‘ರಣವೀರ್ ಮತ್ತು ನಾನು ಕೆಲವು ದಿನಗಳಿಂದ ದೂರ ಇದ್ದೇವೆ’: ದೀಪಿಕಾ ಹೀಗೆ ಹೇಳಿದ್ದು ಯಾಕೆ?
Deepika Padukone | Ranveer Singh: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ. ಈ ದಂಪತಿ ಬಗ್ಗೆ ಇತ್ತೀಚೆಗೆ ಕೆಲವು ಅಂತೆ-ಕಂತೆಗಳು ಹರಿದಾಡಲು ಆರಂಭಿಸಿವೆ.
ನೆಚ್ಚಿನ ಸೆಲೆಬ್ರಿಟಿ ದಂಪತಿ ಚೆನ್ನಾಗಿ ಬಾಳಬೇಕು ಎಂದು ಫ್ಯಾನ್ಸ್ ಬಯಸುತ್ತಾರೆ. ಅಂಥ ಸೆಲೆಬ್ರಿಟಿಗಳ ಬದುಕಿನಲ್ಲಿ ಏನಾದರೂ ಮನಸ್ತಾಪ ಎದುರಾದರೆ ದೊಡ್ಡ ಸುದ್ದಿ ಆಗುತ್ತದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಬಗ್ಗೆ ಗಾಸಿಪ್ ಹಬ್ಬಿತ್ತು. ಆ ಗಾಳಿಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆ ಆದ ಈ ಜೋಡಿಗೆ ಅಂಥದ್ದೇನಾಯ್ತು ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದುಂಟು. ನಂತರ ರಣವೀರ್ ಸಿಂಗ್ (Ranveer Singh) ಅವರ ಆ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. ಈಗ ದೀಪಿಕಾ ಪಡುಕೋಣೆ ಕಡೆಯಿಂದಲೂ ಪ್ರತಿಕ್ರಿಯೆ ಬಂದಿದೆ.
ಕಳೆದ ಕೆಲವು ದಿನಗಳಿಂದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ದೂರ ಇದ್ದಾರೆ. ಹಾಗಂತ ಅವರ ನಡುವೆ ಏನೋ ಕಿರಿಕ್ ಆಗಿದೆ ಅಂತೇನಿಲ್ಲ. ಅವರು ಕೆಲಸದ ಸಲುವಾಗಿ ಬೇರೆ ಬೇರೆ ನಗರಗಳಿಗೆ ತೆರಳಿದ್ದಾರೆ. ಇಬ್ಬರೂ ಕೂಡ ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ ಕೆಲವು ದಿನಗಳಮಟ್ಟಿಗೆ ಮನೆಯಿಂದ ದೂರ ಇರುವುದಾಗಿ ಹೇಳಿದ್ದಾರೆ.
‘ನನ್ನ ಪತಿ ಒಂದು ವಾರಗಳ ಕಾಲ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದರು. ಈಗತಾನೆ ವಾಪಸ್ ಬಂದಿದ್ದಾರೆ. ನನ್ನ ಮುಖ ನೋಡಿದರೆ ಅವರಿಗೆ ಖಂಡಿತಾ ಖುಷಿ ಆಗಲಿದೆ’ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ. ಅವರು ಇತ್ತೀಚೆಗೆ ಪ್ಯಾರಿಸ್ನಲ್ಲಿ ಒಂದು ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ್ದರು.
ಗಾಸಿಪ್ ಹಬ್ಬಿದ್ದು ಹೇಗೆ?
ವಿದೇಶಿ ಸೆನ್ಸಾರ್ ಮಂಡಳಿಯಲ್ಲಿ ಉಮೈರ್ ಸಂಧು ಸದಸ್ಯನಾಗಿದ್ದಾರೆ. ಭಾರತದ ಸಿನಿಮಾಗಳನ್ನು ಅವರು ವಿಮರ್ಶೆ ಮಾಡುತ್ತಾರೆ. ಆ ಮೂಲಕ ಅವರು ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಫೇಮಸ್ ಆಗಿದ್ದಾರೆ. ಅವರ ಖಾತೆಯನ್ನು ಸಿನಿಪ್ರಿಯರು ಫಾಲೋ ಮಾಡುತ್ತಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸಂಸಾರದ ಬಿರುಕಿನ ಬಗ್ಗೆ ಉಮೈರ್ ಸಂಧು ಟ್ವೀಟ್ ಮಾಡಿ, ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು. ‘ಬ್ರೇಕಿಂಗ್! ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿ ಇಲ್ಲ’ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದರು.
ಗಾಸಿಪ್ ಹಬ್ಬಿದ ಬಳಿಕ ರಣವೀರ್ ಸಿಂಗ್ ಅವರು ಒಂದು ಕಾರ್ಯಕ್ರಮದಲ್ಲಿ ದೀಪಿಕಾ ಬಗ್ಗೆ ಮಾತನಾಡಿದ್ದರು. ‘ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್ ಮಾಡಲು ಆರಂಭಿಸಿದೆವು. 2022ಕ್ಕೆ ಹತ್ತು ವರ್ಷ ಆಯ್ತು’ ಎಂದು ಹೇಳುವ ಮೂಲಕ ತಾವಿಬ್ಬರೂ ಇನ್ನೂ ಅನ್ಯೋನ್ಯವಾಗಿಯೇ ಇದ್ದೇವೆ ಎಂದು ರಣವೀರ್ ಸಿಂಗ್ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:53 am, Wed, 12 October 22