Anirudh: ಫಿಲ್ಮ್ ಚೇಂಬರ್ ಅಂಗಳದಲ್ಲಿ ‘ಸೂರ್ಯವಂಶ’ ಧಾರಾವಾಹಿ ಚೆಂಡು: ನಾಳೆ ನಟ ಅನಿರುದ್ಧ್ ಭವಿಷ್ಯ ನಿರ್ಧಾರ
ನಟ ಅನಿರುದ್ಧ್ ಅವರು ಹೊಸ ಧಾರಾವಾಹಿಯನ್ನು ಘೋಷಿಸುತ್ತಿದ್ದಂತೆಯೇ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಫಿಲ್ಮ್ ಚೇಂಬರ್ಗೆ ಭೇಟಿ ನೀಡಿ ಅಧ್ಯಕ್ಷರಾದ ಭಾ.ಮ ಹರೀಶ್ ಅವರೊಂದಿಗೆ ಚರ್ಚೆ ಮಾಡಿದ್ದಾರೆ.
‘ಜೊತೆ ಜೊತೆಯಲಿ’ ಧಾರಾವಾಹಿಯ ಮೂಲಕ ನಟ ಅನಿರುದ್ಧ್ (Actor Anirudh) ಅವರು ಮನೆ ಮಾತಾದವರು. ಇವರ ವಿರುದ್ಧ ಸಾಕಷ್ಟು ಆರೋಪಗಳು ಕೂಡ ಕೇಳಿಬಂದಿದ್ದವು. ಬಳಿಕ ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಇವರನ್ನು ತೆಗೆದು ಹಾಕಲಾಗಿತ್ತು. ಕನ್ನಡ ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ನಟ ಅನಿರುದ್ಧ್ ನಟಿಸಬಾರದು ಎಂದು ಫಿಲ್ಮ್ ಚೇಂಬರ್ಗೆ ಮನವಿ ಕೂಡ ಸಲ್ಲಿಸಿದ್ದರು. ಇಷ್ಟೇಲ್ಲಾ ಆದ ಬಳಿಕ ನಿರ್ದೇಶಕ ಎಸ್. ನಾರಾಯಣ್ ಅವರು ಅನಿರುದ್ಧ್ ಅವರೊಂದಿಗೆ ‘ಸೂರ್ಯವಂಶ’ (Suryavamsha) ಎಂಬ ಸೀರಿಯಲ್ ಮಾಡುವುದಾಗಿ ಹೇಳಿದ್ದರು. ಅನಿರುದ್ಧ್ ಅವರು ಹೊಸ ಧಾರಾವಾಹಿಯನ್ನು ಘೋಷಿಸುತ್ತಿದ್ದಂತೆಯೇ ವಿರೋಧ ವ್ಯಕ್ತವಾಗಿತ್ತು. ಈ ವಿಚಾರವಾಗಿ ನಟ ಅನಿರುದ್ಧ್ ಇಂದು (ಡಿ. 9) ಫಿಲ್ಮ್ ಚೇಂಬರ್ಗೆ ಭೇಟಿ ನೀಡಿ ಅಧ್ಯಕ್ಷರಾದ ಭಾ.ಮ ಹರೀಶ್ ಅವರೊಂದಿಗೆ ಚರ್ಚೆ ಮಾಡಿದ್ದಾರೆ.
