AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಡ್ಯಾನ್ಸ್​ ಮಾಡುವಾಗ ಕಂಫರ್ಟ್​ ಇರಲಿಲ್ಲ’: ಈಗ ಬಾಯ್ಬಿಟ್ಟ ಸಮಂತಾ

‘ಪುಷ್ಪ’ ಸಿನಿಮಾದ ಐಟಂ ಸಾಂಗ್​ನಲ್ಲಿ ಅಲ್ಲು ಅರ್ಜುನ್​ ಮತ್ತು ಸಮಂತಾ ರುತ್​ ಪ್ರಭು ಅವರು ತುಂಬ ಬೋಲ್ಡ್​ ಆದಂತಹ ಸ್ಟೆಪ್​ಗಳನ್ನು ಹಾಕಿದ್ದಾರೆ. ಆ ಹಾಡಿನ ಚಿತ್ರೀಕರಣ ಮಾಡುವಾಗ ಬಹಳ ಕಷ್ಟ ಆಗಿತ್ತು ಎಂಬುದನ್ನು ಸಮಂತಾ ಈಗ ಬಾಯಿಬಿಟ್ಟಿದ್ದಾರೆ. ಇಷ್ಟು ದಿನಗಳ ಕಾಲ ಅವರು ಆ ಬಗ್ಗೆ ಏನನ್ನೂ ಮಾತನಾಡಿರಲಿಲ್ಲ ಎಂಬುದೇ ಅಚ್ಚರಿ.

‘ಆ ಡ್ಯಾನ್ಸ್​ ಮಾಡುವಾಗ ಕಂಫರ್ಟ್​ ಇರಲಿಲ್ಲ’: ಈಗ ಬಾಯ್ಬಿಟ್ಟ ಸಮಂತಾ
ಸಮಂತಾ ರುತ್​ ಪ್ರಭು, ಅಲ್ಲು ಅರ್ಜುನ್​
ಮದನ್​ ಕುಮಾರ್​
|

Updated on: Mar 17, 2024 | 10:25 PM

Share

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಸಖತ್​ ಬೇಡಿಕೆ ಹೊಂದಿದ್ದಾರೆ. ಹೀರೋಯಿನ್​ ಆಗಿ ಮಾತ್ರಲ್ಲದೇ ಐಟಂ ಸಾಂಗ್​ನಲ್ಲಿ ಕುಣಿಯುವ ಮೂಲಕವೂ ಅವರು ಜನರನ್ನು ರಂಜಿಸಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿನ ‘ಉ ಅಂಟಾವಾ ಮಾವ..’ ಹಾಡಿನಲ್ಲಿ ಅವರು ಡ್ಯಾನ್ಸ್​ ಮಾಡಿದ ರೀತಿ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಅಲ್ಲು ಅರ್ಜುನ್​ (Allu Arjun) ಮತ್ತು ಸಮಂತಾ ಅವರು ಮೈ ಚಳಿ ಬಿಟ್ಟು ಕುಣಿದಿದ್ದರು. ಆ ಹಾಡಿನ ಶೂಟಿಂಗ್​ ಸಂದರ್ಭ ಹೇಗಿತ್ತು ಎಂದು ಸಮಂತಾ ಈಗ ಬಾಯಿ ಬಿಟ್ಟಿದ್ದಾರೆ. ಅದರ ಶೂಟಿಂಗ್​ ಮಾಡುವಾಗ ತಾವು ಕಂಫರ್ಟಬಲ್​ ಆಗಿರಲಿಲ್ಲ ಎಂದು ಸಮಂತಾ (Samantha) ಹೇಳಿದ್ದಾರೆ.

‘ಪುಷ್ಪ’ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಆದರೆ ಸ್ಪೆಷಲ್​ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಆಯ್ಕೆ ಆಗಿದ್ದು ಸಮಂತಾ ರುತ್​ ಪ್ರಭು. ಆ ಸಿನಿಮಾದ ಯಶಸ್ಸಿನಲ್ಲಿ ‘ಉ ಅಂಟಾವಾ ಮಾವ..’ ಹಾಡಿಗೆ ಕೊಡುಗೆ ದೊಡ್ಡದಿದೆ. ಬಹಳ ಬೋಲ್ಡ್​ ಆಗಿದ್ದಂತಹ ಆ ಹಾಡನ್ನು ಒಪ್ಪಿಕೊಳ್ಳಲು ಸಮಂತಾ ತುಂಬ ಯೋಚನೆ ಮಾಡಿದ್ದರು. ಯಾಕೆಂದರೆ, ಆಗ ತಾನೇ ಅವರು ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿಚ್ಛೇದನ ಘೋಷಿಸಿದ್ದರು.

