AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ರಾಮ್​ ಚರಣ್​ ಫೋಟೋ ಲೀಕ್​, ಇಂದು ‘ಗೇಮ್​ ಚೇಂಜರ್​’ ಕಥೆಯೇ ಬಹಿರಂಗ

‘ಗೇಮ್​ ಚೇಂಜರ್​’ ಸಿನಿಮಾದಲ್ಲಿ ರಾಮ್​ ಚರಣ್​ ಅವರ ಪಾತ್ರ ಹೇಗಿರಲಿದೆ? ಈ ಸಿನಿಮಾದ ಕಥೆಯ ಎಳೆ ಏನು? ಒಟಿಟಿ ಪ್ರಸಾರ ಹಕ್ಕು ಯಾರ ಪಾಲಾಗಿದೆ ಎಂಬಿತ್ಯಾದಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಈ ಸಿನಿಮಾದಲ್ಲಿ ರಾಮ್​ ಚರಣ್​ ಮತ್ತು ಕಿಯಾರಾ ಅಡ್ವಾಣಿ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲೂ ಈ ಚಿತ್ರಕ್ಕೆ ಶೂಟಿಂಗ್​ ಮಾಡಲಾಗಿದೆ.

ಅಂದು ರಾಮ್​ ಚರಣ್​ ಫೋಟೋ ಲೀಕ್​, ಇಂದು ‘ಗೇಮ್​ ಚೇಂಜರ್​’ ಕಥೆಯೇ ಬಹಿರಂಗ
ರಾಮ್​ ಚರಣ್​
ಮದನ್​ ಕುಮಾರ್​
|

Updated on: Mar 19, 2024 | 10:19 PM

Share

ಕೆಲವೇ ದಿನಗಳ ಹಿಂದೆ ‘ಗೇಮ್​ ಚೇಂಜರ್​’ (Game Changer) ಸಿನಿಮಾದ ಫೋಟೋ ಲೀಕ್​ ಆಗಿತ್ತು. ಈಗ ಈ ಸಿನಿಮಾದ ಕಥೆ ಏನು ಎಂಬುದು ಬಹಿರಂಗ ಆಗಿದೆ. ಈ ಚಿತ್ರದಲ್ಲಿ ನಟ ರಾಮ್​ ಚರಣ್​​ (Ram Charan) ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಶಂಕರ್​ ನಿರ್ದೇಶನ ಮಾಡುತ್ತಿರುವ ‘ಗೇಮ್​ ಚೇಂಜರ್​’ ಚಿತ್ರದಲ್ಲಿ ಎಲೆಕ್ಷನ್​ ಕುರಿತಾದ ಕಥೆ ಇರಲಿದೆ ಎಂದು ಈ ಮೊದಲೇ ಸುಳಿವು ನೀಡಲಾಗಿತ್ತು. ಈಗ ಕಥೆಯ ಬಗ್ಗೆ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. ಅಲ್ಲದೇ, ಈ ಸಿನಿಮಾದ ಒಟಿಟಿ (Game Changer OTT) ಪ್ರಸಾರ ಹಕ್ಕು ಯಾವ ಸಂಸ್ಥೆಯ ಪಾಲಾಗಿದೆ ಎಂಬುದು ಕೂಡ ಗೊತ್ತಾಗಿದೆ.

‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿ ಸಂಸ್ಥೆ ಇಂದು (ಮಾರ್ಚ್​ 19) ಹಲವು ಅಚ್ಚರಿಗಳನ್ನು ನೀಡಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮುಂಬರುವ ಅನೇಕ ಕಂಟೆಂಟ್​ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಗೇಮ್​ ಚೇಂಜರ್​’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಬಳಿಕ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಇದನ್ನು ತಿಳಿಸುವ ಸಲುವಾಗಿ ಹೊಸ ಪೋಸ್ಟರ್​ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಚಾಮುಂಡೇಶ್ವರಿ ದರ್ಶನ ಪಡೆದ ರಾಮ್​ ಚರಣ್​; ಮೈಸೂರಿನಲ್ಲಿ ‘ಗೇಮ್​ ಚೇಂಜರ್​’ ಚಿತ್ರೀಕರಣ

ಸೋಶಿಯಲ್​ ಮೀಡಿಯಾದಲ್ಲಿ ‘ಅಮೇಜಾನ್​ ಪ್ರೈಂ ವಿಡಿಯೋ’ ಹಂಚಿಕೊಂಡಿರುವ ಹೊಸ ಪೋಸ್ಟರ್​ಗೆ ನೀಡಿದ ಕ್ಯಾಪ್ಷನ್​ನಲ್ಲಿ ‘ಗೇಮ್​ ಚೇಂಜರ್​’ ಸಿನಿಮಾದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ‘ಆಡಳಿತದ ಆಟ ಬದಲಾಯಿಸಲು ನ್ಯಾಯಯುತವಾಗಿ ಎಲೆಕ್ಷನ್​ ನಡೆಸಿ, ರಾಜಕೀಯದ ಭ್ರಷ್ಟಾಚಾರದ ವಿರುದ್ಧ ಓರ್ವ ಪ್ರಾಮಾಣಿಕ ಐಎಎಸ್​ ಆಫೀಸರ್​ ಹೋರಾಡುತ್ತಾನೆ’ ಎಂದು ಕ್ಯಾಪ್ಷನ್​ ನೀಡಲಾಗಿದೆ. ಅಂದರೆ, ಈ ಸಿನಿಮಾದಲ್ಲಿ ರಾಮ್​ ಚರಣ್​​ ಅವರು ಐಎಎಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ.

‘ಅಮೇಜಾನ್​ ಪ್ರೈಂ ವಿಡಿಯೋ’ ಸೋಶಿಯಲ್​ ಮೀಡಿಯಾ ಪೋಸ್ಟ್​:

‘ಗೇಮ್​ ಚೇಂಜರ್​’ ಸಿನಿಮಾದಲ್ಲಿ ರಾಮ್​ ಚರಣ್​ ಅವರು ದ್ವಿಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೈಸೂರಿನಲ್ಲಿ ಈ ಸಿನಿಮಾದ ಶೂಟಿಂಗ್​ ನಡೆದಿದೆ. ಹಾಗಾಗಿ ಕರ್ನಾಟಕದ ಸಿನಿಪ್ರಿಯರು ಕೂಡ ಈ ಸಿನಿಮಾ ನೋಡಲು ಕಾದಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದಿಂದ ಜಾಗತಿಕ ಮಟ್ಟದಲ್ಲಿ ಮಿಂಚಿದ ರಾಮ್​ ಚರಣ್​ ಅವರು ‘ಗೇಮ್​ ಚೇಂಜರ್’ ಚಿತ್ರದ ಮೂಲಕ ಗೆಲ್ಲಬೇಕಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಂಕರ್​ ನಿರ್ದೇಶನದ ಸಿನಿಮಾ ಎಂಬ ಕಾರಣದಿಂದಲೂ ಹೈಪ್​ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!