ಚರ್ಚೆ ಬಳಿಕ ಪತ್ರಿಕಾಗೋಷ್ಠಿ ನಟಡೆಸಿದ ನಟ ಅನಿರುದ್ಧ್, ‘ನಾನು ಸಾಕಷ್ಟು ಲೇಖನಗಳನ್ನು ಪತ್ರಿಕೆಯಲ್ಲಿ ಬರೆಯುತ್ತೇನೆ. ಬಹುತೇಕ ಲೇಖನಗಳಲ್ಲಿ ವಸುದೈವ ಕುಟುಂಬಕಂ ಅಂತ ಬರೆಯುತ್ತೇನೆ. ಜೊತೆ ಜೊತೆಯಲ್ಲಿ ಧಾರವಾಹಿ ತಂಡ ನನ್ನ ಕುಟುಂಬ, ಜೀ ಕನ್ನಡ ನನ್ನ ಕುಟುಂಬ. ಕುಟುಂಬದಲ್ಲಿ ಚಿಕ್ಕ ಪುಟ್ಟ ಮನಸ್ತಾಪ ಖಂಡಿತ ಹಾಗಂತ ಡಿವೋರ್ಸ್ ಕೊಟ್ರೆ ಹೇಗೆ. ಆರೂರ್ ಜಗದೀಶ್ ಆಡಿಯೋ ಕಳಿಸಿದಕ್ಕಿಂತ ಮುಂಚೆ ನನ್ನ ಬಳಿ ಮಾತನಾಡಬೇಕಿತ್ತು. ಆರೂರ್ ಅವರಿಗೆ ಸಾಕಷ್ಟು ಸಂದೇಶವನ್ನ ಕಳಿಸಿದ್ದೀನಿ. ಇದು ನೀವು ಹೇಳಿದ್ದಾ ಸರ್ ನನಗೆ ಒತ್ತಡ ಇದೆ ಸರ್ ಅಂದಿದ್ದಾರೆ. ಇವತ್ತಿನವರೆಗೂ ನಾನು ಅವರು ಮಾಡಿರುವ ಪತ್ರಿಕಾಗೋಷ್ಠಿ ನೋಡಿಲ್ಲ’ ಎಂದು ಅನಿರುದ್ಧ್ ಹೇಳಿದರು.
ಇದನ್ನೂ ಓದಿ: Anirudh Jatkar: ‘ಜೊತೆ ಜೊತೆಯಲಿ’ ತಂಡದೊಂದಿಗೆ ಕಾಣಿಸಿಕೊಂಡ ಅನಿರುದ್ಧ; ಏನು ಈ ಭೇಟಿಯ ಉದ್ದೇಶ?
‘ಅವರ ಮಕ್ಕಳ ಮೇಲೆ ಆಣೆ ಮಾಡಲಿ ಅಂದೇ, ಅವರು ಯಾವುದು ಮಾಡಲಿಲ್ಲ. ನಿರ್ಮಾಪಕರ ಸಂಘ ಈ ರೀತಿ ಆದಾಗ ಸಂಧಾನ ಮಾಡುವಂತ ಕೆಲಸ ಮಾಡಬೇಕು. ನನ್ನನ್ನ ಕರೆಸಿ ನನ್ನ ವಿಚಾರ, ಅನುಭವಗಳನ್ನ ಕೇಳಬೇಕಿತ್ತು. ನಾನು ಅಶಿಸ್ತು ಅಂತ ಹೇಳುತ್ತಿದ್ದಾರೆ. ಅವರು ಹೇಳಿದ್ದ ಸಮಯಕ್ಕೆ ನನ್ನ ಗಾಡಿ ಅವರ ಕೌಂಪಂಡ್ ಅಲ್ಲಿ ಇರುತ್ತೆ. ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ಕ್ಯಾರವಾನ್ ಕೇಳಿದ್ದು, ಒಂದೇ ದಿನ. ಅದು ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸೋಕೆ ಕೇಳಿದ್ದು ತಪ್ಪಾ? ಹೋಟೆಲ್ನಲ್ಲಿ 2 ಲಕ್ಷ ಖರ್ಚು ಮಾಡಿಲ್ಲ, ನಾನು ದುರಂಕಾರಿ ಅಲ್ಲ. ನಾನು ಧಾರವಾಹಿಯಲ್ಲಿ ಕೋಪಿಸಿಕೊಂಡಂತೆ ಕೋಪಿಸಿಕೊಳ್ಳುತ್ತೇನೆ ಅದು ದುರಂಕಾರ ಅಲ್ಲ’ ಎಂದರು.
