ವಿಡಿಯೋ ಡಿಲೀಟ್ ಮಾಡಿ; ಗಂಭೀರ್ ವಿರುದ್ಧ ಆರೋಪ ಹೊರಿಸಿದ್ದ ಶ್ರೀಶಾಂತ್‌ಗೆ ಲೀಗಲ್ ನೋಟಿಸ್
Gautam Gambhir-Sreesanth argument: ಗಂಭೀರ್ ನನ್ನನ್ನು ಫಿಕ್ಸರ್ ಎಂದು ನಿಂದಿಸಿದ್ದರು ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಶ್ರೀಶಾಂತ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಪ್ರಸ್ತುತ ವೈರಲ್ ಆಗಿರುವ ವಿಡಿಯೋವನ್ನು ಡಿಲೀಟ್ ಮಾಡಿದ ನಂತರವೇ ಈ ಪ್ರಕರಣದ ಬಗ್ಗೆ ಮಾತುಕತೆ ನಡೆಸುವುದಾಗಿ ಲೆಜೆಂಡ್ಸ್ ಲೀಗ್ ಆಯೋಜಕರು ತಮ್ಮ ನೋಟಿಸ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ಲೆಜೆಂಡ್ಸ್ ಲೀಗ್ (Legends League Cricket) ಪಂದ್ಯದ ವೇಳೆ ಪರಸ್ಪರ ಮಾತಿನ ಚಕಮಕಿ ನಡಿಸಿದ್ದ ಟೀಂ ಇಂಡಿಯಾದ ಮಾಜಿ ಆಟಗಾರರಾದ ಗೌತಮ್ ಗಂಭೀರ್ (Gautam Gambhir) ಮತ್ತು ಎಸ್ ಶ್ರೀಶಾಂತ್ (Sreesanth) ನಡುವಿನ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗಂಭೀರ್ ನನ್ನನ್ನು ಫಿಕ್ಸರ್ ಎಂದು ನಿಂದಿಸಿದ್ದರು ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಶ್ರೀಶಾಂತ್‌ಗೆ ಲೀಗಲ್ ನೋಟಿಸ್ (Legal Notice) ಜಾರಿ ಮಾಡಲಾಗಿದೆ. ಅಲ್ಲದೆ ಪ್ರಸ್ತುತ ವೈರಲ್ ಆಗಿರುವ ವಿಡಿಯೋವನ್ನು ಡಿಲೀಟ್ ಮಾಡಿದ ನಂತರವೇ ಈ ಪ್ರಕರಣದ ಬಗ್ಗೆ ಮಾತುಕತೆ ನಡೆಸುವುದಾಗಿ ಲೆಜೆಂಡ್ಸ್ ಲೀಗ್ ಆಯೋಜಕರು ತಮ್ಮ ನೋಟಿಸ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ವಾಸ್ತವವಾಗಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಸ್ವಲ್ಪ ವಾಗ್ವಾದ ನಡೆದಿತ್ತು. ನಂತರ ವೇಗಿ ಶ್ರೀಶಾಂತ್, ಗಂಭೀರ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಈ ವಿಡಿಯೋಗಳಲ್ಲಿ ಮೇಲೆ ಹೇಳಿದಂತೆ ಗಂಭೀರ್ ನನ್ನನ್ನು ಫಿಕ್ಸರ್ ಎಂದು ಕರೆದು ಅವಮಾನಿಸಿದರು. ಅಲ್ಲದೆ ಅಂಪೈರ್ ಉಪಸ್ಥಿತಿಯಲ್ಲೂ ಗಂಭೀರ್ ಇದೇ ರೀತಿಯಾಗಿ ನನ್ನನ್ನು ನಿಂದಿಸಿದರು ಎಂದು ಆರೋಪಿಸಿದ್ದರು.
‘ಫಿಕ್ಸರ್ ಎಂದು ನಿಂದಿಸಿದರು’; ಗೌತಮ್ ಮೇಲೆ ಶ್ರೀಶಾಂತ್ ಗಂಭೀರ ಆರೋಪ! ಹೊಸ ವಿಡಿಯೋ ರಿಲೀಸ್
ಇದೀಗ ಈ ಪ್ರಕರಣದ ಗಂಭೀರತೆಯನ್ನು ಅರಿತ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಆಯೋಜಕರು ಶ್ರೀಶಾಂತ್‌ಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಇದರೊಂದಿಗೆ, ಗಂಭೀರ್ ವಿರುದ್ಧ ಆರೋಪ ಹೊರಿಸಿ ಮಾಡಿರುವ ಎಲ್ಲಾ ವೀಡಿಯೊಗಳನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡುವಂತೆ ಸೂಚನೆ ನೀಡಿದ್ದು, ಆ ಬಳಿಕವಷ್ಟೇ ಈ ವಿಚಾರದ ಬಗ್ಗೆ ಮಾತುಕತೆ ನಡೆಸುವುದಾಗಿ ಆಯೋಜಕರು ತಿಳಿಸಿದ್ದಾರೆ.
ಶ್ರೀಶಾಂತ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೋಗಳಲ್ಲಿರುವಂತೆ, ಗಂಭೀರ್ ನನ್ನನ್ನು ಅಂಪೈರ್ ಮುಂದೆಯೇ ಫಿಕ್ಸರ್ ಎಂದು ಕರೆದು ಅವಮಾನಿಸಿದರು ಎಂದು ಹೇಳಿಕೊಂಡಿದ್ದಾರೆ. ಆದರೆ ಪಂದ್ಯದ ಸಮಯದಲ್ಲಿ ನಡೆದ ಈ ಇಬ್ಬರ ನಡುವಿನ ವಾಕ್ಸಮರದ ಬಗ್ಗೆ ಅಂಪೈರ್ಗಳು, ಆಯೋಜಕರಿಗೆ ನೀಡಿರುವ ವರದಿಯಲ್ಲಿ ಗಂಭೀರ್, ಫಿಕ್ಸರ್ ಪದವನ್ನು ಬಳಸಿಲ್ಲ ಎಂದು ಉಲ್ಲೇಖಿಸಲಾಗಿದೆ. ಇದೀಗ ಗಂಭೀರ್ ಮತ್ತು ಶ್ರೀಶಾಂತ್ ಪ್ರತಿಕ್ರಿಯೆಗಾಗಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Fri, 8 December 23