ರಾಜ್​ ಮತ್ತು ಡಿಕೆ ನಿರ್ದೇಶನ ಮಾಡಿರುವ ಸ್ಪೈ ಥ್ರಿಲ್ಲರ್​ ವೆಬ್ ಸೀರಿಸ್​ಗೆ ‘ಸಿಟಾಡೆಲ್​ ಹನಿ ಬನಿ’ ಎಂದು ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಆ್ಯಕ್ಷನ್​ ಜೊತೆ ಲವ್​ ಸ್ಟೋರಿ ಕೂಡ ಇರಲಿದೆ. ಸಮಂತಾ ರುತ್​ ಪ್ರಭು ಮತ್ತು ವರುಣ್​ ಧವನ್​ ಅವರು ಈ ವೆಬ್​ ಸಿರೀಸ್​ನಲ್ಲಿ ಆ್ಯಕ್ಷನ್​ ಅವತಾರ ತಾಳಿದ್ದಾರೆ. ಟೈಟಲ್​ ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ತಂಡ ಭಾಗಿಯಾಗಿದೆ.

ಸಮಂತಾ ನಟನೆಯ ಸಿಟಾಡೆಲ್​ ಇಂಡಿಯನ್​ ವರ್ಷನ್​ಗೆ ‘ಹನಿ ಬನಿ’ ಶೀರ್ಷಿಕೆ
ಸಮಂತಾ ರುತ್​ ಪ್ರಭು, ವರುಣ್​ ಧವನ್​
TV9 Web
| Edited By: |

Updated on: Mar 19, 2024 | 5:00 PM

Share

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರಿಗೆ ಒಟಿಟಿಯಲ್ಲಿ ಸಖತ್​ ಬೇಡಿಕೆ ಇದೆ. ಈಗಾಗಲೇ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ರಾಜಿ ಎಂಬ ಪಾತ್ರ ಮಾಡಿ ಗಮನ ಸೆಳೆದಿದ್ದ ಅವರು ಈಗ ಸಿಟಾಡೆಲ್​ ವೆಬ್​ ಸಿರೀಸ್​ನ ಭಾರತದ ವರ್ಷನ್​ನಲ್ಲಿ ನಟಿಸಿದ್ದಾರೆ. ಇಷ್ಟು ದಿನಗಳ ಕಾಲ ಇದರ ಶೀರ್ಷಿಕೆ ಬಹಿರಂಗ ಆಗಿರಲಿಲ್ಲ. ಈಗ ಟೈಟಲ್​ ಅನೌನ್ಸ್​ ಮಾಡಲಾಗಿದೆ. ‘ಸಿಟಾಡೆಲ್​ ಹನಿ ಬನಿ’ (Citadel Honey Bunny) ಎಂದು ಶೀರ್ಷಿಕೆ ಇಡಲಾಗಿದೆ. ಅದ್ದೂರಿ ಕಾರ್ಯಕ್ರಮದ ಮೂಲಕ ಟೈಟಲ್​ ಅನಾವರಣ ಮಾಡಲಾಗಿದೆ. ಈ ವೆಬ್​ ಸರಣಿಯಲ್ಲಿ ಸಮಂತಾ ಜೊತೆ ವರುಣ್​ ಧವನ್​ (Varun Dhawan) ತೆರೆಹಂಚಿಕೊಂಡಿದ್ದಾರೆ.

ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ರುತ್​ ಪ್ರಭು ಅವರು ಬೋಲ್ಡ್​ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಆರಂಭಿಸಿದರು. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಅವರ ಆ್ಯಕ್ಷನ್​ ನೋಡಿ ಅಚ್ಚರಿಪಟ್ಟಿದ್ದ ಅಭಿಮಾನಿಗಳು ಈಗ ‘ಸಿಟಾಡೆಲ್​ ಹನಿ ಬನಿ’ ವೆಬ್​ ಸಿರೀಸ್​ನಲ್ಲಿ ಇನ್ನೂ ಹೆಚ್ಚಿನ ಆ್ಯಕ್ಷನ್​ ದೃಶ್ಯಗಳನ್ನು ವೀಕ್ಷಿಸಲಿದ್ದಾರೆ.

