Aamir Khan: ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ ನಟ ಆಮಿರ್​ ಖಾನ್, ಮಾಜಿ ಪತ್ನಿ ಕಿರಣ್​ ರಾವ್​ ಭಾಗಿ

ಬಾಲಿವುಡ್​ ನಟ ಆಮಿರ್​ ಖಾನ್​ ಅವರು ತಮ್ಮ ಹೊಸ ಪ್ರೊಡಕ್ಷನ್​ ಸಂಸ್ಥೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ್ದು, ಫೋಟೋಗಳು ವೈರಲ್​ ಆಗಿವೆ.

Aamir Khan: ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ ನಟ ಆಮಿರ್​ ಖಾನ್, ಮಾಜಿ ಪತ್ನಿ ಕಿರಣ್​ ರಾವ್​ ಭಾಗಿ
ನಟ ಆಮಿರ್​ ಖಾನ್, ಮಾಜಿ ಪತ್ನಿ ಕಿರಣ್​ ರಾವ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 09, 2022 | 6:31 PM

ನಟ ಆಮಿರ್​ ಖಾನ್ (Aamir Khan)​ ಅವರು ಬಾಲಿವುಡ್​ನಲ್ಲಿ ಮಿಸ್ಟರ್​ ಪರ್ಫೆಕ್ಟ್​ ಎಂದೇ ಗುರುತಿಸಿಕೊಂಡಿರುವವರು. ‘ಲಗಾನ್’​, ‘ತಾರೇ ಜಮೀನ್​ ಪರ್’​​, ‘ದಂಗಲ್’​ನಂತಹ ಸೂರಪ್​​ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರ ಮಾತ್ರ ಸಕ್ಸಸ್​​ ಕಾಣಲಿಲ್ಲ. ಈ ಚಿತ್ರದ ಸೋಲಿಗೆ ನಟ ಆಮಿರ್​ ಖಾನ್​ ಅವರು ಸಾಮಾಜಿಕವಾಗಿ ನೀಡಿದ ಕೆಲ ವಿವಾದಾತ್ಮಕ ಹೇಳಿಕೆಗಳು ಕಾರಣ ಎನ್ನಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಹಿಂದೂ ವಿರೋಧಿ ಎಂದು ಕೂಡ ಆಮಿರ್​ ಖಾನ್​ ಟೀಕಿಗೆ ಒಳಗಾಗಿದ್ದು ಇದೆ. ಆದರೆ ಸದ್ಯ ಹಿಂದೂ ಸಂಪ್ರದಾಯದಂತೆ ಆಮಿರ್​ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ರಾವ್​ ಪೂಜೆ ಮಾಡಿರುವ ಫೋಟೋಗಳು ವೈರಲ್​ ಆಗಿವೆ.

ನಟ ಆಮಿರ್​ ಖಾನ್ ಇತ್ತೀಚೆಗೆ ತಮ್ಮ ಪ್ರೊಡಕ್ಷನ್​ ಸಂಸ್ಥೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ್ದಾರೆ. ಆಮಿರ್​ ಖಾನ್​ ಪೂಜೆ ಮಾಡುತ್ತಿರುವ ಫೋಟೋಗಳನ್ನು ‘ಲಾಲ್ ಸಿಂಗ್​ ಛಡ್ಡಾ’ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಗುರುವಾರ (ಡಿ,7) ಹಂಚಿಕೊಂಡಿದ್ದಾರೆ. ಆಮಿರ್​ ಖಾನ್ ಅವರು ಹಣೆಗೆ ತಿಲಕ, ತಲೆಗೆ ಬಿಳಿ ಬಣ್ಣದ ಟೋಪಿ ಧರಿಸಿದ್ದು, ಕಲಶಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪತ್ನಿ ಕಿರಣ್​ ರಾವ್​ ಅವರು ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: Aamir Khan Ad: ಮದುವೆ ಪದ್ದತಿ ಬದಲಾಯಿಸೋಣ ಎಂದ ಆಮಿರ್​ ಖಾನ್​ ವಿರುದ್ಧ ಸಿಡಿದೆದ್ದ ನೆಟ್ಟಿಗರು; ಇಲ್ಲಿದೆ ಕಾರಣ..

ಆಮಿರ್​ ಖಾನ್​ ಅವರು ತಮ್ಮ ಚಿತ್ರ ಮತ್ತು ಹೇಳಿಕೆಗಳಿಂದ ಟೀಕೆಗೆ ಒಳಗಾಗುತ್ತಾರೆ. ಆದರೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿರುವುದು ಸದ್ಯ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯ ಕಮೆಂಟ್​ ಮಾಡಿದ್ದಾರೆ.

ಇತ್ತೀಚೆಗೆ ಆಮಿರ್​​ ಖಾನ್​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ನಾನು ಸದ್ಯಕ್ಕೆ ಚಿತ್ರರಂಗದಿಂದ ದೂರಿ ಉಳಿದಿದ್ದೇನೆ. ಯಾವುದೇ ಸಿನಿಮಾ ಕೆಲಸ ಮಾಡುತ್ತಿಲ್ಲ. ಒಂದು ವರ್ಷದ ನಂತರ ನಾನು ಮತ್ತೆ ನಟನೆಗೆ ಮರಳುತ್ತೇನೆ. ಸದ್ಯ ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೇನೆ’ ಎಂದು ‘ಸಲಾಮ್ ವೆಂಕಿ’ ಚಿತ್ರದ ಪ್ರೀಮಿಯರ್​ ಶೋ ವೇಳೆ ಹೇಳಿದ್ದಾರೆ. ನಟಿ ಕಾಜೋಲ್​​ ಮತ್ತು ವಿಶಾಲ್ ಜೇತ್ವಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಚಿತ್ರ ‘ಸಲಾಮ್ ವೆಂಕಿ’. ಈ ಚಿತ್ರದಲ್ಲಿ ನಟ ಆಮಿರ್​​ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:15 pm, Fri, 9 December 22

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್