AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​ಆರ್’ ಸಿನಿಮಾ ಬಗ್ಗೆ ಖ್ಯಾತ ಗಾಯಕ ಎಡ್ ಶೀರನ್ ಮಾತು

Ed Sheeran: ಭಾರತಕ್ಕೆ ಬಂದಿರುವ ಜಗದ್ವಿಖ್ಯಾತ ಗಾಯಕ ಎಡ್ ಶೀರನ್, ಆಸ್ಕರ್ ಗೆದ್ದ ‘ಆರ್​ಆರ್​ಆರ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ತಮಗೆ ಏಕೆ ಇಷ್ಟವಾಯ್ತು ಎಂಬುದನ್ನು ಹೇಳಿದ್ದಾರೆ.

‘ಆರ್​ಆರ್​ಆರ್’ ಸಿನಿಮಾ ಬಗ್ಗೆ ಖ್ಯಾತ ಗಾಯಕ ಎಡ್ ಶೀರನ್ ಮಾತು
ಮಂಜುನಾಥ ಸಿ.
|

Updated on: Mar 15, 2024 | 10:52 AM

Share

ಜಗದ್ವಿಖ್ಯಾತ ಗಾಯಲ ಎಡ್ ಶೀರನ್ (Ed Sheeran) ಭಾರತಕ್ಕೆ ಬಂದಿದ್ದಾರೆ. ಭಾರತದ ಸೆಲೆಬ್ರಿಟಿಗಳು ಎಡ್ ಶೀರನ್ ಅವರನ್ನು ಬಹಳ ಖುಷಿಯಿಂದ ಸ್ವಾಗತಿಸಿದ್ದು, ಪಾರ್ಟಿಗಳ ಮೇಲೆ ಪಾರ್ಟಿಗಳನ್ನು ನೀಡುತ್ತಿದ್ದಾರೆ. ಭಾರತಕ್ಕೆ ಬಂದ ಕೂಡಲೇ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಎಡ್ ಶೀರನ್ ಶಾಲೆಯಲ್ಲಿ ಮಕ್ಕಳ ಮುಂದೆ ಹಾಡು ಹಾಡಿದ್ದರು. ಅದಾದ ಬಳಿಕ ಶಾರುಖ್ ಖಾನ್ ಮನೆಗೆ ಹೋಗಿದ್ದರು. ಬಳಿಕ ಕಮಿಡಿಯನ್, ನಟ ಕಪಿಲ್ ಶರ್ಮಾ, ಎಡ್ ಶೀರನ್​ಗಾಗಿ ಭಾರಿ ದೊಡ್ಡ ಪಾರ್ಟಿಯನ್ನು ಆಯೋಜಿಸಿದ್ದರು. ಇದೆಲ್ಲದರ ಜೊತೆಗೆ ಸಂದರ್ಶನಗಳ ಮೇಲೆ ಸಂದರ್ಶನಗಳನ್ನು ಸಹ ಈ ಖ್ಯಾತ ಗಾಯಕ ನೀಡುತ್ತಿದ್ದಾರೆ. ಭಾರತದ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿಕೊಂಡೇ ಬಂದಂತಿರುವ ಎಡ್ ಶೀರನ್, ಆಸ್ಕರ್ ಗೆದ್ದ ಭಾರತದ ಸಿನಿಮಾ ‘ಆರ್​ಆರ್​ಆರ್’ ಬಗ್ಗೆ ಗೌರವದಿಂದ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಎಡ್ ಶೀರನ್​ಗೆ ‘ನಿಮಗೆ ‘ನಾಟು-ನಾಟು’ ಗೊತ್ತೆ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿರುವ ಎಡ್ ಶೀರನ್, ‘ನನ್ನ ಕೆಲವು ಆಪ್ತ ಗೆಳೆಯರೊಟ್ಟಿಗೆ ಕೂತು ನಾನು ‘ಆರ್​ಆರ್​ಆರ್’ ಸಿನಿಮಾ ನೋಡಿದ್ದೆ. ಅದೊಂದು ಅದ್ಭುತವಾದ ಸಿನಿಮಾ, ಮೂರು ಗಂಟೆಯ ಅದ್ಭುತ ಅದು. ಹಾಡುಗಳು ಅದರಲ್ಲೂ ‘ನಾಟು-ನಾಟು’ ಬಹಳ ಅದ್ಭುತವಾದ ಹಾಡು. ಸಿನಿಮಾವನ್ನು ಕಟ್ಟಿರುವ ರೀತಿಯೂ ಅದ್ಭುತವಾದುದು, ಸಿನಿಮಾದ ಥ್ರಿಲ್ಲಿಂಗ್ ಅಂಶಕ್ಕೆ ನಾನು ಮಾರು ಹೋದೆ’ ಎಂದಿದ್ದಾರೆ.

