Lakshana Serial: ಇನ್ನೇನು ಸಿಕ್ಕಿ ಹಾಕಿಕೊಳ್ಳಬೇಕು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡ ಡೆವಿಲ್

ಸಿ.ಎಸ್​​ಗೆ ಲಾಯರ್ ಕಾಲ್ ಮಾಡಿ ಮುಂಬೈನಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್‌ನಲ್ಲಿ ಮೌರ್ಯನದ್ದು ಯಾವುದೇ ತಪ್ಪಿಲ್ಲ ಅವನು ನಿರಪರಾಧಿ ಎನ್ನುವ ಸಿಹಿ ಸುದ್ದಿಯನ್ನು ಹೇಳುತ್ತಾರೆ. ಇದನ್ನು ಕೇಳಿದ ಭೂಪತಿ ನಕ್ಷತ್ರಳಿಗೆ ಕೊಂಚ ಸಮಧಾನವಾಗುತ್ತದೆ.

Lakshana Serial: ಇನ್ನೇನು ಸಿಕ್ಕಿ ಹಾಕಿಕೊಳ್ಳಬೇಕು ಅನ್ನುವಷ್ಟರಲ್ಲಿ ತಪ್ಪಿಸಿಕೊಂಡ ಡೆವಿಲ್
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 10, 2022 | 10:12 AM

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ನಾವು ನೋಡಿದ ಹಾಗೆ ಡೆವಿಲ್‌ಗೆ ಬಲೆ ಬೀಸಲು ದೊಡ್ಡ ಪ್ಲಾನ್ ಒಂದನ್ನೇ ರೂಪಿಸಿದ್ದರು ನಕ್ಷತ್ರ ಭೂಪತಿ. ಇವರು ರೂಪಿಸದ ಟ್ರಾಪ್‌ಗೆ ಬಿದ್ದ ಡೆವಿಲ್ ಅವರಿದ್ದ ಸ್ಥಳಕ್ಕೆ ಬಂದಿಳಿಯುತ್ತಾಳೆ.

ಮೌರ್ಯ ಎಸ್ಕೇಪ್

ಕಾರ್‌ನಲ್ಲಿ ಬಂದಿಳಿದ ಡೆವಿಲ್ ಯಾರೆಂಬುವುದನ್ನು ನೋಡಲು ಕಾತುರದಿಂದ ಭೂಪತಿ, ನಕ್ಷತ್ರ, ಸಿ.ಎಸ್ ಜೊತೆಗೆ ಪೋಲಿಸರು ಕಾಯುತ್ತಿದ್ದರು. ಕಾರ್‌ನಿಂದ ಇಳಿದ ಡೆವಿಲ್ ಇನ್ನೇನು ಎಡಿಟರ್ ಕುಮಾರ್ ಕಡೆಗೆ ಮುಖ ತಿರುಗಿಸಬೇಕನ್ನುವಷ್ಟರಲ್ಲಿ ಆಕೆಗೆ ಒಂದು ಕರೆ ಬರುತ್ತೆ. ಅದು ಯಾರದೆಂದರೆ ಡೆವಿಲ್ ಮೌರ್ಯನನ್ನು ಕೊಲ್ಲಲ್ಲು ಕಳುಸಿದ ಹುಡುಗ. ಆತ ಫೋನ್‌ನಲ್ಲಿ ಮಾತನಾಡುತ್ತ ಮೌರ್ಯ ಸತ್ತಿಲ್ಲ, ಇದೆಲ್ಲ ನಿಮಗೆ ಬಲೆ ಬೀಸಲು ಆ ಸಿ.ಎಸ್ ಮಾಡಿದಂತಹ ಪ್ಲಾನ್ ಆಗಿದೆ. ನೀವು ಆದಷ್ಟು ಬೇಗ ಆ ಜಗದಿಂದ ಹೊರಟು ಹೋಗಿ ಮೇಡಂ ಎಂದು ಹೇಳಿ ಫೋನ್ ಕಟ್ ಮಾಡುತ್ತಾನೆ.

