AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್​ ಚರಣ್ ನಟನೆಯ ‘ಗೇಮ್ ಚೇಂಜರ್’: ಹಾಡು ಚಿತ್ರೀಕರಣಕ್ಕೆ 60 ಕೋಟಿಗೂ ಹೆಚ್ಚು ಖರ್ಚು

Ram Charan: ‘ರೋಬೋ’, ‘ಶಿವಾಜಿ’, ‘ಬಾಯ್ಸ್’, ‘ಅನ್ನಿಯನ್’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳ ನೀಡಿರುವ ಶಂಕರ್, ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶಿಸುತ್ತಿದ್ದು, ಪ್ರತಿ ಹಾಡಿನ ಚಿತ್ರೀಕರಣಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಿದ್ದಾರೆ ಗೊತ್ತೆ?

ರಾಮ್​ ಚರಣ್ ನಟನೆಯ ‘ಗೇಮ್ ಚೇಂಜರ್’: ಹಾಡು ಚಿತ್ರೀಕರಣಕ್ಕೆ 60 ಕೋಟಿಗೂ ಹೆಚ್ಚು ಖರ್ಚು
ರಾಮ್-ಶಂಕರ್
ಮಂಜುನಾಥ ಸಿ.
|

Updated on: Mar 19, 2024 | 5:13 PM

Share

ಆರ್​ಆರ್​ಆರ್’ (RRR) ಸಿನಿಮಾ ಬಳಿಕ ರಾಮ್ ಚರಣ್ (Ram Charan) ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಅವರೀಗ ಕಡಿಮೆ ಬಜೆಟ್​ ಸಿನಿಮಾಗಳತ್ತ ಮುಖ ಸಹ ತಿರುಗಿಸುವುದಿಲ್ಲ. ‘ಆರ್​ಆರ್​ಆರ್’ ಸಿನಿಮಾದ ಬಳಿಕ ರಾಮ್ ಚರಣ್ ಭಾರಿ ಬಜೆಟ್​ನ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಅದುವೇ ‘ಗೇಮ್ ಚೇಂಜರ್’. ದಕ್ಷಿಣ ಭಾರತದ ಬಡಾ ನಿರ್ದೇಶಕರಲ್ಲಿ ಒಬ್ಬರಾದ ಶಂಕರ್ ಈ ಸಿನಿಮಾದ ನಿರ್ದೇಶಕ. ಯಾವುದೇ ಸಿನಿಮಾ ಮಾಡಿದರೂ ಭಾರಿ ದೊಡ್ಡ ಸ್ಕೇಲ್​ನಲ್ಲಿ ಮಾಡುವುದು ಇವರ ಶೈಲಿ. ‘ರೋಬೋ’, ‘ಶಿವಾಜಿ’, ‘ಅನ್ನಿಯನ್’ ಹೀಗೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಇವರ ಖಾತೆಯಲ್ಲಿದೆ. ಇದೀಗ ರಾಮ್ ಚರಣ್​ಗಾಗಿ ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶನ ಮಾಡುತ್ತಿರುವ ಶಂಕರ್, ಕೇವಲ ಹಾಡುಗಳ ಚಿತ್ರೀಕರಣಕ್ಕೆ 60 ಕೋಟಿಗೂ ಹೆಚ್ಚು ಮೊತ್ತ ವ್ಯಯಿಸಿದ್ದಾರಂತೆ.

ಶಂಕರ್ ಶೈಲಿಯೇ ಅದು. ಸಿನಿಮಾಗಳ ಹಾಡುಗಳು ಹಾಗೂ ಫೈಟ್​ಗಳ ಬಗ್ಗೆ ಅತಿಯಾದ ಕಾಳಜಿವಹಿಸಿ ಸಂಪೂರ್ಣ ಭಿನ್ನವಾಗಿ ಹಾಗೂ ಸಖತ್ ರಿಚ್ ಆಗಿ ಚಿತ್ರೀಕರಣ ಮಾಡುತ್ತಾರೆ ಶಂಕರ್. ಸಾವಿರ-ಎರಡು ಸಾವಿರ ಮಂದಿ ಡ್ಯಾನ್ಸರ್​ಗಳನ್ನು ಇಟ್ಟುಕೊಂಡು ಶೂಟ್ ಮಾಡುವುದು, ಐದು ನಿಮಿಷದ ಹಾಡಿಗೆ ಭಾರಿ ದೊಡ್ಡ ಸೆಟ್​ ಹಾಕುವುದು, ಹಾಡಿನಲ್ಲಿ ಹೊಸದಂದು ಕತೆಯನ್ನೇ ಹೇಳಿಬಿಡುವುದು ಹೀಗೆ ಒಟ್ಟಾರೆ ಸಿನಿಮಾಕ್ಕೆ ಎಷ್ಟು ಹಣ ವ್ಯಯಿಸುತ್ತಾರೆಯೇ ಅಷ್ಟೆ ಹಣವನ್ನು ಹಾಡುಗಳ ಚಿತ್ರೀಕರಣಕ್ಕೂ ಶಂಕರ್ ವ್ಯಯಿಸುತ್ತಾರೆ.

