ಪೋಷಕ ಪಾತ್ರಕ್ಕೆ ಆಡಿಷನ್​ ನೀಡಿದ ಆಮಿರ್​ ಖಾನ್​; ಅಚ್ಚರಿ ಸಂಗತಿ ಬಯಲು

ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ವಿಚ್ಛೇದನ ಪಡೆದು ಬಹಳ ಸಮಯ ಆಗಿದೆ. ಪತಿ-ಪತ್ನಿಯಾಗಿ ಅವರು ಬೇರೆ ಆಗಿದ್ದರೂ ಕೂಡ ವೃತ್ತಿಜೀವನದಲ್ಲಿ ಜೊತೆಯಾಗಿದ್ದಾರೆ. ಕಿರಣ್​ ರಾವ್​ ನಿರ್ದೇಶನ ಮಾಡಿರುವ ‘ಲಾಪತಾ ಲೇಡೀಸ್​’ ಸಿನಿಮಾದಲ್ಲಿನ ಒಂದು ಪಾತ್ರಕ್ಕೆ ಆಮಿರ್​ ಖಾನ್​ ಅವರು ಆಡಿಷನ್​ ನೀಡಿದ್ದರು. ಆ ವಿಚಾರದ ಬಗ್ಗೆ ಕಿರಣ್​ ರಾವ್​ ಮಾತನಾಡಿದ್ದಾರೆ.

ಪೋಷಕ ಪಾತ್ರಕ್ಕೆ ಆಡಿಷನ್​ ನೀಡಿದ ಆಮಿರ್​ ಖಾನ್​; ಅಚ್ಚರಿ ಸಂಗತಿ ಬಯಲು
ಆಮಿರ್​ ಖಾನ್​
Follow us
ಮದನ್​ ಕುಮಾರ್​
|

Updated on:Feb 07, 2024 | 12:23 PM

ನಟ ಆಮಿರ್​ ಖಾನ್​ (Aamir Khan) ಅವರು ಬಾಲಿವುಡ್​ನಲ್ಲಿ ಸ್ಟಾರ್​ ಹೀರೋ ಆಗಿ ಮಿಂಚಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಒಂದು ಪೋಷಕ ಪಾತ್ರಕ್ಕೆ ಆಡಿಷನ್​ ನೀಡುತ್ತಾರೆ ಎಂದರೆ ಎಂಥವರಿಗಾದರೂ ಅಚ್ಚರಿ ಆಗುತ್ತದೆ. ಈ ಮಾಹಿತಿಯನ್ನು ಆಮಿರ್ ಖಾನ್​ ಅವರ ಮಾಜಿ ಪತ್ನಿ ಕಿರಣ್​ ರಾವ್​ (Kiran Rao) ಬಹಿರಂಗಪಡಿಸಿದ್ದಾರೆ. ‘ಲಾಪತಾ ಲೇಡೀಸ್​’ (Laapataa Ladies) ಸಿನಿಮಾದಲ್ಲಿನ ಒಂದು ಪಾತ್ರಕ್ಕೆ ಆಮಿರ್​ ಖಾನ್​ ಅವರು ಆಡಿಷನ್​ ನೀಡಿದ್ದರು. ಆದರೆ ಅವರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಆಮಿರ್​ ಖಾನ್​ಗೆ ಸಿಗದ ಆ ಪಾತ್ರವು ಕಡೆಗೆ ರವಿ ಕಿಶನ್​ ಅವರ ಪಾಲಾಯಿತು. ಈ ಸಿನಿಮಾ ಮಾರ್ಚ್​ 1ರಂದು ಬಿಡುಗಡೆ ಆಗಲಿದೆ.