ಇದನ್ನೂ ಓದಿ: Aniruddha Jatkar: ಜೊತೆ ಜೊತೆಯಲಿ ತಂಡದಿಂದ ಅನಿರುದ್ಧ್ ಬ್ಯಾನ್: ನಿಷೇಧಕ್ಕೆ ಅವಕಾಶವಿಲ್ಲ ಎಂದ ಟೆಲಿವಿಷನ್ ಅಸೋಸಿಯೇಷನ್
‘ಇಂದು ನಾನು ಫಿಲ್ಮ್ ಚೇಂಬರ್ಗೆ ಅವರು ಬರ್ತಾರೆ ಎಂಬ ನಿರೀಕ್ಷೆಯಿಂದ ಬಂದಿದ್ದೆ ಅವ್ರು ಬಂದಿಲ್ಲ. ಅವರು ನಿರ್ದೇಶಕರಿಗೆ, ಉದಯ ಟಿವಿ ಅವರನ್ನು ಭೇಟಿ ಮಾಡಿ ನನ್ನ ಹಾಕ್ಕೋಬೇಡಿ ಅಂತ ಹೇಳಿದ್ದಾರೆ. ಬ್ಯಾನ್ ಪದ ಬಳಿಸಿರೋದಕ್ಕೆ ಎಲ್ಲರ ಮೇಲೆ ಡೆಫಮೇಷನ್ ಕೇಸ್ ಹಾಕಿ ಅಂತ ನಮ್ಮ ಲಾಯರ್ ಹೇಳಿದರು. ಆದರೆ ನಾನು ಹಾಗೇ ಮಾಡಲಿಲ್ಲ. ನಾನು ಹೊಸ ಧಾರವಾಹಿ ಮಾಡ್ತಿದ್ದೀನಿ ಮತ್ತೆ ಅದೇ ರೀತಿ ಮಾಡ್ತಿದ್ದಾರೆ ತಡೀತಿದ್ದಾರೆ. ನಿರ್ದೇಶಕ ಎಸ್.ನಾರಾಯಣ್ ನೀವೆ ನಮ್ಮ ನಾಯಕರು ಅಂತ ಹೇಳಿದ್ದಾರೆ. ನಮಗೆ ನೀವೇ ಬೇಕು ಯಾರು ಹೇಳಿದರು ಕೇಳೋದಿಲ್ಲ ಅಂತ ಹೇಳಿದ್ದಾರೆ ಎಂದು’ ಹೇಳಿದರು.
ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಭಾ.ಮ.ಹರೀಶ್ ಮಾತನಾಡಿದ್ದು, ‘ಕಿರುತೆರೆ ನಿರ್ಮಾಪಕರ ಸಂಘದವರ ಜೊತೆ ಕಾಲ್ನಲ್ಲಿ ಮಾತನಾಡಿದ್ದೇನೆ. ನಾಳೆ (ಡಿ. 10) 10.30ಗೆ ಬರ್ತಾರಂತೆ, ಎಲ್ಲವೂ ಸುಖಾಂತ್ಯವಾಗುತ್ತೆ. ಅನಿರುದ್ಧ್ ಕೂಡ ಏನೇನಾಯ್ತು ಅಂತ ಹೇಳಿದ್ದಾರೆ. ಇಬ್ಬರನ್ನು ಕುರಿಸಿ ಮಾತುಕತೆ ಮಾಡಲಾಗುತ್ತೆ. ಪ್ರೋಡಕ್ಷನ್ ಅವರು ಕಲಾವಿದನನ್ನ ತಗಿಬಹುದು. ಆದರೆ ಇನ್ನೊಂದು ಕಡೆ ಕೆಲಸ ಮಾಡಬಾರದು ಅಂತ ಹೇಳಬಾರದು. ಅವರ ಉದ್ದೇಶ ಏನು ಅಂತ ಕರೆದು ಮಾತನಾಡುತ್ತೇನೆ. ಇಂಡಸ್ಟ್ರಿಯಲ್ಲಿ ಬ್ಯಾನ್ ಅನ್ನೋ ಪದ ಇಲ್ಲ, ಬಳಿಸಲು ಬಾರದು ಯಾರಿಗೂ ಅಧಿಕಾರ ಇಲ್ಲ ಎಂದು ಹೇಳಿದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 pm, Fri, 9 December 22