ಈತನ ಮಾತಿಗೆ ಶಾಕ್ ಆದ ಡೆವಿಲ್ ಆ ತಕ್ಷಣನೇ ಕಾರ್ ಹತ್ತಿ ಹೊಟರು ಹೋಗುತ್ತಾಳೆ. ಇದನ್ನೆಲ್ಲಾ ಗಮನಿಸಿದ ಭೂಪತಿ ಪೋಲಿಸರೆಲ್ಲರೂ ಆ ಕಾರ್ ಹಿಂದೆಯೇ ಓಡಿ ಹೋಗುತ್ತಾರೆ. ಆದರೂ ಆಕೆ ಯಾರೆಂಬುವುದು ಅವರಿಗೆ ಗೊತ್ತಾಗಲಿಲ್ಲ. ಡೆವಿಲ್‌ಗೆ ನಮ್ಮವರೇ ಯಾರೋ ಸಹಾಯ ಮಾಡುತ್ತಿದ್ದಾರೆ. ಇಲ್ಲಂದ್ರೆ ಆಕೆಗೆ ಹೇಗೆ ಗೊತ್ತಾಗಲು ಸಾಧ್ಯ ನಾವು ಟ್ರಾಪ್ ಮಾಡುತ್ತಿರುವ ವಿಷಯ ಎಂದು ಅವರವರೇ ಮಾತನಾಡಿಕೊಳ್ಳುತ್ತಾರೆ. ನಂತರ ಎಡಿಟರ್ ಕುಮಾರ್ ಮೇಲೆ ಅನುಮಾನ ಮೂಡುತ್ತೆ.

ಇದನ್ನು ಓದಿ:ಸಕ್ಕತಾಗಿ ವರ್ಕ್ ಆಗ್ತಿದೆ ಭೂಪತಿ ನಕ್ಷತ್ರ ಪ್ಲಾನ್, ಡೆವಿಲ್ ಕಥೆ ಅಷ್ಟೇ.. ಎಲ್ಲರಿಗೂ ಕಾದಿದೆ ಶಾಕ್

ಆಗ ಆತ ನಾನು ಬೆಳಗ್ಗಿನಿಂದಲೂ ನಿಮ್ಮ ಜೊತೆಗೇನೆ ಇದ್ದೇನೆ ಅಲ್ವ ನಾನು ಹೇಗೆ ಹೇಳಲು ಸಾಧ್ಯ ಎಂದು ಹೇಳುತ್ತಾನೆ. ಆಗ ಭೂಪತಿ, ನಕ್ಷತ್ರ, ಸಿ.ಎಸ್‌ಗೆ ಈ ಡೆವಿಲ್‌ಗೆ ಸಹಾಯ ಮಾಡುತ್ತಿರುವವರು ಯಾರಾಗಿರಬಹುದು ಎಂದು ತಲೆಯಲ್ಲಿ ಹುಳ ಬಿಟ್ಟಂತಾಗುತ್ತದೆ. ಇನ್ನೇನು ಸಿಕ್ಕಿ ಹಾಕಿಕೊಳ್ಳಬೇಕಿದ್ದ ಡೆವಿಲ್ ತಪ್ಪಿಸಿಕೊಂಡದ್ದು ಹೋದದ್ದು ಇವರಿಗೆಲ್ಲ ತುಂಬಾನೇ ಬೇಜಾರಾಗುತ್ತದೆ. ಆದರೂ ಹೋಪ್ಸ್ ಕಳೆದುಕೊಳ್ಳದ ಸಿ.ಎಸ್ ಆ ಡೆವಿಲ್ ಲೇಡಿ ಒಂದಲ್ಲ ಒಂದು ದಿನ ನಮ್ಮ ಕೈಗೆ ಸಿಕ್ಕಿ ಹಾಕಿಕೊಳ್ಳಲೇಬೇಕು.

ಇವತ್ತು ಆಕೆಯ ಟೈಮ್ ಚೆನ್ನಾಗಿತ್ತು. ಇನ್ನೊಂದು ದಿನ ಆಕೆ ಟೈಂ ಕೆಟ್ಟು ಆಕೆಯ ಮುಖವಾಡ ಕಳಚಲೇಬೇಕಲ್ವ ಎಂದು ಹೇಳುತ್ತಾ ತಮಗೆ ತಾವೇ ಸಮಧಾನ ಮಾಡಿಕೊಳ್ಳುತ್ತಾರೆ. ಇತ್ತ ಕಡೆ ಸಿ.ಎಸ್ ಬೀಸಿದ ಬಲೆಯಿಂದ ತಪ್ಪಿಸಿಕೊಂಡ ಡೆವಿಲ್ ಭಾರ್ಗವಿ ಕೋಪದಿಂದ ನೀನು ಇಷ್ಟು ಮುಂದುವರೆದು ಬಿಟ್ಟಿಯಾ ಸಿ.ಎಸ್, ನೀನು ಏನೇ ಮಾಡಿದರೂ ನನ್ನ ಮೂಲವನ್ನು ನಿನಗೆ ಕಂಡುಹಿಡಿಯಲು ಸಾಧ್ಯವಿಲ್ಲ. ನೀನು ಇಷ್ಟೆಲ್ಲಾ ಮುಂದುವರೆದಿದ್ದೀಯಾ ಅಂದರೆ ನಿನ್ನನ್ನು ನೆಮ್ಮದಿಯಾಗಿಡಲು ನಾನು ಬಿಡಲ್ಲ.

