ಮಾಜಿ ಕ್ರಿಕೆಟರ್ ಶ್ರೀಶಾಂತ್ಗೆ ದಕ್ಷಿಣದ ಈ ಖ್ಯಾತ ನಟನ ಜೊತೆ ನಟಿಸೋ ಆಸೆ
ತೆಲುಗು ಚಿತ್ರರಂಗ ಮಾತ್ರವಲ್ಲದೆ ಸಂಪೂರ್ಣ ದಕ್ಷಿಣದಲ್ಲಿ ಜೂನಿಯರ್ ಎನ್‌ಟಿಆರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಜೂನಿಯರ್ ಎನ್‌ಟಿಆರ್ ಅಭಿಮಾನಿ ಬಳಗ ದೊಡ್ಡದಿದೆ. ಶ್ರೀಶಾಂತ್ ಕೂಡ ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿ ಅನ್ನೋದು ವಿಶೇಷ.

ಚಿತ್ರರಂಗಕ್ಕೂ ಕ್ರಿಕೆಟ್ ಲೋಕಕ್ಕೂ ಸಾಕಷ್ಟು ನಂಟಿದೆ. ಕ್ರಿಕೆಟ್ ದಿಗ್ಗಜರು ಫಿಲ್ಮ್ ಇಂಡಸ್ಟ್ರಿಯವರನ್ನು ಮದುವೆ ಆಗಿದ್ದಾರೆ. ಅದೇ ರೀತಿ ಕ್ರಿಕೆಟ್ನಿಂದ ನಿವೃತ್ತಿ ಆದ ಬಳಿಕ ಸಿನಿಮಾದಲ್ಲಿ ನಟಿಸಿದ ಅನೇಕರು ಇದ್ದಾರೆ. ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ದಕ್ಷಿಣದ ಸ್ಟಾರ್ ಹೀರೋ ಜೊತೆ ನಟಿಸೋ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ಬೇರಾರು ಅಲ್ಲ ಜೂನಿಯರ್ ಎನ್‌ಟಿಆರ್ (Jr NTR).
ಟಾಲಿವುಡ್ನಲ್ಲಿ ಮಾತ್ರವಲ್ಲ ದಕ್ಷಿಣದಲ್ಲಿ ಜೂನಿಯರ್ ಎನ್ಟಿಆರ್ಗೆ ಸಖತ್ ಬೇಡಿಕೆ ಇದೆ. ಅವರು ಈಗ ‘ವಾರ್ 2’ ಮೂಲಕ ಹಿಂದಿ ಚಿತ್ರರಂಗಕ್ಕೂ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟ ಹೃತಿಕ್ ರೋಷನ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಅಭಿಮಾನಿ ಬಳಗ ದೊಡ್ಡದಿದೆ. ಶ್ರೀಶಾಂತ್ ಕೂಡ ಜೂನಿಯರ್ ಎನ್‌ಟಿಆರ್ ಅವರ ಅಭಿಮಾನಿ ಅನ್ನೋದು ವಿಶೇಷ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಶ್ರೀಶಾಂತ್ ಅವರು ಹೈದರಾಬಾದ್ನಲ್ಲಿ ಕಾರ್ಯಕ್ರಮ ಒಂದಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಜೂನಿಯರ್ ಎನ್‌ಟಿಆರ್ ಅವರನ್ನು ಶ್ರೀಶಾಂತ್ ಈ ಮೊದಲು ಭೇಟಿ ಮಾಡಿದ್ದರು. ಅಲ್ಲದೆ ಶ್ರೀಶಾಂತ್ ಅವರು ಜೂನಿಯರ್ ಎನ್‌ಟಿಆರ್ ಡ್ಯಾನ್ಸ್ ಸ್ಕಿಲ್ನ ಮೆಚ್ಚಿಕೊಂಡಿದ್ದಾರೆ. ತೆಲುಗು ಚಿತ್ರರಂಗದವರು ಅವಕಾಶ ನೀಡಿದರೆ ಜೂನಿಯರ್ ಎನ್‌ಟಿಆರ್ ಜೊತೆ ನಟಿಸೋದಾಗಿ ಅವರು ಹೇಳಿದ್ದಾರೆ.
ಶ್ರೀಶಾಂತ್ ಅವರು ಟೀಂ ಇಂಡಿಯಾದಲ್ಲಿ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಐಪಿಎಲ್ ಸಂದರ್ಭದಲ್ಲಿ ಅವರು ಫಿಕ್ಸಿಂಗ್ ವಿಚಾರದಲ್ಲಿ ಸಿಕ್ಕಿ ಬಿದ್ದಿದ್ದರು. ಇದರಿಂದ ಅವರು ಕ್ರಿಕೆಟ್ನಿಂದ ಹೊರ ಹೋಗಬೇಕಾಯಿತು. ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2017ರಲ್ಲಿ ‘ಅಕ್ಸರ್ 2’ ಸಿನಿಮಾದಿಂದ ಬಣ್ಣದ ಬದುಕು ಆರಂಭಿಸಿದರು. ಇದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ
ಜೂನಿಯರ್ ಎನ್‌ಟಿಆರ್ ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ. ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಭರ್ಜರಿ ನಿರೀಕ್ಷೆ ಇದೆ. ಈ ಸಿನಿಮಾ ಏಪ್ರಿಲ್ನಲ್ಲಿ ರಿಲೀಸ್ ಆಗುವುದಿಲ್ಲ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಈ ಸಿನಿಮಾ ಅಕ್ಟೋಬರ್ 10ರಂದು ಬಿಡುಗಡೆ ಆಗಲಿದೆ. ಇದಲ್ಲದೆ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಳ್ಳಬೇಕಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Thu, 22 February 24