ತೀರಾ ಖಾಸಗಿ ಮಾಹಿತಿ ಹಂಚಿಕೊಂಡ ನಟಿ ಸಮಂತಾ ರುತ್​ ಪ್ರಭು; ಇಲ್ಲಿದೆ ವಿವರ..

ಸೆಲೆಬ್ರಿಟಿಗಳು ಸಾಮಾನ್ಯವಾಗಿ ಇಂಥ ಮಾಹಿತಿಯನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ ನಟಿ ಸಮಂತಾ ರುತ್​ ಪ್ರಭು ಅವರು ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಮಾಡಿಲ್ಲ. ತಮ್ಮ ದೇಹದ ಬಗೆಗಿನ ವಿವರಗಳನ್ನು ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಫೋಟೋ ಸಹಿತ ಈ ಮಾಹಿತಿಯನ್ನು ಸಮಂತಾ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್​ ವೈರಲ್​ ಆಗಿದೆ.

ತೀರಾ ಖಾಸಗಿ ಮಾಹಿತಿ ಹಂಚಿಕೊಂಡ ನಟಿ ಸಮಂತಾ ರುತ್​ ಪ್ರಭು; ಇಲ್ಲಿದೆ ವಿವರ..
ಸಮಂತಾ ರುತ್​ ಪ್ರಭು
Follow us
ಮದನ್​ ಕುಮಾರ್​
|

Updated on: Feb 22, 2024 | 11:35 AM

ಜನಪ್ರಿಯ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಅನಾರೋಗ್ಯದ ಕಾರಣದಿಂದ ದೀರ್ಘ ಬ್ರೇಕ್​ ಪಡೆದುಕೊಂಡಿದ್ದರು. ಯಾವುದೇ ಸಿನಿಮಾಗಳನ್ನೂ ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ಈಗ ಮತ್ತೆ ಕೆಲಸದ ಕಡೆಗೆ ಅವರು ಗಮನ ಹರಿಸಿದ್ದಾರೆ. ಅದೇ ರೀತಿ, ಫಿಟ್ನೆಸ್​ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಅನಾರೋಗ್ಯದ ನೆಪ ನೀಡಿ ಫಿಟ್ನೆಸ್​ (Fitness) ಕಳೆದುಕೊಳ್ಳಲು ಅವರು ಸಿದ್ಧರಿಲ್ಲ. ಈಗ ಅವರು ಮತ್ತೆ ವರ್ಕೌಟ್​ ಮಾಡುತ್ತಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಕೆಲವು ಖಾಸಗಿ ವಿಚಾರಗಳನ್ನು ಕೂಡ ಸಮಂತಾ (Samantha) ಹಂಚಿಕೊಂಡಿದ್ದಾರೆ. ಅದರಿಂದ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಸದ್ಯ ಸಮಂತಾ ರುತ್​ ಪ್ರಭು ಅವರು ಹಸಿರು ಪರಿಸರದ ನಡುವೆ ಕಾಲ ಕಳೆಯುತ್ತಿದ್ದಾರೆ. ಅಲ್ಲಿ ಬೆಳ್ಳಂಬೆಳಿಗ್ಗೆಯೇ ವರ್ಕೌಟ್​ ಮಾಡಿದ್ದಾರೆ. ಪ್ರಶಾಂತವಾದ ವಾತಾವರಣದಲ್ಲಿ ಪ್ರಾಣಿ, ಪಕ್ಷಿಗಳ ಕಲರವದ ನಡುವೆ ಅವರು ದಿನ ಕಳೆಯುತ್ತಿದ್ದಾರೆ. ತಮ್ಮ ಜೀವನ ಶೈಲಿ ಹೇಗಿದೆ ಎಂಬುದನ್ನು ಅವರು ಹೊಸ ಫೋಟೋಗಳ ಮೂಲಕ ತೋರಿಸಿದ್ದಾರೆ. ಅಲ್ಲದೇ, ತಮ್ಮ ದೇಹದ ತೂಕ ಎಷ್ಟು ಎಂಬುದು ಕೂಡ ಅವರು ಬಹಿರಂಗಪಡಿಸಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕೆಲವು ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಸಮಂತಾ ಈ ವಿಚಾರದಲ್ಲಿ ಮುಚ್ಚುಮರೆ ಮಾಡಿಲ್ಲ. ಅವರ ದೇಹದ ತೂಕ ಈಗ 50.1 ಕೆಜಿ ಇದೆ. 36ರ ಪ್ರಾಯದ ಅವರ ಮೆಟಾಬಾಲಿಕ್​ ಏಜ್​ 23 ಎಂಬುದನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರ ದೇಹದಲ್ಲಿ 12 ಕೆಜಿ ಫ್ಯಾಟ್​ ಮಾಸ್​ ಇದೆ. ಮಸಲ್​ ಮಾಸ್​ 35.9 ಕೆಜಿ, ಬೋನ್​ ಮಾಸ್​ 2.2 ಕೆಜಿ ಎಂಬುದನ್ನು ಸಮಂತಾ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಹೇರಳವಾದ ಅವಕಾಶ ಬರುತ್ತಿರುವಾಗಲೇ ಸಮಂತಾ ಅವರಿಗೆ ಮಯೋಸೈಟಿಸ್​ ಕಾಯಿಲೆ ಇರುವುದು ತಿಳಿದುಬಂತು. ಅದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ವಿದೇಶಕ್ಕೆ ಹೋಗಿ ಅವರು ಚಿಕಿತ್ಸೆ ಪಡೆದುಬಂದರು. ಸ್ವಲ್ಪ ಚೇತರಿಸಿಕೊಂಡ ಬಳಿಕ ಅವರು ಮತ್ತೆ ಕಷ್ಟಪಟ್ಟು ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸಲು ಆರಂಭಿಸಿದರು. ಇದರಿಂದ ಅವರಿಗೆ ಪುನಃ ಸಮಸ್ಯೆ ಎದುರಾಯಿತು. ಇಷ್ಟೆಲ್ಲ ಆದ ಬಳಿಕ ಸಮಂತಾ ರುತ್​ ಪ್ರಭು ಅವರು ಮತ್ತೆ ಚೇತರಿಸಿಕೊಂಡು ವರ್ಕೌಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಇಲ್ಲಿ ಸಿಗುವ ಪ್ರೀತಿಯೇ ಬೇರೆ’: ಸಮಂತಾ ಖುಷಿಗೆ ಕಾರಣವಾಗಿದ್ದೇನು?

ಸಮಂತಾ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದನ್ನು ಅವರು ಎದುರಿಸಿ ನಿಲ್ಲುತ್ತಿದ್ದಾರೆ. ಅವರಿಗೆ ವಿಜಯ್​ ದೇವರಕೊಂಡ ಮುಂತಾದ ಸೆಲೆಬ್ರಿಟಿಗಳು ಬೆಂಬಲವಾಗಿ ನಿಂತಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್​ ಸೀರಿಸ್​ನಿಂದಲೂ ಸಮಂತಾ ಅವರಿಗೆ ಅವಕಾಶಗಳು ಬರುತ್ತಿದೆ. ‘ಸಿಟಾಡೆಲ್​’ ಇಂಗ್ಲಿಷ್​ ವೆಬ್​ ಸರಣಿಯ ಭಾರತದ ವರ್ಷನ್​ನಲ್ಲಿ ಅವರು ವರುಣ್ ಧವನ್ ಜೊತೆ ನಟಿಸಿದ್ದಾರೆ. ಅದರ ಬಿಡುಗಡೆಗಾಗಿ ಫ್ಯಾನ್ಸ್​ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.