ಆಮಿರ್​ ಖಾನ್​ ಅವರೇ ‘ಲಾಪತಾ ಲೇಡೀಸ್​’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅವರ ಮಾಜಿ ಪತ್ನಿ ಕಿರಣ್​ ರಾವ್​ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಮಧುಮಗಳು ಕಾಣೆಯಾಗುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಬರುವ ಪೊಲೀಸ್​ ಪಾತ್ರವನ್ನು ಆಮಿರ್​ ಖಾನ್​ ಮಾಡಬೇಕು ಎಂದು ಬಯಸಿದ್ದರು. ಹಾಗಂತ ಅದು ಮುಖ್ಯ ಪಾತ್ರವಲ್ಲ. ಆದರೂ ಅವರು ಆ ಪಾತ್ರಕ್ಕೆ ಆಡಿಷನ್​ ನೀಡಿದ್ದರು. ಒಂದು ವೇಳೆ ಅವರು ನಟಿಸಿದ್ದರೆ ಆ ಒಂದೇ ಪಾತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚುತ್ತಿತ್ತು. ಆ ರೀತಿ ಆಗಬಾರದು ಎಂಬ ಕಾರಣಕ್ಕೆ ಕಿರಣ್​ ರಾವ್​ ಅವರು ಆ ಪಾತ್ರವನ್ನು ರವಿ ಕಿಶನ್​ಗೆ ನೀಡಿದರು.

ಇದನ್ನೂ ಓದಿ: ‘ನಾನು ನಿಮ್ಮ ಸಿನಿಮಾಗಳನ್ನು ನೋಡಿಯೇ ಇಲ್ಲ’; ‘ಅನಿಮಲ್’ ನಿರ್ದೇಶಕನ ಟೀಕೆಗೆ ಆಮಿರ್ ಪತ್ನಿಯ ಉತ್ತರ

ಕಳೆದ ವರ್ಷ ನಡೆದ ಟೊರಾಂಟೋ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಲಾಪತಾ ಲೇಡೀಸ್​’ ಸಿನಿಮಾ ಪ್ರದರ್ಶನ ಕಂಡಿತ್ತು. ಅಲ್ಲಿ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿತ್ತು. ಕಾಮಿಡಿ ಶೈಲಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ಲಾಪತಾ ಲೇಡೀಸ್​’ ಸಿನಿಮಾದ ಟ್ರೇಲರ್​:

ಕಿರಣ್​ ರಾವ್​ ಮತ್ತು ಆಮಿರ್​ ಖಾನ್​ ಅವರು 2021ರಲ್ಲಿ ವಿಚ್ಛೇದನ ಪಡೆದರು. ಆದರೂ ಕೂಡ ಅವರು ಪರಸ್ಪರ ಮುನಿಸಿಕೊಂಡಿಲ್ಲ. ಇಬ್ಬರೂ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ. ಇತ್ತೀಚೆಗೆ ಆಮಿರ್​ ಖಾನ್​ ಮೊದಲ ಪತ್ನಿಯ ಮಗಳು ಇರಾ ಖಾನ್​ ಮದುವೆ ನೆರವೇರಿತ್ತು. ಅದರಲ್ಲಿ ಕಿರಣ್​ ರಾವ್​ ಕೂಡ ಭಾಗಿ ಆಗಿದ್ದರು.

ಇದನ್ನೂ ಓದಿ: ವಿಚ್ಛೇದನದ ಬಳಿಕವೂ ಪತ್ನಿ ಕಿರಣ್ ಜೊತೆ ಕೆಲಸ ಮಾಡೋದೇಕೆ? ಆಮಿರ್ ಖಾನ್ ಕೊಟ್ಟರು ಉತ್ತರ

ಆಮಿರ್​ ಖಾನ್​ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಮಾಡಿದ ಸಿನಿಮಾಗಳು ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡುತ್ತಿಲ್ಲ. ‘ಥಗ್ಸ್​ ಆಫ್​ ಹಿಂದುಸ್ತಾನ್​’, ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾಗಳು ಗೆಲುವ ಕಂಡಿಲ್ಲ. ಮುಂಬರುವ ಸಿನಿಮಾಗಳಲ್ಲಿ ಅವರು ಎಚ್ಚರಿಕೆಯಿಂದ ಸ್ಕ್ರಿಪ್ಟ್​ ಆಯ್ಕೆ ಮಾಡಿಕೊಳ್ಳಬೇಕಿದೆ. ಇತ್ತೀಚೆಗೆ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವಸರ ತೋರಿಸಿಲ್ಲ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಸೋಲಿನ ಬಳಿಕ ಫ್ಯಾಮಿಲಿ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:22 pm, Wed, 7 February 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