Lakshana Serial: ಸಕ್ಕತಾಗಿ ವರ್ಕ್ ಆಗ್ತಿದೆ ಭೂಪತಿ ನಕ್ಷತ್ರ ಪ್ಲಾನ್, ಡೆವಿಲ್ ಕಥೆ ಅಷ್ಟೇ.. ಎಲ್ಲರಿಗೂ ಕಾದಿದೆ ಶಾಕ್

ಪ್ಲಾನ್ ಪ್ರಕಾರ ಎಡಿಟರ್ ಕುಮಾರ್ ಹತ್ರ ಡೆವಿಲ್‌ಗೆ ಕರೆ ಮಾಡಿಸಿ, ಮೇಡಂ ನನಗೆ ಹಣಬೇಕು ಎಂದು ಕೇಳುತ್ತಾನೆ, ಇದಕ್ಕೆ ಒಪ್ಪಿದ ಡೆವಿಲ್ ಓಕೆ ನಾನು ಹೇಳಿದ ಸ್ಥಳಕ್ಕೆ ಬಾ, ಎಂದು ಹೇಳುತ್ತಾಳೆ. ಆದರೆ ಈ ಪ್ಲಾನ್​​ನಿಂದ ಮುಂದೆ ಕಾದಿದೆ ನಕ್ಷತ್ರ - ಭೂಪತಿ ಶಾಕ್.

Lakshana Serial: ಸಕ್ಕತಾಗಿ ವರ್ಕ್ ಆಗ್ತಿದೆ ಭೂಪತಿ ನಕ್ಷತ್ರ ಪ್ಲಾನ್, ಡೆವಿಲ್ ಕಥೆ ಅಷ್ಟೇ.. ಎಲ್ಲರಿಗೂ ಕಾದಿದೆ ಶಾಕ್
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 09, 2022 | 11:09 AM

ಧಾರಾವಾಹಿ : ಲಕ್ಷಣ (Lakshana )

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಭೂಪತಿ ನಕ್ಷತ್ರ ಜೋಡಿ ಹಾಗೂ ಪೋಲಿಸರು ಸೇರಿ ಸಿ.ಎಸ್ ಬಗ್ಗೆ ಸುಳ್ಳು ಸುದ್ದಿ ಬರೆದಿದ್ದ ನ್ಯೂಸ್ ಪೇಪರ್ ಎಡಿಟರ್ ಕುಮಾರ್ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಡೆವಿಲ್ ಯಾರೆಂಬುದನ್ನು ಬಾಯಿ ಬಿಡಿಸುತ್ತಾರೆ. ಆದರೆ ಆತ ಕಣ್ಣಾರೆ ಡೆವಿಲ್‌ನ್ನು ನೋಡಿಲ್ಲ ಎಂದು ಹೇಳುತ್ತಾನೆ.

ಎಲ್ಲರಿಗೂ ಕಾದಿದೆ ದೊಡ್ಡ ಶಾಕ್ 

ಏನಾಗುತ್ತೆ ಕುಮಾರ್‌ಗೆ ಡೆವಿಲ್ ಬಗ್ಗೆ ತಿಳಿಯದೇ ಇದ್ದರೆ ಏನಂತೆ ಆತನ ಮೂಲಕನೇ ಆ ಡೆವಿಲ್‌ಗೆ ಬಲೆ ಬೀಸಲು ಭೂಪತಿ ಒಂದು ಪ್ಲಾನ್ ಹಾಕುತ್ತಾನೆ. ಆ ಪ್ಲಾನ್ ಪ್ರಕಾರ ಎಡಿಟರ್ ಕುಮಾರ್ ಹತ್ರ ಡೆವಿಲ್‌ಗೆ ಕರೆ ಮಾಡಿಸಿ, ಮೇಡಂ ಸಿ.ಎಸ್ ಬಗ್ಗೆ ನ್ಯೂಸ್ ಪಬ್ಲಿಷ್ ಮಾಡಿದ್ದೀನಿ ಅಲ್ವಾ, ನನಗೆ ಹಣ ಯಾವಾಗ ಸಿಗುತ್ತೆ ಎಂದು ಕೇಳುತ್ತಾನೆ. ಅತ್ತ ಕಡೆಯಿಂದ ಡೆವಿಲ್ ಈ ಸುದ್ದಿ ಹೆಚ್ಚು ಜನರಿಗೆ ತಲುಪಿಲ್ಲ, ಇಡೀ ರಾಜ್ಯದ ಜನರಿಗೆ ಗೊತ್ತಾಗಬೇಕು ಹಾಗೆ ಏನಾದರೂ ಮಾಡಿ ಎಂದು ಹೇಳುತ್ತಾಳೆ. ಈಕೆಯ ಮಾತಿಗೆ ನಾನು ನ್ಯೂಸ್ ಚಾನಲ್ ಜೊತೆಗೆ ಮಾತನಾಡಿದ್ದೇನೆ. ನ್ಯೂಸ್ ಟೆಲಿಕಾಸ್ಟ್ ಆಗಬೇಕೆಂದರೆ ಹಣ ನನ್ನ ಕೈಗೆ ಸಿಗಲೇಬೇಕೆಂದು ಕುಮಾರ್ ಹೇಳಿದಾಗ ಅದಕ್ಕೇನಂತೆ ಸ್ವತಃ ನಾನೇ ಬಂದು ನಿನಗೆ ಹಣ ಕೊಡುತ್ತೇನೆ ಎಂದು ಒಂದು ಜಾಗದ ಅಡ್ರೆಸ್ ಹೇಳಿ ಅಲ್ಲಿಗೆ ಬರುವಂತೆ ಹೇಳುತ್ತಾಳೆ. ಇನ್ನು ಡೆವಿಲ್ ಬಣ್ಣ ಪಕ್ಕಾ ಬಯಲಾಗುತ್ತೆ ಅಂದುಕೊಂಡು ಎಡಿಟರ್ ಕುಮಾರನ್ನು ಪೋಲಿಸರ ಜೊತೆ ಸೇರಿ ನಕ್ಷತ್ರ ಮತ್ತು ಭೂಪತಿ ಆ ಸ್ಥಳಕ್ಕೆ ಹೋಗುತ್ತಾರೆ.

