Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು ಜಿಲ್ಲೆ ರೈತರಿಗೆ ಅನೆಗಳ ನಂತರ ಕರಡಿ ಕಾಟ, ಜೇನುಕೃಷಿ ನಾಶಮಾಡುತ್ತಿರುವ ಕರಡಿಗಳು

ಚಿಕ್ಕಮಗಳೂರು ಜಿಲ್ಲೆ ರೈತರಿಗೆ ಅನೆಗಳ ನಂತರ ಕರಡಿ ಕಾಟ, ಜೇನುಕೃಷಿ ನಾಶಮಾಡುತ್ತಿರುವ ಕರಡಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 06, 2024 | 10:34 AM

ಮಲೆನಾಡು ಪ್ರದೇಶಗಳಲ್ಲಿ ಜೇನು ಸಾಕಾಣಿಕೆ ಒಂದು ಪ್ರಮುಖ ಕಸುಬು. ಕರಡಿಗಳಿಗೆ ಜೇನುತಪ್ಪ ಅಂದರೆ ಪಂಚಪ್ರಾಣ. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಹೊನ್ನಾಳ ಗ್ರಾಮಗಳು ಮತ್ತು ತರೀಕೆರೆಯಲ್ಲಿ ಬಯಲುಸೀಮೆ ಗ್ರಾಮಗಳ ರೈತರು ಜೇನುಕೃಷಿ ಮಾಡುತ್ತಿರುವ ತೋಟಗಳಿಗೆ ನುಗ್ಗಿ ಅದನ್ನು ನಾಶಮಾಡುತ್ತಿವೆ. ಮಲ್ಲಂದೂರು ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಚಿಕ್ಕಮಗಳೂರು: ವನ್ಯಜೀವಿಗಳ (wild animals) ಕಾಟಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಜಿಲ್ಲೆಯ ಹಲವಾರು ಗ್ರಾಮಗಳ ಜನ ನಿಜಕ್ಕೂ ಶಾಪಗ್ರಸ್ತರು. ಕಾಡಾನೆ, ಚಿರತೆ ಮೊದಲಾದ ಕಾಡುಮೃಗಳು ಪದೇಪದೆ ಜಮೀನು-ತೋಟ ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗಿ ಬೆಳೆ ಹಾಳುನಾಡುತ್ತಿವೆ ಮತ್ತು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡುತ್ತಿವೆ. ಆನೆ ಮತ್ತು ಹಿಂಸ್ರಪಶುಗಳ ನಂತರ ಈಗ ಕರಡಿ ಕಾಟವನ್ನೂ (bear menace) ಸಹಿಸಬೇಕಾದ ಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಜೇನು ಸಾಕಾಣಿಕೆ ಒಂದು ಪ್ರಮುಖ ಕಸುಬು. ಕರಡಿಗಳಿಗೆ ಜೇನುತಪ್ಪ ಅಂದರೆ ಪಂಚಪ್ರಾಣ. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಹೊನ್ನಾಳ ಗ್ರಾಮಗಳು ಮತ್ತು ತರೀಕೆರೆಯಲ್ಲಿ ಬಯಲುಸೀಮೆ ಗ್ರಾಮಗಳ ರೈತರು ಜೇನುಕೃಷಿ ಮಾಡುತ್ತಿರುವ ತೋಟಗಳಿಗೆ ನುಗ್ಗಿ ಅದನ್ನು ನಾಶಮಾಡುತ್ತಿವೆ. ಮಲ್ಲಂದೂರು ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಿನ್ನೆ ರಾತ್ರಿ ವಾಹನವೊಂದರ ಮುಂಭಾಗದಲ್ಲಿ ಕರಡಿಯೊಂದು ರಸ್ತೆಗುಂಟ ಹೆಡ್ ಲೈಟ್ ಬೆಳಕು ಅನುಸರಿಸಿಕೊಂಡು ಓಡುತ್ತಿರುವುದನ್ನು ನೋಡಬಹುದು. ವಿಡಿಯೋ ನೋಡುತ್ತಿದ್ದರೆ, ಕರಡಿಗೆ ರಸ್ತೆ ಕಾಣಿಸಲು ಕಾರಿನ ಹೆಡ್ ಲೈಟ್ ಬೆಳಕು ತೋರಿದಂತಿದೆ! ತನ್ನ ಎದುರುನಿಂದಲೂ ವಾಹನವೊಂದು ಬರುತ್ತಿರೋದು ಗೊತ್ತಾದ ಕೂಡಲೇ ಕರಡಿ ರಸ್ತೆಬಿಟ್ಟು ಅರಣ್ಯಪ್ರದೇಶದೊಳಗೆ ಓಡುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