ಅಮ್ಮನ ಬೆನ್ನೇರಿದ ಮರಿ ಕರಡಿಗಳ ತುಂತಾಟಕ್ಕೆ ಮನಸೋತ ಜನ; ಇಲ್ಲಿದೆ ವಿಡಿಯೋ
ತಾಯಿ ಮಗುವಿನ ಬಾಂಧವ್ಯವೇ ಹಾಗೇ, ಕೇವಲ ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲೂ ಕೂಡ ಈ ಬಾಂಧವ್ಯ ಹೊರತಾಗಿಲ್ಲ ಎಂಬುದಕ್ಕೆ ಈ ಕರಡಿಗಳು ಸಾಕ್ಷ್ಯ ನೀಡಿದೆ. ಇಂದು(ಮಾ.03) ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಜಂಗಲ್ ಲಾಡ್ಜ್ ಬಳಿ ಅಮ್ಮನ ಬೆನ್ನೇರಿ ಮರಿ ಕರಡಿಗಳ ತುಂತಾಟ, ನೋಡುಗರ ಮನಸ್ಸನ್ನ ಮುದಗೊಳಿಸಿದೆ.
ವಿಜಯನಗರ, ಮಾ.03: ಅಮ್ಮನ ಬೆನ್ನೇರಿ ಮರಿ ಕರಡಿಗಳ(Bear) ತುಂತಾಟವನ್ನ ಇಂದು(ಮಾ.03) ವಿಜಯನಗರ ಜಿಲ್ಲೆಯ ಹೊಸಪೇಟೆ(Hosapete)ತಾಲೂಕಿನ ಕಮಲಾಪುರ ಜಂಗಲ್ ಲಾಡ್ಜ್ ಬಳಿ ನೋಡಿ ಜನರು ಸಂತಸಪಟ್ಟರು. ಎರಡು ಕರಡಿ ಮರಿಗಳ ತುಂತಾಟಕ್ಕೆ ನೆರೆದಿದ್ದ ಜನ ಮನಸೋತಿದ್ದಾರೆ. ಇದು ಜಂಗಲ್ ಸಫಾರಿಗೆ ಬಂದ ಪ್ರವಾಸಿಗರ ಕಾತುರ, ಕೌತುಕ ಹೆಚ್ಚಿಸಿದೆ. ಇನ್ನು ಇದು ಹತ್ತು ದಿನದ ಕರಡಿಗಳಾಗಿದ್ದು, ಅಮ್ಮನ ಜೊತೆ ಆಟಕ್ಕಿಳಿದಿವೆ. ಈ ಮುಂದಾದ ಕರಡಿ ಮರಿಗಳ ತುಂತಾಟವನ್ನ ಸಫಾರಿಗೆ ತೆರಳಿದ್ದ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Mar 03, 2024 07:49 PM
Latest Videos