ರಾಮ ಸೇತುವೆ ಇತ್ತೆಂದು ಸಾಬೀತು ಮಾಡಲು ಹೊರಟ ಅಕ್ಷಯ್ ಕುಮಾರ್; ಫ್ಯಾನ್ಸ್ ರಿಯಾಕ್ಷನ್ ಹೇಗಿತ್ತು?
ಕೇಂದ್ರ ಸರ್ಕಾರವು ರಾಮ ಸೇತುವೆಯನ್ನು ಉರುಳಿಸಲು ಸುಪ್ರೀಂಕೋರ್ಟ್ ಬಳಿ ಒಪ್ಪಿಗೆ ಕೇಳುತ್ತದೆ. ಆಗ ರಾಮ ಸೇತುವೆ ಇಲ್ಲವಾಗಿತ್ತು ಎಂಬುದನ್ನು ಸಾಬೀತು ಮಾಡುವ ಜವಾಬ್ದಾರಿ ಪುರಾತತ್ವಶಾಸ್ತ್ರಜ್ಞ ಆರ್ಯನ್ ಕುಲಶ್ರೇಷ್ಠ (ಅಕ್ಷಯ್ ಕುಮಾರ್) ಹೆಗಲೇರುತ್ತದೆ.
ಅಕ್ಷಯ್ ಕುಮಾರ್ (Akshay Kumar) ಅವರು ಇತ್ತೀಚೆಗೆ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರ ನಟನೆಯ ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಯಶಸ್ಸು ಕಾಣುತ್ತಿಲ್ಲ. ಈ ಬಾರಿ ಅವರು ‘ರಾಮ್ ಸೇತು’ (Ram Setu) ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಇಂದು (ಅಕ್ಟೋಬರ್ 11) ರಿಲೀಸ್ ಆಗಿದೆ. ಫ್ಯಾನ್ಸ್ಗೆ ಟ್ರೇಲರ್ ಇಷ್ಟವಾಗಿದೆ. ಇದನ್ನು ನೋಡಿ ಎಲ್ಲರೂ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಾಮ ಸೇತುವೆ ಉಳಿಸಲು ಹೋರಾಡುವ ಪುರಾತತ್ವಶಾಸ್ತ್ರಜ್ಞನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರವು ರಾಮ ಸೇತುವೆಯನ್ನು ಉರುಳಿಸಲು ಸುಪ್ರೀಂಕೋರ್ಟ್ ಬಳಿ ಒಪ್ಪಿಗೆ ಕೇಳುತ್ತದೆ. ಆಗ ರಾಮ ಸೇತುವೆ ಇಲ್ಲವಾಗಿತ್ತು ಎಂಬುದನ್ನು ಸಾಬೀತು ಮಾಡುವ ಜವಾಬ್ದಾರಿ ಪುರಾತತ್ವಶಾಸ್ತ್ರಜ್ಞ ಆರ್ಯನ್ ಕುಲಶ್ರೇಷ್ಠ (ಅಕ್ಷಯ್ ಕುಮಾರ್) ಹೆಗಲೇರುತ್ತದೆ. ಆರ್ಯನ್ ನಾಸ್ತಿಕ. ಈ ಕಾರಣದಿಂದಲೇ ಆತನಿಗೆ ಈ ಜವಾಬ್ದಾರಿ ನೀಡಲಾಗುತ್ತದೆ. ಅಧ್ಯಯ ಮಾಡುತ್ತಾ ರಾಮ ಸೇತುವೆ ಇತ್ತು ಎಂಬ ವಿಚಾರ ಆರ್ಯನ್ಗೆ ತಿಳಿಯುತ್ತದೆ. ಈ ಹಾದಿಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಾನೆ ಆರ್ಯನ್. ಕೊನೆಗೆ ಈ ಸೇತುವೆಯನ್ನು ಆತ ಉಳಿಸುತ್ತಾನೆ. ಇದಿಷ್ಟು ವಿಚಾರ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ರಾಮಾಯಣದಲ್ಲಿ ಉಲ್ಲೇಖವಾದ ವಿಚಾರಕ್ಕೆ ಕಾಲ್ಪನಿಕ ಅಂಶವನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ‘ಲಕ್ಷಾಂತರ ರಾಮ ಮಂದಿರ ಇದೆ, ಆದರೆ ರಾಮ ಸೇತುವೆ ಇರೋದು ಒಂದೇ’ ಎಂಬ ಡೈಲಾಗ್ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ.
ಅಕ್ಷಯ್ ಕುಮಾರ್ಗೆ ಒಂದು ಗೆಲುವು ಬೇಕಾಗಿದೆ. ಈ ಕಾರಣಕ್ಕೆ ಅವರು ‘ರಾಮ್ ಸೇತು’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುತ್ತಿದ್ದಾರೆ. ಅಕ್ಟೋಬರ್ 25ರಂದು ಚಿತ್ರ ರಿಲೀಸ್ ಆಗುತ್ತಿದೆ. ಅಜಯ್ ದೇವಗನ್ ಹಾಗೂ ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಥ್ಯಾಂಕ್ ಗಾಡ್’ ಚಿತ್ರದ ಜತೆ ಈ ಚಿತ್ರ ಸೆಣೆಸಲಿದೆ.
ಇದನ್ನೂ ಓದಿ: Ram Setu Teaser: ರಾಮ ಸೇತುವೆ ಉಳಿಸಲು ಮುಂದಾದ ಅಕ್ಷಯ್ ಕುಮಾರ್; ನಿರೀಕ್ಷೆ ಹುಟ್ಟಿಸಿತು ಟೀಸರ್
ಬಾಲಿವುಡ್ ಚಿತ್ರಗಳು ಸೊರಗುತ್ತಿವೆ ಎಂಬ ಚರ್ಚೆಯ ಮಧ್ಯೆ ‘ಬ್ರಹ್ಮಾಸ್ತ್ರ’ ಸಿನಿಮಾ ಗೆದ್ದು ಬೀಗಿದೆ. ಇದರಿಂದ ಬಾಲಿವುಡ್ಗೆ ಹೊಸ ಬೂಸ್ಟ್ ಸಿಕ್ಕಿದೆ. ಇದು ‘ರಾಮ್ ಸೇತು’ಗೆ ಸಹಕಾರಿ ಆಗುವ ನಿರೀಕ್ಷೆ ಇದೆ. ಅಭಿಷೇಕ್ ಶರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿದ್ದಾರೆ.
Published On - 5:45 pm, Tue, 11 October 22