Aamir Khan Ad: ಮದುವೆ ಪದ್ದತಿ ಬದಲಾಯಿಸೋಣ ಎಂದ ಆಮಿರ್​ ಖಾನ್​ ವಿರುದ್ಧ ಸಿಡಿದೆದ್ದ ನೆಟ್ಟಿಗರು; ಇಲ್ಲಿದೆ ಕಾರಣ..

Aamir Khan New Advertisement: ಈ ಜಾಹೀರಾತಿನಲ್ಲಿ ಆಮಿರ್​ ಖಾನ್​ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈಗತಾನೇ ಮದುವೆ ಆದ ದಂಪತಿಯ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಅದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Aamir Khan Ad: ಮದುವೆ ಪದ್ದತಿ ಬದಲಾಯಿಸೋಣ ಎಂದ ಆಮಿರ್​ ಖಾನ್​ ವಿರುದ್ಧ ಸಿಡಿದೆದ್ದ ನೆಟ್ಟಿಗರು; ಇಲ್ಲಿದೆ ಕಾರಣ..
ಕಿಯಾರಾ ಅಡ್ವಾಣಿ, ಆಮಿರ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 13, 2022 | 10:02 AM

ನಟ ಆಮಿರ್​ ಖಾನ್​ (Aamir Khan) ಅವರಿಗೆ ಚಿತ್ರರಂಗದಲ್ಲಿ ಹಿನ್ನಡೆ ಉಂಟಾಗಿದೆ. ಅವರು ಬಹಳ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಹೀನಾಯವಾಗಿ ಸೋತಿತು. ಅಲ್ಲದೇ ಅವರ ಕೊರಳಿಗೆ ಆಗಾಗ ವಿವಾದ ಸುತ್ತಿಕೊಳ್ಳುತ್ತಲೇ ಇದೆ. ಈಗ ಅವರು ನಟಿಸಿರುವ ಒಂದು ಜಾಹೀರಾತು (Aamir Khan Advertisement) ಸಖತ್​ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ. ಮದುವೆಯ ಪದ್ದತಿಯನ್ನು ಬದಲಾಯಿಸೋಣ ಎಂಬ ಸಂದೇಶ ಈ ಜಾಹೀರಾತಿನಲ್ಲಿ ಇದೆ. ಅದನ್ನು ನೋಡಿದ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಆಮಿರ್ ಖಾನ್​ ಅವರು ಹಿಂದೂಗಳ (Hindu) ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಒಂದಷ್ಟು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಜಾಹೀರಾತಿನಲ್ಲಿ ಆಮಿರ್​ ಖಾನ್​ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈಗತಾನೇ ಮದುವೆ ಆದ ದಂಪತಿಯ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಅದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮದುವೆ ಆದ ಬಳಿಕ ಗಂಡಿನ ಮನೆಗೆ ಹೆಣ್ಣು ಬರುವುದು ಸಂಪ್ರದಾಯ. ಗಂಡನ ಮನೆಯ ಹೊಸ್ತಿಲಿನಲ್ಲಿ ಇಟ್ಟಿರುವ ಅಕ್ಕಿಯ ಸೇರನ್ನು ಒದ್ದು ಆಕೆ ಎಂಟ್ರಿ ನೀಡುತ್ತಾಳೆ. ಆದರೆ ಈಗ ಆಮಿರ್​ ಖಾನ್​ ಅವರ ಈ ಜಾಹೀರಾತಿನಲ್ಲಿ ಅದನ್ನು ಉಲ್ಟಾ ತೋರಿಸಲಾಗಿದೆ.

ಇದನ್ನೂ ಓದಿ
Image
‘ಲಾಲ್ ಸಿಂಗ್ ಚಡ್ಡಾ’ದಿಂದ ಆಮಿರ್ ಖಾನ್​ಗೆ 100 ಕೋಟಿ ರೂಪಾಯಿ ನಷ್ಟ​? ಸೋಲಿನ ಹೊಣೆ ಹೊತ್ತ ನಟ
Image
ಆಮಿರ್ ಖಾನ್​ಗೆ ಬೆಂಬಲ ನೀಡಿದ್ದೇ ತಪ್ಪಾಯ್ತು; ಹೃತಿಕ್ ರೋಷನ್​ಗೆ ಎದುರಾಯ್ತು ಸಂಕಷ್ಟ
Image
Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ
Image
ಪ್ರೀತಿಸಿದ ಹುಡುಗಿ ರಿಜೆಕ್ಟ್​ ಮಾಡಿದ್ದಕ್ಕೆ ತಲೆ ಬೋಳಿಸಿಕೊಂಡಿದ್ದ ಆಮಿರ್ ಖಾನ್​; ಹಳೆ ಘಟನೆ ನೆನೆದ ನಟ

ಆಮಿರ್​ ಖಾನ್​ ಅವರು ಪತ್ನಿಯ ಕುಟುಂಬಕ್ಕೆ ಪ್ರವೇಶ ಮಾಡುತ್ತಾರೆ. ಹೆಣ್ಣಿನ ಮನೆಯ ಹೊಸ್ತಿಲಿನಲ್ಲಿ ಇಟ್ಟ ಅಕ್ಕಿಯ ಸೇರನ್ನು ಒದ್ದು ಅವರು ಒಳಗೆ ಬರುತ್ತಾರೆ. ಪತ್ನಿಯ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರು ವಹಿಸಿಕೊಳ್ಳಲು ಸಿದ್ಧರಿದ್ದಾರೆ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಇದನ್ನು ನೋಡಿರುವ ಕೆಲವರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯಪ್ರದೇಶದ ಸಚಿವ ನರೋತ್ತಮ್​ ಮಿಶ್ರಾ ಅವರು ಈ ಬಗ್ಗೆ ತಕರಾರು ತೆಗೆದಿದ್ದಾರೆ. ‘ಆಮಿರ್​ ಖಾನ್​ ನಟಿಸಿರುವ ಖಾಸಗಿ ಬ್ಯಾಂಕ್​ನ ಜಾಹೀರಾತನ್ನು ನಾನು ನೋಡಿದ್ದೇನೆ. ಭಾರತೀಯ ಸಂಪ್ರದಾಯವನ್ನು ತಲೆಯಲ್ಲಿ ಇಟ್ಟುಕೊಂಡು ಜಾಹೀರಾತು ಮಾಡುವಂತೆ ನಾನು ಅವರಲ್ಲಿ ವಿನಂತಿಕೊಳ್ಳುತ್ತೇನೆ. ಈಗ ಅವರು ಮಾಡಿರುವ ಜಾಹೀರಾತು ಸರಿಯಿಲ್ಲ. ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವ ಅಧಿಕಾರ ಅವರಿಗೆ ಇಲ್ಲ’ ಎಂದು ನರೋತ್ತಮ್​ ಮಿಶ್ರಾ ಹೇಳಿದ್ದಾರೆ.

ಆಮಿರ್​ ಖಾನ್​ ಮಾಡುವ ಎಲ್ಲ ಕೆಲಸದಲ್ಲೂ ತಪ್ಪು ಕಂಡು ಹಿಡಿಯಲು ಒಂದಷ್ಟು ಮಂದಿ ಕಾದು ಕುಳಿತಿರುತ್ತಾರೆ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಅವರು ಹೇಳಿದ ಕೆಲವು ಡೈಲಾಗ್​ಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಹೀಗೆ ಆಮಿರ್​ ಖಾನ್​ ಅವರು ಪದೇಪದೇ ವಿವಾದಗಳಿಗೆ ಸಿಲುಕುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್