Honganasu: ಜಗತಿಗೆ ಅನುಮಾನ ಮೂಡಿಸಿದ ವಸುಧರಾ ಮಾತು; ರಿಷಿ ಮುಂದಿನ ನಿಲುವೇನು?
Honganasu Serial Update: ರಿಷಿ ಪ್ರೀತಿ ರಿಜೆಕ್ಟ್ ಮಾಡಿದ ವಸುಧರಾಳನ್ನು ಜಗತಿ ಪ್ರಶ್ನೆ ಮಾಡುತ್ತಿದ್ದಾಳೆ. ಆದರೆ ವಸುಧರಾ ಏನೂ ಬಾಯ್ಬಿಟ್ಟಿಲ್ಲ. ಎಲ್ಲವನ್ನೂ ಹೇಳಬೇಕಾಗಿಲ್ಲ ಎಂದು ವಸು ಖಡಕ್ ಆಗಿ ಹೇಳಿದಳು.
ಧಾರಾವಾಹಿ: ಹೊಂಗನಸು
ಪ್ರಸಾರ: ಸ್ಟಾರ್ ಸುವರ್ಣ
ಸಮಯ: ಮಧ್ಯಾಹ್ನ 1.30
ನಿರ್ದೇಶನ: ಅನಿಲ್ ಆನಂದ್, ಕುಮಾರ್
ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ವಸು ಪ್ರೀತಿ ರಿಜೆಕ್ಟ್ ಮಾಡಿದ ಬಳಿಕ ರಿಷಿ ತಡವಾಗಿ ಮನೆಗೆ ಬಂದ. ರಿಷಿ ಇನ್ನೂ ಮನೆಗೆ ಬಂದಿಲ್ಲ ಎಂದು ಎಲ್ಲರೂ ಗಾಬರಿಯಾಗಿದ್ದರು. ವಸುಧರಾ ಕೂಡ ಯಾರ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ರಿಷಿ ಮನೆಗೆ ಬಂದವನೇ ಏನು ಮಾತನಾಡದೆ ಸೈಲೆಂಟ್ ಆಗಿಯೇ ತನ್ನ ರೂಮಿಗೆ ಹೋದ. ರಿಷಿ ಮತ್ತು ವಸು ನಡುವೆ ಏನಾಗಿದೆ ಎಂದು ಜಗತಿ ಮತ್ತು ಮಹೇಂದ್ರನಿಗೆ ಟೆನ್ಶನ್ ಹೆಚ್ಚಾಯಿತು. ರಿಷಿ ಏನನ್ನು ಹೇಳದೆ ಮನಸ್ಸಲ್ಲೇ ಬಚ್ಚಿಟ್ಟುಕೊಂಡ. ಬಳಿಕ ಜಗತಿ ವಸುಧರಾ ಬಳಿ ವಿಚಾರಿಸಿದಳು.
ರಿಷಿ ಪ್ರೀತಿ ರಿಜೆಕ್ಟ್ ಮಾಡಿದ ವಸುಧರಾಳನ್ನು ಜಗತಿ ಪ್ರಶ್ನೆ ಮಾಡುತ್ತಿದ್ದಾಳೆ. ರಿಷಿ ಪ್ರೀತಿಯನ್ನು ತಿರಸ್ಕರಿಸಿದ್ದೇಕೆ ಎಂದು ವಸುಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದಳು ಜಗತಿ. ಆದರೆ ವಸುಧರಾ ಯಾಕೆ ಎಂದು ಬಾಯ್ಬಿಟ್ಟಿಲ್ಲ. ಎಲ್ಲವನ್ನೂ ಹೇಳಬೇಕಾಗಿಲ್ಲ ಎಂದು ಜಗತಿಗೆ ಖಡಕ್ ಆಗಿ ಹೇಳಿದಳು ವಸು. ವಸುಧರಾ ಮಾತುಗಳನ್ನು ಕೇಳಿ ಜಗತಿ ಶಾಕ್ ಆದಳು. ‘ಇದು ನಿನ್ನ ಮಾತುಗಳಲ್ಲ, ನಿನಗೆ ಯಾರೋ ಬೆದರಿಕೆ ಹಾಕಿದ್ದಾರೆ. ಯಾರು ಅದು’ ಎಂದು ಕೇಳಿದಳು ಜಗತಿ. ಸಾಕ್ಷಿ ಭೇಟಿಯಾಗಿ ಬೆದರಿಕೆ ಹಾಕಿದ ವಿಚಾರವನ್ನು ವಸು ಬಾಯ್ಬಿಟ್ಟಿಲ್ಲ. ‘ನನ್ನ ಮನಸ್ಸಿನಲ್ಲಿ ರಿಷಿ ಸರ್ ಇಲ್ಲ, ಅವರ ಮೇಲೆ ಪ್ರೀತಿ ಇಲ್ಲ’ ಎಂದು ವಸು ಹೇಳಿದಳು. ಜಗತಿ ಎಷ್ಟೇ ಕೇಳಿದರೂ ವಸುಧರಾ ಬಾಯ್ಬಿಟ್ಟಿಲ್ಲ. ‘ರಿಷಿ ಹೃದಯ ಒಡೆದು ಚೂರು ಮಾಡಿಬಿಟ್ಟೆ’ ಎಂದು ವಸುಗೆ ಹೇಳಿ ತುಂಬಾ ನೋವಿನಿಂದ ಅಲ್ಲಿಂದ ಹೊರಟಳು ಜಗತಿ.
