‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು?’: ಮಾಜಿ ಪತ್ನಿಯ ಪ್ರತಿಕ್ರಿಯೆ ಕೇಳಿದ ಆಮಿರ್​ ಖಾನ್​

ಡಿವೋರ್ಸ್​ ಪಡೆದ ಬಳಿಕ ಮುಖ ತಿರುಗಿಸಿಕೊಂಡು ಹೋಗುವವರೇ ಹೆಚ್ಚು. ಆದರೆ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ಆ ರೀತಿ ಅಲ್ಲ. ವಿಚ್ಛೇದನ ಪಡೆದ ನಂತರವೂ ಅವರಿಬ್ಬರು ಪರಸ್ಪರ ಆಪ್ತವಾಗಿದ್ದಾರೆ. ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಈ ಮಾಜಿ ದಂಪತಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು?’: ಮಾಜಿ ಪತ್ನಿಯ ಪ್ರತಿಕ್ರಿಯೆ ಕೇಳಿದ ಆಮಿರ್​ ಖಾನ್​
ಆಮಿರ್​ ಖಾನ್​, ಕಿರಣ್ ರಾವ್​
Follow us
ಮದನ್​ ಕುಮಾರ್​
|

Updated on: Feb 25, 2024 | 7:19 AM

ಬಾಲಿವುಡ್​ನ ಖ್ಯಾತ ನಟ ಆಮಿರ್ ಖಾನ್​ (Aamir Khan) ಅವರು ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ನೀಡಿದ್ದು ಯಾಕೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅಚ್ಚರಿ ಏನೆಂದರೆ, ಡಿವೋರ್ಸ್​ (Divorce) ಪಡೆದ ನಂತರವೂ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅನ್ಯೋನ್ಯವಾಗಿಯೇ ಇದ್ದಾರೆ. ಒಟ್ಟಿಗೆ ಸೇರಿ ‘ಲಾಪತಾ ಲೇಡಿಸ್​’ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಈ ಸಿನಿಮಾಗೆ ಕಿರಣ್​ ರಾವ್ (Kiran Rao) ನಿರ್ದೇಶನ ಮಾಡಿದ್ದು, ಆಮಿರ್​ ಖಾನ್​ ನಿರ್ಮಾಣ ಮಾಡಿದ್ದಾರೆ. ಮಾರ್ಚ್​ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ನಡುವೆ ಆಮಿರ್​ ಖಾನ್​ ಅವರು ಒಂದು ಅಚ್ಚರಿಯ ವಿಚಾರ ತಿಳಿಸಿದ್ದಾರೆ. ವಿಚ್ಛೇದನ ನೀಡಿದ ಬಳಿಕ ಕಿರಣ್​ ರಾವ್​ ಅವರಿಂದ ಫೀಡ್​ಬ್ಯಾಕ್​ ಕೇಳಲಾಗಿತ್ತು. ‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು ಮಾಜಿ ಪತ್ನಿಗೆ ಆಮಿರ್​ ಖಾನ್​ ಪ್ರಶ್ನೆ ಮಾಡಿದ್ದರು.

‘ಎಬಿಪಿ ನೆಟ್​ವರ್ಕ್​’ನ ಕಾರ್ಯಕ್ರಮವೊಂದರಲ್ಲಿ ಆಮಿರ್​ ಖಾನ್​ ಮತ್ತು ಕಿರಣ್ ರಾವ್​ ಅವರು ಜೊತೆಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮ ವಿಚ್ಛೇದನದ ಬಗ್ಗೆಯೂ ಮಾತನಾಡಿದರು. ಅವರಿಬ್ಬರ ಮದುವೆ ನಡೆದಿದ್ದು 2005ರಲ್ಲಿ. 2021ರಲ್ಲಿ ಅವರು ಡಿವೋರ್ಸ್​ ಪಡೆದರು. ಈ ಜೋಡಿಗೆ ಆಜಾದ್ ಹೆಸರಿನ ಪುತ್ರ ಇದ್ದಾನೆ. ಆತನ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪೋಷಕ ಪಾತ್ರಕ್ಕೆ ಆಡಿಷನ್​ ನೀಡಿದ ಆಮಿರ್​ ಖಾನ್​; ಅಚ್ಚರಿ ಸಂಗತಿ ಬಯಲು

‘ಒಂದು ಮಜವಾದ ವಿಚಾರ ಇದೆ. ಒಂದು ದಿನ ಸಂಜೆ ನಾವಿಬ್ಬರು ಕುಳಿತಿದ್ದಾಗ ಕಿರಣ್​ಗೆ ಒಂದು ಪ್ರಶ್ನೆ ಕೇಳಿದೆ. ಗಂಡನಾಗಿ ನನ್ನಲ್ಲಿ ನಿನಗೆ ಏನು ಕೊರತೆ ಕಾಣಿಸಿದೆ? ಜೀವನದಲ್ಲಿ ಮುಂದೆ ಸಾಗುತ್ತಿದ್ದೇನೆ. ನನ್ನನ್ನು ನಾನು ಸುಧಾರಿಸಿಕೊಳ್ಳಬೇಕು’ ಎಂದು ಕಿರಣ್​ ರಾವ್​ಗೆ ಆಮಿರ್​ ಖಾನ್​ ಹೇಳಿದ್ದರು. ಆ ಮಾತಿಗೆ ಕಿರಣ್​ ರಾವ್​ ಅವರು ಕೂಡಲೇ ಉತ್ತರ ನೀಡಿದ್ದರು. ‘ಓಕೆ.. ಬರೆದುಕೊಳ್ಳಿ ಅಂತ ಕಿರಣ್​ ನನಗೆ ಪಟ್ಟಿ ನೀಡಿದರು. ನೀವು ಬಹಳ ಮಾತನಾಡುತ್ತೀರಿ. ಬೇರೆಯವರಿಗೆ ಮಾತನಾಡಲು ನೀವು ಬಿಡುವುದಿಲ್ಲ. ನಿಮ್ಮದೇ ವಾದಕ್ಕೆ ಅಂಟಿಕೊಂಡಿರುತ್ತೀರಿ. ಈ ರೀತಿ 15-20 ವಿಷಯಗಳ ಪಟ್ಟಿ ನೀಡಿದರು’ ಎಂದು ಮಾಜಿ ಹೆಂಡತಿಯ ಫೀಡ್​ಬ್ಯಾಕ್​ ಬಗ್ಗೆ ಆಮಿರ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: ಸಾಯಿ ಪಲ್ಲವಿ ಜೊತೆ ಆಮಿರ್​ ಖಾನ್​ ಮಗನ ಸುತ್ತಾಟ; ಫೋಟೋ ವೈರಲ್​

ಜೀವನದಲ್ಲಿ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ತುಂಬ ಪ್ರಭುದ್ಧವಾಗಿ ಚಿಂತಿಸುತ್ತಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಸದ್ಯಕ್ಕೆ ಆಮಿರ್​ ಖಾನ್​ ಸಿಂಗಲ್​ ಆಗಿ ಇದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾರನ್ನು ಮದುವೆ ಆಗಬಹುದು ಎಂಬ ಕೌತುಕ ಎಲ್ಲರಲ್ಲೂ ಇದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಸೋತ ಬಳಿಕ ಆಮಿರ್​ ಖಾನ್​ ಅವರು ಬ್ರೇಕ್​ ತೆಗೆದುಕೊಂಡರು. ಈಗ ಅವರು ‘ಸಿತಾರೆ ಜಮೀನ್​ ಪರ್​’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಲಪತಾ ಲೇಡೀಸ್​’ ಸಿನಿಮಾದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್