‘ಆ ಜಾಗದಲ್ಲಿ ನಿಲ್ಲಲು ಶಿವಣ್ಣ ಸ್ಫೂರ್ತಿ’: ‘ಜೋಗ್ 101’ ಘಟನೆ ವಿವರಿಸಿದ ವಿಜಯ್ ರಾಘವೇಂದ್ರ
‘ಜೋಗ್ 101’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ತೇಜಸ್ವಿನಿ ಶೇಖರ್, ರಾಜೇಶ್ ನಟರಂಗ, ಗೋವಿಂದೇ ಗೌಡ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ತಿಲಕ್ ಶೇಖರ್, ಕಡ್ಡಿಪುಡಿ ಚಂದ್ರ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಪಾತ್ರದ ಬಗ್ಗೆ ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ.
ನಟ ವಿಜಯ್ ರಾಘವೇಂದ್ರ ಅವರು ‘ಜೋಗ್ 101’ (Jog 101) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ವಿಜಯ್ ರಾಘವೇಂದ್ರ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದ ಚಿತ್ರೀಕರಣ ಜೋಗ ಜಲತಾಪದ ಸುತ್ತಮುತ್ತ ಮಾಡಲಾಗಿದೆ. ಅದು ಅಪಾಯಕಾರಿ ಜಾಗ. ಅಂಥ ಜಾಗದಲ್ಲಿ ನಿಂತುಕೊಳ್ಳಲು ತಮಗೆ ಶಿವರಾಜ್ಕುಮಾರ್ (Shivarajkumar) ಸ್ಫೂರ್ತಿ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. ‘ಟ್ರೇಲರ್ನಲ್ಲಿ ನಾವು ಹಿಂಟ್ ನೀಡಿದ್ದೇವೆ. ಇದು ಆ್ಯಕ್ಷನ್-ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಜೋಗ ಜಲಪಾತದಲ್ಲಿ ನಾನು ನಿಂತಿದ್ದ ಜಾಗದ ಬಗ್ಗೆ ಒಂದು ಅನುಭವ ಇದೆ. ಅಲ್ಲಿ ನಿಂತುಕೊಂಡರೆ ಎಂಥವರನ್ನೂ ನಡುಗಿಸುತ್ತದೆ. ನನ್ನ ಎದೆಬಡಿತವನ್ನು ನಾನೇ ಕಂಟ್ರೋಲ್ಗೆ ತೆಗೆದುಕೊಳ್ಳಬೇಕಾಯ್ತು. ಅದಕ್ಕೆ ಶಿವಣ್ಣ ನನಗೆ ಸ್ಫೂರ್ತಿ’ ಎಂದಿದ್ದಾರೆ ವಿಜಯ್ ರಾಘವೇಂದ್ರ (Vijay Raghavendra). ಈ ಸಿನಿಮಾಗೆ ವಿಜಯ್ ಕನ್ನಡಿಗ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ರಾಘು ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ

Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?

Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ

2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
