ಚಿಂತೆಯಿಲ್ಲದೇ ಬಾತ್​ ರೂಂ ಫೋಟೋ ಹಂಚಿಕೊಂಡ ಸಮಂತಾ ರುತ್​ ಪ್ರಭು

ಮಯೋಸೈಟಿಸ್​ನಿಂದ ಚೇತರಿಸಿಕೊಂಡಿರುವ ನಟಿ ಸಮಂತಾ ರುತ್​ ಪ್ರಭು ಅವರು ಮತ್ತೆ ಆ್ಯಕ್ಟೀವ್​ ಆಗಿದ್ದಾರೆ. ಬಗೆಬಗೆಯಲ್ಲಿ ಅವರು ಫೋಟೋಶೂಟ್​ ಮಾಡಿಸುತ್ತಿದ್ದಾರೆ. ಅವರು ಈಗ ಕೆಲವು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ನೀಡಿದ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. ಸಮಂತಾ ಅವರ ಫ್ಯಾನ್ಸ್​ ಪೇಜ್​ಗಳಲ್ಲಿ ಈ ಫೋಟೋಗಳು ವೈರಲ್​ ಆಗಿವೆ.

ಚಿಂತೆಯಿಲ್ಲದೇ ಬಾತ್​ ರೂಂ ಫೋಟೋ ಹಂಚಿಕೊಂಡ ಸಮಂತಾ ರುತ್​ ಪ್ರಭು
ಸಮಂತಾ ರುತ್​ ಪ್ರಭು
Follow us
ಮದನ್​ ಕುಮಾರ್​
|

Updated on: Mar 03, 2024 | 10:59 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ಫೋಟೋ (Samantha Ruth Prabhu Photo) ಹಂಚಿಕೊಳ್ಳುತ್ತಾರೆ. ಈಗ ಅವರು ಶೇರ್​ ಮಾಡಿಕೊಂಡಿರುವ ಫೋಟೋಗಳು ವೈರಲ್​ ಆಗಿವೆ. ಬಾತ್​ ರೂಮ್​ನಲ್ಲಿ ಸಮಂತಾ (Samantha) ಅವರು ಫೋಟೋಶೂಟ್​ ಮಾಡಿಸಿದ್ದಾರೆ. ‘ಚಿಂತೆಯಿಲ್ಲದೇ..’ ಎಂದು ಅವರು ಈ ಫೋಟೋಗಳಿಗೆ ಕ್ಯಾಪ್ಷನ್​ ನೀಡಿದ್ದಾರೆ. ಈ ಫೋಟೋಶೂಟ್​ಗೆ ಅವರು ಬಾತ್​ ರೂಮ್​ ಅನ್ನು ಲೊಕೇಷನ್​ ಆಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಮಂತಾ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಅವರ ವೃತ್ತಿ ಜೀವನದ ಚಾರ್ಮ್​ ಹೆಚ್ಚಿದೆ. ಬಗೆಬಗೆಯ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಅನಾರೋಗ್ಯದ ಕಾರಣದಿಂದ ಅವರು ಎಲ್ಲವನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಯೋಸೈಟಿಸ್​ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಚೇತರಿಸಿಕೊಂಡು ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: ತೀರಾ ಖಾಸಗಿ ಮಾಹಿತಿ ಹಂಚಿಕೊಂಡ ನಟಿ ಸಮಂತಾ ರುತ್​ ಪ್ರಭು; ಇಲ್ಲಿದೆ ವಿವರ..

ಸಮಂತಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 3.2 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ದಿನ ಕಳೆದಂತೆಲ್ಲ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಸಮಂತಾ ಅವರಿಗೆ ಈಗ 36 ವರ್ಷ ವಯಸ್ಸು. ಸದ್ಯಕ್ಕೆ ಅವರು ಸಿಂಗಲ್​ ಆಗಿದ್ದಾರೆ. ಯಾವುದೇ ರಿಲೇಷನ್​ಶಿಪ್​ ತಂಟೆಗೆ ಅವರು ಹೋಗಿಲ್ಲ. ಫಿಟ್ನೆಸ್​ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಹಸಿರು ಪರಿಸರದ ನಡುವೆ ಯೋಗ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದರು.

ಸಮಂತಾ ರುತ್​ ಪ್ರಭು ಇನ್​ಸ್ಟಾಗ್ರಾಮ್​ ಪೋಸ್ಟ್​:

2023ರಲ್ಲಿ ಸಮಂತಾ ರುತ್​ ಪ್ರಭು ನಟನೆಯ 2 ಸಿನಿಮಾಗಳು ಬಿಡುಗಡೆ ಆದವು. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ‘ಶಾಕುಂತಲಂ’ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಹಿಟ್​ ಆಗಲಿಲ್ಲ. ಅದೇ ರೀತಿ, ‘ಖುಷಿ’ ಸಿನಿಮಾ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ‘ಖುಷಿ’ ತೆರೆಕಂಡ ಬಳಿಕ ಅವರು ದೊಡ್ಡ ಗ್ಯಾಪ್​ ಪಡೆದುಕೊಂಡರು. ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ ಕ್ಷೇತ್ರದಲ್ಲೂ ಸಮಂತಾ ಅವರಿಗೆ ಬೇಡಿಕೆ ಇದೆ. ‘ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನಲ್ಲಿ ನಟಿಸಿದ ಬಳಿಕ ಅವರಿಗೆ ಭಾರಿ ಬೇಡಿಕೆ ಸೃಷ್ಟಿ ಆಗಿದೆ. ಇಂಗ್ಲಿಷ್​ನ ‘ಸಿಟಾಡೆಲ್​’ ವೆಬ್​ ಸರಣಿಯ ಭಾರತದ ವರ್ಷನ್​ನಲ್ಲಿ ಸಮಂತಾ ನಟಿಸಿದ್ದಾರೆ. ಅದರ ಬಿಡುಗಡೆಗಾಗಿ ಫ್ಯಾನ್ಸ್ ಕಾದಿದ್ದಾರೆ. ಅದರಲ್ಲಿ ವರುಣ್​ ಧವನ್​ ಜೊತೆ ಸಮಂತಾ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.