‘ನನಗೆ ಆ ಹಾಡಿನ ಆಫರ್ ಬಂದಾಗ ನಮ್ಮ ವಿಚ್ಛೇದನದ ಪ್ರಕ್ರಿಯೆ ಅರ್ಧದಲ್ಲಿತ್ತು. ಡಿವೋರ್ಸ್​ ಘೋಷಣೆ ಆದ ತಕ್ಷಣ ಅಂತಹ ಐಟಂ ಡ್ಯಾನ್ಸ್​ ಮಾಡುವುದು ಬೇಡ ಎಂದು ಕುಟುಂಬದವರು, ಆಪ್ತರು ಸಲಹೆ ನೀಡಿದರು. ಸ್ನೇಹಿತರು ಕೂಡ ಹಾಗೆಯೇ ಹೇಳಿದರು. ಆದರೆ ನಾನು ಐಟಂ ಡ್ಯಾನ್ಸ್​ ಮಾಡುವ ನಿರ್ಧಾರ ತೆಗೆದುಕೊಂಡೆ’ ಎಂದು ಸಮಂತಾ ಅವರು ಹೇಳಿದ್ದಾರೆ. ಆದರೆ ಆ ಹಾಡಿನಲ್ಲಿ ಕುಣಿಯುವುದು ಅವರಿಗೆ ಅಷ್ಟು ಸುಲಭದ್ದಾಗಿರಲಿಲ್ಲ.

ಇದನ್ನೂ ಓದಿ: ಆರೋಗ್ಯದ ಬಗ್ಗೆ ತಪ್ಪು ಮಾಹಿತಿ ನೀಡಿದ ಸಮಂತಾ; ಸತ್ಯ ಬಯಲಿಗೆ ಎಳೆದ ಡಾಕ್ಟರ್​

‘ನನ್ನ ಪಾಲಿಗೆ ಅದು ದೊಡ್ಡ ಸವಾಲಾಗಿತ್ತು. ಉ ಅಂಟಾವ ಹಾಡಿನ ಮೊದಲ ಶಾಟ್​ ತೆಗೆಯುವಾಗ ನಾನು ಭಯದಿಂದ ನಡುಗುತ್ತಿದ್ದೆ. ಯಾಕೆಂದರೆ, ಸೆಕ್ಸಿಯಾಗಿ ಕಾಣುವುದು ನನಗೆ ಹೊಂದುವಂಥದಲ್ಲ. ಆದರೆ ನಾನು ನನ್ನನ್ನು ಕಷ್ಟಕ್ಕೆ ನೂಕಿಕೊಂಡು, ಅದರ ವಿರುದ್ಧ ಹೋರಾಡಿ ಹೊರಬರುವ ವ್ಯಕ್ತಿತ್ವದವಳು’ ಎಂದು ಹೇಳುವ ಮೂಲಕ ಆ ಹಾಡನ್ನು ಸವಾಲಾಗಿ ಸ್ವೀಕರಿಸಿದ್ದಾಗಿ ಸಮಂತಾ ಹೇಳಿದ್ದಾರೆ.

ಇದನ್ನೂ ಓದಿ: ಚಿಂತೆಯಿಲ್ಲದೇ ಬಾತ್​ ರೂಂ ಫೋಟೋ ಹಂಚಿಕೊಂಡ ಸಮಂತಾ ರುತ್​ ಪ್ರಭು

‘ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ಸಮಂತಾ ಅವರು ರಾಜಿ ಎಂಬ ಪಾತ್ರ ಮಾಡಿದ್ದರು. ಆ ಪಾತ್ರ ಕೂಡ ಸಖತ್​ ಬೋಲ್ಡ್​ ಆಗಿತ್ತು. ಆ ಪಾತ್ರವನ್ನು ಒಪ್ಪಿಕೊಳ್ಳುವಾಗ ಎಷ್ಟು ಕಷ್ಟವಾಗಿತ್ತೋ ಐಟಂ ಸಾಂಗ್​ ಒಪ್ಪಿಕೊಳ್ಳುವಾಗಲೂ ಅಷ್ಟೇ ಕಷ್ಟವಾಗಿತ್ತು ಎಂದು ಸಮಂತಾ ಹೇಳಿದ್ದಾರೆ. ವಿಚ್ಛೇದನದ ಬಳಿಕ ಸಮಂತಾ ಅವರು ಸಿನಿಮಾ ಮತ್ತು ಪಾತ್ರಗಳನ್ನು ಆಯ್ಕೆ ಮಾಡುವ ರೀತಿ ಬದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