ಇದನ್ನೂ ಓದಿ: ಹೊಂಗನಸು: ರಿಷಿ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು; ಜಗತಿ ಸಂತಸಕ್ಕೆ ಕಾರಣವಾಯ್ತು ಮಗನ ನಿರ್ಧಾರ
ಮನೆಗೆ ಬರುತ್ತಿದ್ದಂತೆ ರಿಷಿ ಮತ್ತು ವಸು ವಿಚಾರವನ್ನು ಮಹೇಂದ್ರನಿಗೆ ಹೇಳಿದಳು ಜಗತಿ. ವಸುಧರಾ ಯಾಕೆ ರಿಷಿಯನ್ನು ರಿಜೆಕ್ಟ್ ಮಾಡಿದಳು ಎಂದು ಇಬ್ಬರೂ ಯೋಚಿಸಿದರು. ಇಬ್ಬರೂ ಚೆನ್ನಾಗಿಯೇ ಓಡಾಡಿಕೊಂಡಿದ್ದರು. ಆದರೆ ವಸು ಯಾಕೆ ಹೀಗೆ ಮಾಡಿದಳು ಎಂದು ಮಹೇಂದ್ರ ಮತ್ತು ಜಗತಿಗೆ ದೊಡ್ಡ ಪ್ರಶ್ನೆ ಮೂಡಿತು. ಜಗತಿ ಮತ್ತು ಮಹೇಂದ್ರ ಇಬ್ಬರ ಮಾತನ್ನು ಗೌತಮ್ ಕೇಳಿಸಿಕೊಂಡು ಶಾಕ್ ಆದ. ರಿಷಿ ವಸುಧರಾಳನ್ನು ಪ್ರೀತಿಸುತ್ತಿದ್ದನಾ, ಪ್ರಪೋಸ್ ಕೂಡ ಮಾಡಿದನಾ ಎಂದು ಅಚ್ಚರಿ ಪಟ್ಟ. ರಿಷಿನಾ ಯಾಕೆ ವಸು ರಿಜೆಕ್ಟ್ ಮಾಡಿದಳು ಎಂದು ಗೌತಮ್‌ಗೂ ಯೋಚನೆ ಶುರುವಾಯಿತು.
