AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಹಿದ್ ಕಪೂರ್​​ ಜನ್ಮದಿನ: ಈ ಬಾಲಿವುಡ್ ಹೀರೋನ ಆಸ್ತಿ ಎಷ್ಟು ಕೋಟಿ ರೂಪಾಯಿ?

ನಟ ಶಾಹಿದ್ ಕಪೂರ್ ಅವರಿಗೆ ಸಿನಿಮಾ ಮತ್ತು ಬ್ರ್ಯಾಂಡ್​ಗಳ ಪ್ರಚಾರದ ಮೂಲಕ ಮುಖ್ಯವಾಗಿ ಸಂಭಾವನೆ ಬರುತ್ತದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಸಂಭಾವನೆ ಪಡೆಯುವ ಹೀರೋಗಳ ಸಾಲಿನಲ್ಲಿ ಶಾಹಿದ್ ಕೂಡ ಇದ್ದಾರೆ. ಅವರು ಮುಂಬೈನಲ್ಲಿ ಅನೇಕ ಪ್ರಾಪರ್ಟಿ ಹೊಂದಿದ್ದಾರೆ. ಜುಹುದಲ್ಲಿ ಶಾಹಿದ್ ಕಪೂರ್ ಅಪಾರ್ಟ್​ಮೆಂಟ್ ಹೊಂದಿದ್ದಾರೆ.

ಶಾಹಿದ್ ಕಪೂರ್​​ ಜನ್ಮದಿನ: ಈ ಬಾಲಿವುಡ್ ಹೀರೋನ ಆಸ್ತಿ ಎಷ್ಟು ಕೋಟಿ ರೂಪಾಯಿ?
ಶಾಹಿದ್​ ಕಪೂರ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 25, 2024 | 10:01 AM

Share

ಶಾಹಿದ್ ಕಪೂರ್ (Shahid Kapoor) ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರಿಗೆ ಇಂದು (ಫೆಬ್ರವರಿ 25) ಬರ್ತ್​ಡೇ (Shahid Kapoor Birthday) ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಾಕಷ್ಟು ಹಣ ಮಾಡಿದ್ದಾರೆ. ಅವರು ಪ್ರತಿ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆಯುತ್ತಾರೆ. ಹಾಗಾದರೆ ಶಾಹಿದ್ ಕಪೂರ್ ಅವರ ಒಟ್ಟೂ ಆಸ್ತಿ (Shahid Kapoor Net Worth) ಎಷ್ಟು ಕೋಟಿ ರೂಪಾಯಿ? ಅವರ ಸಭಾವನೆ ಎಷ್ಟು? ಅವರಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಶಾಹಿದ್ ಕಪೂರ್ ಅವರು ಇಂಡಸ್ಟ್ರಿಗೆ ಬಂದಿದ್ದು 2003ರಲ್ಲಿ. ‘ಇಷ್ಕ್ ವಿಷ್ಕ್​’ ಅವರ ನಟನೆಯ ಮೊದಲ ಸಿನಿಮಾ. ಅವರು ರೊಮ್ಯಾಂಟಿಕ್ ಹೀರೋ ಎಂದೇ ಫೇಮಸ್. ‘ಫಿದಾ’ (2004), ‘ಚುಪ್ ಚುಪ್ ಕೆ’ (2006), ‘ವಿವಾಹ್’ (2006), ‘ಜಬ್ ವಿ ಮೆಟ್’ (2007) ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಅವರು ವೆಬ್​ ಸೀರಿಸ್ ಲೋಕಕ್ಕೂ ಕಾಲಿಟ್ಟಿದ್ದಾರೆ. ರಾಜ್ ಹಾಗೂ ಡಿಕೆ ನಿರ್ದೇಶನದ ‘ಫರ್ಜಿ’ ಸೀರಿಸ್​ನಲ್ಲಿ ಅವರು ನಟಿಸಿದ್ದಾರೆ. ಇದು ಗಮನ ಸೆಳೆದಿದೆ. ‘ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ: ‘ಪೈಸಾ ವಸೂಲ್​.. ಸಿಕ್ಕಾಪಟ್ಟೆ ಕಾಮಿಡಿ ಇದೆ’: ಶಾಹಿದ್​ ಕಪೂರ್​ ಹೊಸ ಸಿನಿಮಾಗೆ ಪ್ರೇಕ್ಷಕರು ಫಿದಾ