ಇದನ್ನೂ ಓದಿ:ರಾಮ್ ಚರಣ್ ಅನ್ನು ಅವಮಾನಿಸಿದರೇ ಶಾರುಖ್ ಖಾನ್? ಇಲ್ಲಿದೆ ಸತ್ಯ

ಈಗ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದು ಈ ಸಿನಿಮಾದ ಐದು ಹಾಡುಗಳಿಗೆ ಈಗಾಗಲೇ 60 ಕೋಟಿಗೂ ಹೆಚ್ಚು ಮೊತ್ತವನ್ನು ಶಂಕರ್ ಖರ್ಚು ಮಾಡಿದ್ದಾರಂತೆ. ಇದು ಊಹಾ-ಪೋಹದ ಕತೆಯಲ್ಲ. ಈ ವಿಷಯವನ್ನು ಸಿನಿಮಾದ ನಿರ್ಮಾಪಕರೇ ಹೇಳಿಕೊಂಡಿದ್ದಾರೆ. ‘ಗೇಮ್ ಚೇಂಜರ್’ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಿದ್ದು, ಇತ್ತೀಚೆಗಿನ ಸಂದರ್ಶನದಲ್ಲಿ ಶಂಕರ್, ಹಾಡುಗಳಿಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದಾಗಿ ಹೇಳಿದ್ದಾರೆ.

‘ಸಿನಿಮಾದ ಶೂಟಿಂಗ್ ತುಂಬಾ ಚೆನ್ನಾಗಿ ಸಾಗುತ್ತಿದೆ. ಈ ವರೆಗೆ 75% ಶೂಟಿಂಗ್ ಅನ್ನು ನಾವು ಮುಗಿಸಿದ್ದೇವೆ. ಶಂಕರ್, ತಮ್ಮದೇ ರೀತಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ವರೆಗೆ ಚಿತ್ರೀಕರಿಸಲಾದ ಐದು ಹಾಡುಗಳಿಗೆ ಪ್ರತಿ ಹಾಡಿಗೆ, 10 ರಿಂದ 12 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಅದು ಅವರ ಶೈಲಿ, ನಾನು ಈಗ ಅವರ ಶೈಲಿಗೆ ನನ್ನ ಬಜೆಟ್ ಅನ್ನು ಅಡ್ಜೆಸ್ಟ್ ಮಾಡಿಕೊಂಡು ಬಿಟ್ಟಿದ್ದೇನೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಶಂಕರ್, ರಾಮ್ ಚರಣ್​ಗೆ ಚೆನ್ನಾಗಿ ಹೊಂದುವ ಕತೆಯನ್ನು ಆರಿಸಿ ಸಿನಿಮಾ ಮಾಡುತ್ತಿದ್ದಾರೆ’ ಎಂದಿದ್ದಾರೆ.

ರಾಮ್ ಚರಣ್​ ಹಾಗೂ ಶಂಕರ್ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಶಂಕರ್, ‘ಗೇಮ್ ಚೇಂಜರ್’ ಸಿನಿಮಾದ ಜೊತೆಗೆ ಕಮಲ್ ಹಾಸನ್ ಜೊತೆಗೆ ‘ಇಂಡಿಯನ್ 2’ ಸಿನಿಮಾದ ನಿರ್ದೇಶನವನ್ನೂ ಮಾಡಿದ್ದಾರೆ. ‘ಗೇಮ್ ಚೇಂಜರ್’ ಸಿನಿಮಾ, ರಾಜಕೀಯ ಥ್ರಿಲ್ಲರ್ ಕತೆಯಾಗಿದ್ದು, ಸಿನಿಮಾದಲ್ಲಿ ರಾಮ್ ಚರಣ್ ಎದುರು ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ತೆಲುಗಿನ ಜನಪ್ರಿಯ ನಟ ಸುನಿಲ್ ಸಹ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!