ವಿಜಯ್ ದೇವರಕೊಂಡಗೆ ಕಿಸ್ ಮಾಡಿ ಥ್ಯಾಂಕ್ಸ್ ಹೇಳಿದ ಶಾಹಿದ್ ಕಪೂರ್

‘ಅಮೇಜಾನ್ ಪ್ರೈಮ್ ವಿಡಿಯೋ’ ಮಂಗಳವಾರ (ಮಾರ್ಚ್ 19) ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಮುಂಬರುವ ಸೀರಿಸ್ ಹಾಗೂ ಸಿನಿಮಾಗಳ ಅನಾವರಣ ಮಾಡಲಾಗಿದೆ. ಆಗ ಶಾಹಿದ್ ಹಾಗೂ ವಿಜಯ್ ಒಂದೇ ವೇದಿಕೆ ಏರುವ ಅವಕಾಶ ಸಿಕ್ಕಿತ್ತು. ಶಾಹಿದ್ ಅವರು ವಿಜಯ್​ನ ಹಗ್ ಮಾಡಿದ್ದಾರೆ. 

ವಿಜಯ್ ದೇವರಕೊಂಡಗೆ ಕಿಸ್ ಮಾಡಿ ಥ್ಯಾಂಕ್ಸ್ ಹೇಳಿದ ಶಾಹಿದ್ ಕಪೂರ್
ಶಾಹಿದ್-ವಿಜಯ್
Follow us
ರಾಜೇಶ್ ದುಗ್ಗುಮನೆ
|

Updated on: Mar 20, 2024 | 10:34 AM

ಶಾಹಿದ್ ಕಪೂರ್ (Shahid Kapoor) ಬಾಲಿವುಡ್​ನ ಸ್ಟಾರ್ ನಟ. ವಿಜಯ್ ದೇವರಕೊಂಡ ಅವರು ಟಾಲಿವುಡ್​ನಲ್ಲಿ ಫೇಮಸ್ ಆಗಿದ್ದಾರೆ. ಇಬ್ಬರ ಮಧ್ಯೆ ಒಂದು ಲಿಂಕ್ ಇದೆ. ಇದಕ್ಕೆ ಕಾರಣ ಆಗಿರೋದು ‘ಅರ್ಜುನ್ ರೆಡ್ಡಿ’ ಹಾಗೂ ‘ಕಬೀರ್ ಸಿಂಗ್’ ಸಿನಿಮಾ. ತೆಲುಗಿನಲ್ಲಿ ವಿಜಯ್ ದೇವರಕೊಂಡ ನಟಿಸಿದ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ಹಿಂದಿಗೆ ‘ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಲಾಯಿತು. ಸತತ ಸೋಲು ಕಾಣುತ್ತಿದ್ದ ಶಾಹಿದ್​ಗೆ ದೊಡ್ಡ ಗೆಲುವು ತಂದುಕೊಟ್ಟಿದೆ ಈ ಚಿತ್ರ. ಹೀಗಾಗಿ ಶಾಹಿದ್ ಅವರು ವಿಜಯ್​ಗೆ ಕಿಸ್ ಮಾಡಿ ಧನ್ಯವಾದ ಹೇಳಿದ್ದಾರೆ.

‘ಅಮೇಜಾನ್ ಪ್ರೈಮ್ ವಿಡಿಯೋ’ ಮಂಗಳವಾರ (ಮಾರ್ಚ್ 19) ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಮುಂಬರುವ ಸೀರಿಸ್ ಹಾಗೂ ಸಿನಿಮಾಗಳ ಅನಾವರಣ ಮಾಡಲಾಗಿದೆ. ಆಗ ಶಾಹಿದ್ ಹಾಗೂ ವಿಜಯ್ ಒಂದೇ ವೇದಿಕೆ ಏರುವ ಅವಕಾಶ ಸಿಕ್ಕಿತ್ತು. ಶಾಹಿದ್ ಅವರು ವಿಜಯ್​ನ ಹಗ್ ಮಾಡಿದ್ದಾರೆ.  ‘ನಾನು ನಿಮಗೆ ಸಾಕಷ್ಟು ಪ್ರೀತಿ ಕೋಡಬೇಕು. ಅರ್ಜುನ್ ರೆಡ್ಡಿ ಇಲ್ಲದಿದ್ದರೆ ಕಬೀರ್ ಸಿಂಗ್ ಹುಟ್ಟುತ್ತಲೇ ಇರಲಿಲ್ಲ. ಧನ್ಯವಾದ ವಿಜಯ್’ ಎಂದಿದ್ದಾರೆ ಶಾಹಿದ್.

ಶಾಹಿದ್-ವಿಜಯ್ ಮಾತುಕತೆ

‘ಅರ್ಜುನ್ ರೆಡ್ಡಿ’ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ವಿಜಯ್ ದೇವರಕೊಂಡ ಅವರ ಬದುಕನ್ನೇ ಬದಲಿಸಿತು ಈ ಚಿತ್ರ. ಸಖತ್ ರಗಡ್ ಆಗಿ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರವನ್ನು ಹಿಂದಿಗೆ ‘ಕಬೀರ್ ಸಿಂಗ್’ ಆಗಿ ರಿಮೇಕ್ ಮಾಡಲಾಯಿತು. ಈ ಚಿತ್ರ 379 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶಾಹಿದ್ ಕಪೂರ್ ಅವರಿಗೆ ಎರಡನೇ ಹುಟ್ಟನ್ನು ಸಿನಿಮಾ ನೀಡಿತ್ತು.

ಇದನ್ನೂ ಓದಿ: ಶಾಹಿದ್ ಕಪೂರ್​​ ಜನ್ಮದಿನ: ಈ ಬಾಲಿವುಡ್ ಹೀರೋನ ಆಸ್ತಿ ಎಷ್ಟು ಕೋಟಿ ರೂಪಾಯಿ?

ಶಾಹಿದ್ ಕಪೂರ್ ಅವರು ಕನ್ನಡದ ನಿರ್ದೇಶಕ ಸಚಿನ್ ರವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಅಶ್ವತ್ಥಾಮ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಕನ್ನಡದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