ಇದನ್ನೂ ಓದಿ: Honganasu: ವಸುಗೆ ಬರೆದ ಲವ್ ಲೆಟರ್ ರಹಸ್ಯ ಬಯಲು; ಜಗತಿ ಕೈಗೆ ಸಿಕ್ಕಿಬಿದ್ದ ರಿಷಿ
ರಿಷಿ ಬೇಸರದಲ್ಲಿ ಕಾಲೇಜಿಗೆ ಬಂದ. ವಸುಧರಾ ತಡವಾಗಿ ಕಾಲೇಜಿಗೆ ಎಂಟ್ರಿ ಕೊಟ್ಟಳು. ಕ್ಲಾಸ್‌ಗೆ ತಡವಾಗಿ ಬಂದ ವಸುಧರಾಳನ್ನು ನೋಡಿ ರಿಷಿ ಸಿಟ್ಟು ನೆತ್ತಿಗೇರಿತು. ಕ್ಲಾಸ್‌ಗೆ ತಡವಾಗಿ ಬರಬಾರದು ಎನ್ನುವುದು ಗೊತ್ತಾಗಲ್ವಾ ಎಂದು ಪರೋಕ್ಷವಾಗಿ ವಸುಗೆ ತರಾಟೆ ತೆಗೆದುಕೊಂಡ. ಬಳಿಕ ಕ್ಲಾಸ್ ಮುಗಿಯಿತು ಎಂದು ಎಲ್ಲಾ ವಿದ್ಯಾರ್ಥಿಗಳನ್ನು ಕಳುಹಿಸಿದ ರಿಷಿ. ವಸು ಕೂಡ ಹಾಗೆ ಹೊರಟು ಹೋದಳು. ಅಷ್ಟೊತ್ತಿಗೆ ಗೌತಮ್ ಕಾಲೇಜಿಗೆ ಎಂಟ್ರಿ ಕೊಟ್ಟ. ನಿನ್ನ ಜೊತೆ ಮಾತನಾಡಬೇಕೆಂದು ವಸುಧರಾಳನ್ನು ಕರೆದುಕೊಂಡು ಹೋದ. ಯಾಕಿರಬಹುದು ಎಂದು ಅವರ ಹಿಂದೆಯೇ ರಿಷಿ ಹೊರಟ.
ರಿಷಿನ ರಿಜೆಕ್ಟ್ ಮಾಡಿದ್ದು ಯಾಕೆ ಅಂತ ವಸುಗೆ ಪ್ರಶ್ನೆ ಮಾಡಿದ ಗೌತಮ್. ಜಗತಿಗೆ ಹೇಳಿದ ಉತ್ತರವನ್ನೇ ಗೌತಮ್‌ಗೂ ಹೇಳಿದಳು ವಸು. ಆದರೆ ಅಷ್ಟಕ್ಕೆ ಸುಮ್ಮನಾಗದೆ ನೀನು ರಿಷಿಯನ್ನು ಪ್ರೀತಿಸುತ್ತಿದ್ದೀಯಾ ಆದರೆ ಹೇಳುತ್ತಿಲ್ಲ ಎಂದು ಗೌತಮ್ ಪದೇ ಪದೇ ಹೇಳಿದ. ನಿನ್ನ ಭಾವಚಿತ್ರ ಬಿಡಿಸಿದ್ದು, ಲವ್ ಲೆಟರ್ ಬರೆದಿದ್ದೂ ಎಲ್ಲಾ ರಿಷಿನೇ ಅಂತ ವಸು ಮುಂದೆ ಸತ್ಯ ಬಾಯ್ಬಿಟ್ಟ ಗೌತಮ್. ವಸುಧರಾಗೆ ಅಚ್ಚರಿಯಾಯಿತು. ಆದರೆ ಏನನ್ನು ತೋರಿಸಿಕೊಳ್ಳದೇ ಸಹಜವಾಗಿಯೇ ಉತ್ತರ ನೀಡಿದಳು. ರಿಷಿನ ತಿರಸ್ಕರಿಸಿದ್ದು ಯಾಕೆ ಎಂದು ಗೌತಮ್ ಮತ್ತೆ ಮತ್ತೆ ಕೇಳಿದ. ಎಷ್ಟೇ ಕೇಳಿದರೂ ವಸು ಏನನ್ನೂ ಬಾಯ್ಬಿಟ್ಟಿಲ್ಲ. ಇಬ್ಬರೂ ಮಾತನಾಡುತ್ತಿರುವುದನ್ನು ರಿಷಿ ದೂರದಲ್ಲೇ ನಿಂತು ಕೇಳಿಸಿಕೊಂಡ. ರಿಷಿಯನ್ನು ನೋಡಿ ವಸು ಮತ್ತು ಗೌತಮ್ ಇಬ್ಬರೂ ಗಾಬರಿಯಾದರು. ರಿಷಿನ ಮಾತನಾಡಿಸುತ್ತಾಳಾ ವಸು? ಪ್ರೀತಿ ತಿರಸ್ಕರಿಸಿದ ಕಾರಣ ಬಿಚ್ಚಿಡುತ್ತಾಳ ವಸುಧರಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.