ಶಾಹಿದ್ ಕಪೂರ್ ಅವರಿಗೆ ಸಿನಿಮಾ ಹಾಗೂ ಬ್ರ್ಯಾಂಡ್​ಗಳ ಪ್ರಚಾರದ ಮೂಲಕ ಮುಖ್ಯವಾಗಿ ಹಣ ಬರುತ್ತದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಸಂಭಾವನೆ ಪಡೆಯೋ ಹೀರೋಗಳ ಸಾಲಿನಲ್ಲಿ ಶಾಹಿದ್ ಕೂಡ ಇದ್ದಾರೆ. ಅವರ ಆಸ್ತಿ 200 ಕೋಟಿ ರೂಪಾಯಿ ದಾಟಿದೆ. ಕೆಲವು ವರ್ಷಗಳಿಂದ ಇವರ ಆಸ್ತಿಯಲ್ಲಿ ಭರ್ಜರಿ ಏರಿಕೆ ಆಗಿದೆ. ಅವರಿಗೆ ಪ್ರತಿ ತಿಂಗಳು 3 ಕೋಟಿ ರೂಪಾಯಿ ಆದಾಯ ಇದೆ. ವರ್ಷಕ್ಕೆ 35 ಕೋಟಿ ರೂಪಾಯಿಗೂ ಅಧಿಕ ಹಣ ಬರುತ್ತದೆ. ಅವರು ಪ್ರತಿ ಚಿತ್ರಕ್ಕೆ 15 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ಬ್ರ್ಯಾಂಡ್​ಗಳ ಪ್ರಚಾರಕ್ಕೆ ನಾಲ್ಕು ಕೋಟಿ ರೂಪಾಯಿ ಪಡೆಯುತ್ತಾರೆ.

ಶಾಹಿದ್ ಕಪೂರ್ ಅವರ ನೆಟ್​ವರ್ತ್​ 235 ಕೋಟಿ ರೂಪಾಯಿ ಇದೆ. 2022ರಲ್ಲಿ ಇದು 205 ಕೋಟಿ ರೂಪಾಯಿ ಇತ್ತು. 2021ರಲ್ಲಿ ಇದು 185 ಕೋಟಿ ರೂಪಾಯಿ ಇತ್ತು. 2019ರಲ್ಲಿ ಅವರ ಆಸ್ತಿ 150 ಕೋಟಿ ರೂಪಾಯಿ ಇತ್ತು ಎನ್ನಲಾಗಿದೆ. ಶಾಹಿದ್ ಕಪೂರ್ ಅವರು ಮುಂಬೈನಲ್ಲಿ ಹಲವು ಪ್ರಾಪರ್ಟಿ ಹೊಂದಿದ್ದಾರೆ. ಜುಹುದಲ್ಲಿ ಅವರು ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಇದಕ್ಕೆ ಅವರು 32 ಕೋಟಿ ರೂಪಾಯಿ ನೀಡಿದ್ದರು. ಇದನ್ನು ಅವರು 10 ವರ್ಷಗಳ ಹಿಂದೆ ಖರೀದಿಸಿದ್ದಾರೆ. ಅವರು ವೊರ್ಲಿನಲ್ಲಿ ಡುಪ್ಲೆಕ್ಸ್ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಇದಕ್ಕೆ ಅವರು 56 ಕೋಟಿ ರೂಪಾಯಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್​ರ ಬ್ಯಾಗ್​ನ ಬೆಲೆ ಸಾವಿರಗಳಲ್ಲ, ಲಕ್ಷಗಳು

ಅಷ್ಟೇ ಅಲ್ಲದೆ ವರ್ಸೋವಾದಲ್ಲಿ ಮನೆ ಹೊಂದಿದ್ದಾರೆ. ಅಂಧೇರಿ, ದೆಹಲಿ ಮೊದಲಾದ ಕಡೆಗಳಲ್ಲಿ ಅವರು ಮನೆ ಹೊಂದಿದ್ದಾರೆ. ಶಾಹಿದ್ ಕಪೂರ್​ ಅವರಿಗೆ ವಾಹನಗಳ ಬಗ್ಗೆ ಕ್ರೇಜ್ ಇದೆ. ಅವರ ಬಳಿ 1 ಕೋಟಿ ರೂಪಾಯಿ ಬೆಲೆಯ ಯಮಹಾ ಎಂಟಿ01, ಒಂದೂವರೆ ಕೋಟಿ ರೂಪಾಯಿ ಬೆಲೆಯ ಹಾರ್ಲೆ ಡೇವಿಡ್​ಸನ್​ ಫ್ಯಾಟ್ ಬಾಯ್ ಬೈಕ್​ಗಳು ಇವೆ. ಇದರ ಜೊತೆಗೆ 3 ಕೋಟಿ ರೂಪಾಯಿ ಬೆಲೆಯ ಮರ್ಸಿಡೀಸ್ ಬೆಂಜ್ ಎಸ್​400, ಜಾಗ್ವಾರ್ ಮೊದಲಾದ ಕಾರುಗಳು ಅವರ ಬಳಿ ಇವೆ. ಎಲ್ಲವೂ ದುಬಾರಿ ಕಾರುಗಳೇ.

ಶಾಹಿದ್ ಕಪೂರ್ ಅವರು ನಾನಾ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು Skult ಹೆಸರಿನ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಪ್ರತಿ ವರ್ಷ ಈ ಸಂಸ್ಥೆಯಿಂದ 250 ಕೋಟಿ ರೂಪಾಯಿ ಟರ್ನ್​ಓವರ್ ಇದೆ. ಎಸ್​ಕೆ ಫಿಲ್ಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಇದ್ದು, ಇದರ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.