AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಚಿತ್ರಕ್ಕೆ ಹೀನಾಯ ಸೋಲು; 4 ದಿನಕ್ಕೆ ತೀರಾ ಕಳಪೆ ಕಲೆಕ್ಷನ್​

‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಅವರು ಐಪಿಎಸ್​ ಆಫೀಸರ್​ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಸುದಿಪ್ತೋ ಸೇನ್​ ನಿರ್ದೇಶನ ಮಾಡಿದ್ದು, ವಿಪುಲ್​ ಅಮೃತ್​ಲಾಲ್​ ಶಾ ಅವರು ಬಂಡವಾಳ ಹೂಡಿದ್ದಾರೆ. ಈ ಮೂವರೂ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ‘ಬಸ್ತರ್​’ ಚಿತ್ರದ ಕಲೆಕ್ಷನ್​ ವಿವರ ಇಲ್ಲಿದೆ..

‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಚಿತ್ರಕ್ಕೆ ಹೀನಾಯ ಸೋಲು; 4 ದಿನಕ್ಕೆ ತೀರಾ ಕಳಪೆ ಕಲೆಕ್ಷನ್​
‘ಬಸ್ತರ್​: ದಿ ನಕ್ಸಲ್​ ಸ್ಟೋರಿ’
ಮದನ್​ ಕುಮಾರ್​
|

Updated on: Mar 19, 2024 | 3:33 PM

Share

ನಟಿ ಅದಾ ಶರ್ಮಾ (Adah Sharma) ಅವರು ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2023ರಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ನಟಿಸಿದ್ದ ಅವರಿಗೆ ಭರ್ಜರಿ ಗೆಲುವು ಸಿಕ್ಕಿತ್ತು. ಆದರೆ ಈಗ ಅದೇ ತಂಡದ ಜೊತೆ ಸೇರಿ ಮಾಡಿರುವ ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ (Bastar The Naxal Story) ಸಿನಿಮಾ ಹೀನಾಯವಾಗಿ ಸೋತಿದೆ. ಬಿಡುಗಡೆಯಾಗಿ 4 ದಿನಗಳು ಕಳೆದಿದ್ದರೂ ಈ ಚಿತ್ರ ಗಳಿಸಿರುವುದು ಕೇವಲ 2 ಕೋಟಿ ರೂಪಾಯಿ ಪಾತ್ರ. ಇದರಿಂದ ಚಿತ್ರತಂಡಕ್ಕೆ ತೀವ್ರ ನಿರಾಸೆ ಆಗಿದೆ. ಟ್ರೇಲರ್​ ನಿರೀಕ್ಷೆ ಮೂಡಿಸಿದ್ದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್​ (Box Office Collection) ಮಾಡಲು ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಚಿತ್ರ ವಿಫಲವಾಗಿದೆ.

ನೈಜ ಘಟನೆಗಳನ್ನು ಆಧರಿಸಿ ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾ ಮೂಡಿಬಂದಿದೆ. ಛತ್ತಿಸ್​ಗಡದಲ್ಲಿ ನಡೆದ ನಕ್ಸಲ್​ ಹೋರಾಟದ ವಿವರವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಭಾರತೀಯ ಸೈನಿಕರನ್ನು ನಕ್ಸಲರು ಹತ್ಯೆ ಮಾಡಿದ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗಿದೆ. ಕೆಲವರು ಈ ಸಿನಿಮಾಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಖ್ಯಾತಿಯ ಸುದೀಪ್ತೋ ಸೇನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಅದಾ ಶರ್ಮಾ ಜೊತೆ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ನಟಿಸಿದ್ದ ಬಹುತೇಕ ಕಲಾವಿದರು ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಪಕ ವಿಪುಲ್​ ಅಮೃತ್​ಲಾಲ್​ ಶಾ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾ 242 ಕೋಟಿ ರೂಪಾಯಿ ಗಳಿಸಿತ್ತು. ಆದರೆ ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಸಿನಿಮಾದ ಕಲೆಕ್ಷನ್​ ಕಳಪೆ ಆಗಿದೆ.

ಇದನ್ನೂ ಓದಿ: ‘ಬಸ್ತರ್​’ ಸಿನಿಮಾ ಮೂಲಕ ವಿವಾದ ಮಾಡಿಕೊಂಡ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ

ಮಾರ್ಚ್​ 15ರಂದು ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಬಿಡುಗಡೆ ಆಯಿತು. ಮೊದಲ ದಿನ ಈ ಚಿತ್ರಕ್ಕೆ 40 ಲಕ್ಷ ರೂಪಾಯಿ ಕಲೆಕ್ಷನ್​ ಆಯಿತು. 2ನೇ ದಿನ 75 ಲಕ್ಷ ರೂಪಾಯಿ ಗಳಿಸಿತು. ಮೂರನೇ ದಿನ 85 ಲಕ್ಷ ರೂಪಾಯಿ ಹಾಗೂ 4ನೇ ದಿನ 24 ಲಕ್ಷ ರೂಪಾಯಿ ಗಳಿಕೆ ಮಾಡಿತು. ನಾಲ್ಕು ದಿನಕ್ಕೆ ಈ ಸಿನಿಮಾ ಒಟ್ಟು 2.24 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಷ್ಟರಲ್ಲಿ ಸುಸ್ತು ಹೊಡೆದಿದೆ. 2023ರಲ್ಲಿ ‘ದಿ ಕೇರಳ ಸ್ಟೋರಿ’ ಮೂಲಕ ಭಾರಿ ಯಶಸ್ಸು ಕಂಡಿದ್ದ ನಟಿ ಅದಾ ಶರ್ಮಾ, ನಿರ್ದೇಶಕ ಸುದೀಪ್ತೋ ಸೇನ್​, ನಿರ್ಮಾಪಕ ವಿಪುಲ್ ಅಮೃತ್​ಲಾಲ್​ ಶಾ ಅವರು ಈಗ ‘ಬಸ್ತರ್​: ದಿ ನಕ್ಸಲ್​ ಸ್ಟೋರಿ’ ಚಿತ್ರದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More