ನಿನ್ನ ಸಂಸಾರ ಪ್ರವಾಹದಲ್ಲಿ ಕೊಚ್ಚಿ ಹೋಗುವಂತೆ ಭಯಾನಕ ಪ್ಲಾನ್ ಸದ್ಯದಲ್ಲೇ ಮಾಡುತ್ತೇನೆ ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ. ಇನ್ನು ಮೌರ್ಯನನ್ನು ಸೇಫ್ ಆಗಿ ಪೋಲಿಸ್ ಕಸ್ಟಡಿಗೆ ಒಪ್ಪಿಸಬೇಕೆಂದು ಪೋಲಿಸರ ಜೊತೆಗೆ ಸಿ.ಎಸ್, ಭೂಪತಿ ನಕ್ಷತ್ರ ಜೋಡಿ ಮೌರ್ಯನನ್ನು ಕೂಡಿ ಹಾಕಿದ್ದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಕೂಡಾ ಇವರಿಗೊಂದು ಶಾಕಿಂಗ್ ನ್ಯೂಸ್ ಕಾದಿರುತ್ತೆ. ಅದೇನೆಂದರೆ ಮೌರ್ಯ ಸಿ.ಎಸ್ ನೇಮಿಸಿದ್ದ ಹುಡುಗರನ್ನು ಹೊಡೆದು ಹಾಕಿ ಮೌರ್ಯ ಅಲ್ಲಿಂದ ಪರಾರಿಯಾಗಿದ್ದ.

ತಮ್ಮ ಹೀಗೆ ಏಕೆ ಮಾಡುತ್ತಿದ್ದಾನೆ, ಈತ ಹಿಗೆಲ್ಲ ಮಾಡುವಾಗ, ಇವನು ನನ್ನ ತಮ್ಮನಾಗಿ ಯಾಕೆ ಹುಟ್ಟಿದ್ದಾನೆ ಎಂದು ಅನಿಸುತ್ತೆ ಎಂದು ಭೂಪತಿ ನೋವಿನಿಂದ ಮಾತನಾಡುತ್ತಾನೆ. ನಕ್ಷತ್ರ ಇವರು ಹೀಗೆ ತಪ್ಪು ಮೇಲೆ ತಪ್ಪು ಮಾಡುತ್ತಾ ಹೋದರೆ ಇವರ ಶಿಕ್ಷೆ ಕೂಡಾ ಜಾಸ್ತಿ ಆಗುತ್ತದೆ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಸಿ.ಎಸ್​​ಗೆ ಲಾಯರ್ ಕಾಲ್ ಮಾಡಿ ಮುಂಬೈನಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್‌ನಲ್ಲಿ ಮೌರ್ಯನದ್ದು ಯಾವುದೇ ತಪ್ಪಿಲ್ಲ ಅವನು ನಿರಪರಾಧಿ ಎನ್ನುವ ಸಿಹಿ ಸುದ್ದಿಯನ್ನು ಹೇಳುತ್ತಾರೆ. ಇದನ್ನು ಕೇಳಿದ ಭೂಪತಿ ನಕ್ಷತ್ರಳಿಗೆ ಕೊಂಚ ಸಮಧಾನವಾಗುತ್ತದೆ. ತಪ್ಪಿಸಿಕೊಂಡು ಹೋದ ಮೌರ್ಯ ಹಾಗೂ ಡೆವಿಲ್ ಇನ್ನೇನು ಅವಾಂತರ ಮಾಡುತ್ತಾನೋ ಎಂಬುವುದನ್ನು ಮುಂದೆ ಕಾದು ನೋಡಬೇಕಿದೆ.

ಮಧುಶ್ರೀ ಅಂಚನ್

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