ಇದನ್ನೂ ಓದಿ:ಮನೆಗೆ ಭೇಟಿ ನೀಡಿದ ಖ್ಯಾತ ಗಾಯಕನಿಗೆ ಉಡುಗೊರೆ ಕೊಟ್ಟ ಶಾರುಖ್ ಪತ್ನಿ ಗೌರಿ

ಎಡ್ ಶೀರನ್ ತಮ್ಮ ಸಿನಿಮಾ ಬಗ್ಗೆ ಮಾತನಾಡಿರುವ ವಿಡಿಯೋವನ್ನು ‘ಆರ್​ಆರ್​ಆರ್​’ ತಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ‘ಎಡ್ ಶೀರನ್​’ಗೆ ‘ನಾಟು-ನಾಟು’ ಮಾತ್ರವೇ ಅಲ್ಲ, ಇನ್ನೂ ಹೆಚ್ಚು ಗೊತ್ತು’ ಎಂದು ಬರೆದುಕೊಂಡಿದ್ದಾರೆ. ಸಂದರ್ಶನದಲ್ಲಿ ಎಡ್ ಶೀರನ್, ‘ಆರ್​ಆರ್​ಆರ್’ ಸಿನಿಮಾವನ್ನು ಬಾಲಿವುಡ್ ಸಿನಿಮಾ ಎನ್ನುತ್ತಾರೆ. ಬಳಿಕ ಸಂದರ್ಶಕಿ ಅದು ಬಾಲಿವುಡ್ ಸಿನಿಮಾ ಅಲ್ಲ ಆದರೆ ಅದು ಭಾರತೀಯ ಸಿನಿಮಾ ಎಂದು ತಿದ್ದುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಎಡ್ ಶೀರನ್ ಭಾರತ ಪ್ರವಾಸದಲ್ಲಿದ್ದು, ಭಾರತದ ಕೆಲವು ನಗರಗಳಲ್ಲಿ ಪ್ರದರ್ಶನ ನೀಡಲಿದ್ದಾರೆ. ಮಾರ್ಚ್ 16ಕ್ಕೆ ಮೊದಲ ಪ್ರದರ್ಶನ ಮುಂಬೈನಲ್ಲಿ ನಡೆಯಲಿದೆ. ಮುಂಬೈ ಶೋನ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿವೆ. ಪ್ರತಿ ಟಿಕೆಟ್​ಗೆ 16,000 ಬೆಲೆ ನಿಗದಿ ಪಡಿಸಲಾಗಿತ್ತು. ಎಡ್ ಶೀರನ್ ಜೊತೆಗೆ ಪ್ರದೀಪ್ ಕುಲಾಡ್ ಸಹ ಪ್ರದರ್ಶನ ನೀಡಲಿದ್ದಾರೆ. ಎಡ್ ಶೀರನ್ ಕಾನ್ಸರ್ಟ್ ನೋಡಲು ಸಾವಿರಾರು ಮಂದಿ ಬರುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