ರಾಜ್​ ಮತ್ತು ಡಿಕೆ ಅವರು ‘ಸಿಟಾಡೆಲ್​ ಹನಿ ಬನಿ’ ವೆಬ್​ ಸರಣಿಗೆ ನಿರ್ದೇಶನ ಮಾಡಿದ್ದಾರೆ. ‘ಶೂಟಿಂಗ್​ ಸಂದರ್ಭದಲ್ಲಿ ಸಮಂತಾ ಮತ್ತು ವರುಣ್​ ಧವನ್​ ಅವರು ತುಂಬ ಕಷ್ಟಪಟ್ಟಿದ್ದಾರೆ. ಆ್ಯಕ್ಷನ್​ ಸ್ಟಾರ್​ ಆಗಿ ವರುಣ್​ ಧವನ್​ ಅವರ ವೃತ್ತಿ ಜೀವನದಲ್ಲಿ ಹೊಸ ಜರ್ನಿ ಆರಂಭ ಆಗಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ. ಇದು ಇಂಡಿಯನ್​ ರಿಮೇಕ್​ ಎಂದು ಕೆಲವರು ಊಹಿಸಿದ್ದರು. ಆದರೆ ಇದು ರಿಮೇಕ್​ ಅಲ್ಲ, ಬದಲಿಗೆ ಸ್ಪಿನ್​-ಆಫ್​​ ಸೀರಿಸ್​ ಎಂಬುದು ಈಗ ಗೊತ್ತಾಗಿದೆ.

ಇದನ್ನೂ ಓದಿ: ‘ಆ ಡ್ಯಾನ್ಸ್​ ಮಾಡುವಾಗ ಕಂಫರ್ಟ್​ ಇರಲಿಲ್ಲ’: ಈಗ ಬಾಯ್ಬಿಟ್ಟ ಸಮಂತಾ

‘ಈ ಅವಕಾಶ ನೀಡಿದ್ದಕ್ಕೆ ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ‘ದಿ ಫ್ಯಾಮಿಲಿ ಮ್ಯಾನ್​ 2’ ನೋಡಿ ನಾನು ರಾಜ್​ ಮತ್ತು ಡಿಕೆ ಜೊತೆ ಕೆಲಸ ಮಾಡಲು ಬಯಸಿದ್ದೆ. ಬಳಿಕ ಈ ಅವಕಾಶ ಸಿಕ್ಕಿತು’ ಎಂದು ವರಣ್​ ಧವನ್​ ಹೇಳಿದ್ದಾರೆ. ‘ನಾನು ಈ ರೀತಿಯ ಆ್ಯಕ್ಷನ್​ ಪಾತ್ರ ಮಾಡುತ್ತೇನೆ ಎಂದು ಊಹಿಸಿರಲಿಲ್ಲ. ಕೊನೇ ಗಳಿಕೆ ತನಕವೂ ನಾನು ಸಿಟಾಡೆಲ್​ ಹನಿ ಬನಿ ಸೀರಿಸ್​ನಲ್ಲಿ ನಟಿಸುತ್ತೇನೆ ಎಂದುಕೊಂಡಿರಲಿಲ್ಲ. ಈಗಲೂ ಇದನ್ನು ನಂಬಲಾಗುತ್ತಿಲ್ಲ’ ಎಂದು ಸಮಂತಾ ರುತ್​ ಪ್ರಭು ಹೇಳಿದ್ದಾರೆ.

‘ಅಮೆರಿಕದ ಸಿಟಾಡೆಲ್​ ಸೀರಿಸ್​ಗೆ ಭಾರತದ ವರ್ಷನ್​ ಮಾಡಿದ್ದಕ್ಕೆ ನಾವು ಥ್ರಿಲ್​ ಆಗಿದ್ದೇವೆ. ಕೊವಿಡ್​ಗಿಂತಲೂ ಮುಂಚೆ ನಾವು ಇದನ್ನು ಆರಂಭಿಸಿದ್ದೆವು. ಈಗ ಇಲ್ಲಿಗೆ ಬಂದು ನಿಂತಿದ್ದೇವೆ. ಅತ್ಯುತ್ತಮ ಕಲಾವಿದರ ತಂಡದ ಜೊತೆ ಇದನ್ನು ಮಾಡಿದ್ದೇವೆ’ ಎಂದು ನಿರ್ದೇಶಕರಾದ ರಾಜ್​ ಮತ್ತು ಡಿಕೆ ಹೇಳಿದ್ದಾರೆ. ‘ಸಿಟಾಡೆಲ್​ ಹನಿ ಬನಿ’ ರಿಲೀಸ್​ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ. ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಇದು ವೀಕ್ಷಣೆಗೆ ಲಭ್ಯವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