ಹೋಗುವ ದಾರಿ ಮಧ್ಯೆ ನಕ್ಷತ್ರ ತನ್ನ ತಂದೆ ಸಿ.ಎಸ್‌ಗೆ ಕರೆ ಮಾಡಿ ಡೆವಿಲ್ ಎಡಿಟರ್‌ನ್ನು ಈ ಸ್ಥಳಕ್ಕೆ ಬರಲು ಹೇಳಿದ್ದಾಳೆ ಎಂದು ಹೇಳಿ ತಂದೆಯನ್ನು ಅಲ್ಲಿಗೇನೆ ಬರಲು ಹೇಳುತ್ತಾಳೆ. ಎಲ್ಲರೂ ಅಲ್ಲಿಗೆ ಬಂದು ತಲುಪುತ್ತಾರೆ. ಆ ಸಂದರ್ಭದಲ್ಲಿ ತಂದೆಯನ್ನು ನೋಡಿದ ನಕ್ಷತ್ರಳಿಗೆ ಅಳು ಬರುತ್ತದೆ. ಯಾಕಮ್ಮ ಅಳುತ್ತಿದ್ದೀಯಾ ಅಂತ ಸಿ.ಎಸ್ ಕೇಳಿದಾಗ ನಾವು ಮಾಡಿದ ನಾಟಕದಿಂದ ಸುಮಾರು ಜೀವಗಳಿಗೆ ನೋವಾಗಿದೆ ಅಪ್ಪ.

ನಾವು ಮೌರ್ಯನ ಸಾವಿನಲ್ಲಿ ಆಟವಾಡಿದ್ದು ತಪ್ಪಲ್ವ ಎಂದು ಕೇಳುತ್ತಾಳೆ. ಆಗ ಸಿ.ಎಸ್ ನಿನ್ನ ಮತ್ತು ಮೌರ್ಯನ ಪ್ರಾಣ ಉಳಿಯಬೇಕೆಂದರೆ ಇದೆಲ್ಲಾ ಮಾಡಲೇಬೇಕು ಎಂದು ಹೇಳುತ್ತಾರೆ. ಇವರೊಂದಿಗೆ ಭೂಪತಿ ಕೂಡಾ ಸಮಾಧಾನ ಮಾಡುತ್ತಾನೆ. ಆಗಿದ್ದೆಲ್ಲ ಆಗಿ ಹೋಗಿದೆ. ಮೌರ್ಯ ಕೂಡಾ ಸೇಫ್ ಆಗೇ ಇದ್ದಾನೆ. ಈಗ ಏನಿದ್ದರೂ ಡೆವಿಲ್‌ನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವುದೊಂದೇ ಬಾಕಿ. ಏನು ಟೆನ್ಷನ್ ಮಾಡಬೇಡಿ ನಮ್ಮ ಪ್ರಾಬ್ಲಮ್ ಆದಷ್ಟು ಬೇಗ ಸಾಲ್ವ್ ಆಗುತ್ತೆ ಎಂದು ಹೇಳುತ್ತಾನೆ.

ಇದನ್ನು ಓದಿ:Lakshana Serial: ಡೆವಿಲ್ ಮೂಲ ಪತ್ತೆ ಹಚ್ಚಲು ನ್ಯೂಸ್ ಪೇಪರ್ ಎಡಿಟರ್ ಹಿಂದೆ ಬಿದ್ದ ಭೂಪತಿ – ನಕ್ಷತ್ರ

ನಂತರ ಇಷ್ಟು ಹೊತ್ತಾದರೂ ಡೆವಿಲ್ ಪತ್ತೆ ಇಲ್ಲದ್ದನ್ನು ಕಂಡು ಕುಮಾರ್ ಹತ್ರ ಡೆವಿಲ್‌ಗೆ ಕಾಲ್ ಮಾಡಿಸುತ್ತಾರೆ. ಆಕೆಗೆ ಕಾಲ್ ಮಾಡಿದ ಕುಮಾರ್ ಮೇಡಮ್ ಎಷ್ಟು ಹೊತ್ತು ಆಗುತ್ತೆ ಬರುವಾಗ, ನಮಗೂ ಕೂಡಾ ಬೇರೆ ಕೆಲಸ ಇರುತ್ತೆ ಅಲ್ವಾ ಎಂದು ಕೇಳುತ್ತಾನೆ. ನಾನು ಆನ್ ದಿ ವೇ ಬರುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ ಮಾಡಿ, ನಿನಗೆ ಸಾಯಲು ಇಷ್ಟೊಂದು ಅರ್ಜೆಂಟಾ ಎಂದು ಹೇಳಿ ಗನ್ ಕೈಗೆ ಎತ್ತಿಕೊಂಡು ಅಟ್ಟಹಾಸದ ನಗುವನ್ನಾಡುತ್ತಾಳೆ. ನಂತರ ಒಬ್ಬಳೇ ಮಾತನಾಡುತ್ತಾ ಒಬ್ಬ ಪ್ರಖ್ಯಾತ್‌ನನ್ನು ಜೀವಂತವಾಗಿ ಬಿಟ್ಟು ನನ್ನ ಬುಡಕ್ಕೆ ಬಂದಿತ್ತು. ಈಗ ನಿನ್ನನ್ನು ಬಿಡುವ ಮಾತೇ ಇಲ್ಲ. ಇಂದೇ ನಿನ್ನ ಕೊನೆಯ ದಿನ ಎಂದು ಹೇಳುತ್ತಾ ಡ್ರೆವ್ ಮಾಡುತ್ತಾ ಹೋಗುತ್ತಾಳೆ.

ಇತ್ತ ಕಡೆ ಸಿ.ಎಸ್ ತನ್ನ ಹೆಂಡತಿ ಆರತಿಗೆ ಕಾಲ್ ಮಾಡಿ ನಾನು ಅರೆಸ್ಟ್ ಆಗಿಲ್ಲ ಇದು ಡೆವಿಲ್‌ನ್ನು ಹಿಡಿಯಲು ಮಾಡಿದ ನಾಟಕ ಎಂದು ಹೇಳುತ್ತಾನೆ. ಈ ಮಾತನ್ನು ಮಿಲ್ಲಿ ಕೇಳಿಸಿಕೊಂಡು ಇದು ಇವರು ನನ್ನ ಅಮ್ಮನನ್ನು ಟ್ರಾಪ್ ಮಾಡಲು ಆಡಿದ ನಾಟಕನಾ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಅಮ್ಮನಿಗೆ ಫೋನ್ ಮಾಡಬೇಕು ಅಂದುಕೊಂಡಷ್ಟರಲ್ಲಿ ಮೊಬೈಲ್ ನೆಲಕ್ಕೆ ಬಿದ್ದು ಹಾಳಾಗುತ್ತದೆ. ಏನು ಮಾಡಲಾಗದ ಪರಿಸ್ಥಿತಿಯಲ್ಲಿ ನಿನ್ನನ್ನು ನೀನೇ ಕಾಪಾಡಿಕೊಳ್ಳಬೇಕಮ್ಮ ಅಂತ ಕೈ ಮುಗಿಯುತ್ತಾಳೆ. ಇದೇ ಸಮಯಕ್ಕೆ ಡೆವಿಲ್ ತಾನು ಹೇಳಿದ ಸ್ಥಳಕ್ಕೆ ಬಂದು ಕಾರ್‌ನಿಂದ ಇಳಿಯುತ್ತಿದ್ದಂತೆ ನಕ್ಷತ್ರ ಭೂಪತಿ ಸೇರಿದಂತೆ ಎಲ್ಲರೂ ಒಮ್ಮೆ ಶಾಕ್ ಆಗುತ್ತಾರೆ. ಮುಂದೆ ಏನಾಗುತ್ತೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ. ಮಧುಶ್ರೀ ಅಂಚನ್

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