AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಪ್ಪನಹಳ್ಳಿ: ಯುವಕನ ಮೇಲೆ ಎರಡು ಕರಡಿಗಳಿಂದ ದಾಳಿ, ಗಂಭೀರ ಗಾಯ

ಜಮೀನಿಗೆ ನೀರು ಹಾಯಿಸಲು ಬೆಳಗ್ಗೆ ಹೋಗಿದ್ದ ಯುವಕನೊಬ್ಬ ವಾಪಾಸು ಬರುವಾಗ ದಾರಿ ಮಧ್ಯೆ ಹಳ್ಳದಲ್ಲಿದ್ದ ಎರಡು ಕರಡಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹರಪ್ಪನಹಳ್ಳಿ: ಯುವಕನ ಮೇಲೆ ಎರಡು ಕರಡಿಗಳಿಂದ ದಾಳಿ, ಗಂಭೀರ ಗಾಯ
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಯುವಕನ ಮೇಲೆ ದಾಳಿ ನಡೆಸಿದ ಕರಡಿಗಳು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Oct 15, 2023 | 7:57 AM

Share

ದಾವಣಗೆರೆ, ಅ.15: ಜಮೀನಿಗೆ ನೀರು ಹಾಯಿಸಲು ಬೆಳಗ್ಗೆ ಹೋಗಿದ್ದ ಯುವಕನೊಬ್ಬ ವಾಪಾಸು ಬರುವಾಗ ದಾರಿ ಮಧ್ಯೆ ಹಳ್ಳದಲ್ಲಿದ್ದ ಎರಡು ಕರಡಿಗಳು ದಾಳಿ (Bear Attack) ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆನಂದ (28) ತೀವ್ರ ಗಾಯಗೊಂಡ ಯುವಕ. ರಂಗಾಪುರ ಗ್ರಾಮದ ನಿವಾಸಿ ಆನಂದ ಅವರು ಕೆ.ಕಲ್ಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದರು. ಜಮೀನಿಗೆ ನೀರು ಹಾಯಿಸಲು ಶನಿವಾರ ಬೆಳಗ್ಗೆ ಹೋಗಿ ವಾಪಾಸು ಬರುವಾಗ ದಾರಿ ಮಧ್ಯೆ ಹಳ್ಳದಲ್ಲಿ ಅವಿತು ಕುಳಿತಿದ್ದ ಎರಡು ಕರಡಿಗಳು ದಾಳಿ ನಡೆಸಿವೆ.

ಇದನ್ನೂ ಓದಿ: ವಿಜಯನಗರ: ಪ್ಯಾಲೆಸ್ಟೀನ್​ ಬೆಂಬಲಿಸಿ ಸ್ಟೇಟಸ್​ ಹಾಕಿದ್ದ ಯುವಕನನ್ನು ವಶಕ್ಕೆ ಪಡೆದ ಪೊಲೀಸ್​​

ಘಟನೆಯಲ್ಲಿ ಆನಂದ ಅವರ ಮುಖ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