Prashanth Sambargi: ಹನ್ನೆರಡನೇ ವಾರಕ್ಕೆ ಬಿಗ್​ ಬಾಸ್​ ಆಟ ಮುಗಿಸಿ ಮನೆಯಿಂದ ಹೊರ ನಡೆದ ಪ್ರಶಾಂತ್‌ ಸಂಬರ್ಗಿ

ಬಿಗ್​ ಬಾಸ್ ಸೀಸನ್​ 9 ಹನ್ನೆರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ದೊಡ್ಮನೆಯಿಂದ ಪ್ರಶಾಂತ್‌ ಸಂಬರ್ಗಿ ಅವರು ಹೊರ ನಡೆದಿದ್ದಾರೆ.

Prashanth Sambargi: ಹನ್ನೆರಡನೇ ವಾರಕ್ಕೆ ಬಿಗ್​ ಬಾಸ್​ ಆಟ ಮುಗಿಸಿ ಮನೆಯಿಂದ ಹೊರ ನಡೆದ ಪ್ರಶಾಂತ್‌ ಸಂಬರ್ಗಿ
ಪ್ರಶಾಂತ್‌ ಸಂಬರ್ಗಿ 
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 11, 2022 | 10:32 PM

‘ಬಿಗ್​ ಬಾಸ್​ ಸೀಸನ್​ 9’ (BBK9) ಸದ್ಯ ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಮುಕ್ತಾಯ ಹಂತ ಕೂಡ ತಲುಪಲಿದೆ. ಹೀಗಿರುವಾಗ ದೊಡ್ಮನೆಯಿಂದ ಒಬ್ಬೊಬರಾಗಿ ಸ್ಪರ್ಧಿಗಳು ಹೊರ ಹೋಗುತ್ತಿದ್ದಾರೆ. ಕಳೆದ ವಾರದಲ್ಲಿ ‘ಮಂಗಳಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಅವರು ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದರು. ಸದ್ಯ ಈ ವಾರ ನಟ ಕಿಚ್ಚ ಸುದೀಪ್​ ಅವರು ದೊಡ್ಮನೆಯಿಂದ ಯಾರನ್ನ ಹೊರೆಗೆ ಕರೆಯುತ್ತಾರೆ ಮತ್ತು ಯಾರು ಹೋಗಬಹುದು ಎಂಬ ಕುತೂಹಲ ಬಿಗ್​ ಬಾಸ್​ ಪ್ರಿಯರಿಗೆ ಕಾಡುತ್ತಿತ್ತು. ಈ ಕುತೂಹಲಕ್ಕೆ ಸದ್ಯ ಬ್ರೇಕ್​ ಬಿದಿದ್ದು, ಬಿಗ್​ ಬಾಸ್​ ಮನೆಯಿಂದ ಈ ವಾರ ಪ್ರಶಾಂತ್‌ ಸಂಬರ್ಗಿ ಅವರು ಹೊರ ನಡೆದಿದ್ದಾರೆ. ಪ್ರಶಾಂತ್‌ ಸಂಬರ್ಗಿ (Prashanth Sambargi) ಅವರಿಗೆ ಈ ಹಿಂದಿನದಕ್ಕಿಂತ ಕಡಿಮೆ ಓಟುಗಳು ಬಂದಿದ್ದರಿಂದ ಅವರು ದೊಡ್ಮನೆಯಿಂದ ಔಟ್​ ಆಗಿದ್ದಾರೆ.

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ ವಿಚಾರವಾಗಿ ಪ್ರಶಾಂತ್‌ ಸಂಬರ್ಗಿ ಅವರು ಹೆಚ್ಚು ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು ಬಿಗ್​ ಬಾಸ್​ ಸೀಸನ್​ 8ರಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಜಗಳ, ವಾದ, ಮಾತುಗಾರಿಕೆಯಿಂದಲೇ ಪ್ರಶಾಂತ್ ಸಂಬರ್ಗಿ ಅವರು ದೊಡ್ಮನೆಯಲ್ಲಿ ಗಮನಸೆಳೆದಿದ್ದರು. ಆದರೆ ಮನರಂಜನೆ ವಿಚಾರ ಅಂತ ಬಂದಾಗ ಅವರು ಜನರ ಕಣ್ಣಿಗೆ ಅಷ್ಟೊಂದು ಕಾಣಿಸಿಕೊಳ್ಳದೆ ಇರುವುದು ಬಿಗ್​ ಬಾಸ್​ ಸೀಸನ್​ 8ರಲ್ಲಿ ಅವರ ಸೋಲಿಗೆ ಕಾರಣ ಎನ್ನಲಾಗಿತ್ತು.

ಇದನ್ನೂ ಓದಿ: BBK9: ಹೊಡೆದಾಡಿಕೊಂಡ ಗುರೂಜಿ-ರೂಪೇಶ್​ ರಾಜಣ್ಣ; ಇಬ್ಬರ ಕೋಪದಿಂದ ಕೈ ಮೀರಿತು ಪರಿಸ್ಥಿತಿ

ಬಿಗ್​ ಬಾಸ್​ ಸೀಸನ್​ 9ರಲ್ಲಿ ಪ್ರಶಾಂತ್ ಸಂಬರ್ಗಿ ಅವರಿಗೆ ಮತ್ತೆ ಚಾನ್ಸ್​ ಸಿಕ್ಕಿತು. ಇದು ಕೆಲವರಲ್ಲಿ ಖುಷಿ ಮೂಡಿಸಿದರೆ, ಮತ್ತೆ ಕೆಲವರಲ್ಲಿ ಬೇಸರ ಉಂಟುಮಾಡಿತ್ತು. ಟಾಸ್ಕ್​ ವಿಚಾರದಲ್ಲಿ ಪ್ರಶಾಂತ್​ ಸಂಬರ್ಗಿ ಅವರು ಬಿಗ್​ ಬಾಸ್​ ಮನೆಯ ಪ್ರತಿ ಸದಸ್ಯನಿಗೂ ಟಫ್ ಕಂಟೆಸ್ಟಂಟ್ ಆಗಿದ್ದರು.

ಇದನ್ನೂ ಓದಿ: BBK9: ‘ನೀನು ಯಾವ ಸೀಮೆ ಫ್ರೆಂಡ್​?’: ಸಂಬರ್ಗಿಗೆ ನೇರವಾಗಿ ಕೇಳಿದ ರೂಪೇಶ್​ ರಾಜಣ್ಣ

ಕಳೆದ ವಾರ ದೊಡ್ಮನೆಯಲ್ಲಿ ಅನುಪಮಾ, ಅರುಣ್‌ ಸಾಗರ್‌, ಆರ್ಯವರ್ಧನ್‌, ದೀಪಿಕಾ ದಾಸ್‌, ದಿವ್ಯ ಉರುಡುಗ, ಪ್ರಶಾಂತ್‌ ಸಂಬರ್ಗಿ, ಅಮೂಲ್ಯಗೌಡ, ರಾಕೇಶ್‌ ಅಡಿಗ ನಾಮಿನೇಟ್‌ ಆಗಿದ್ದರು. ಪ್ರಶಾಂತ್‌ ಸಂಬರ್ಗಿ ಅವರು ಪ್ರತಿ ಸಲ ನಾಮಿನೇಟ್‌ ಆದಾಗಲೂ ಸೇಫ್​ ಆಗಿದ್ದರು. ಆದರೆ ಈ ಬಾರಿ ಅದೃಷ್ಟ ಕೈಕೊಟ್ಟಿದ್ದು ದೊಡ್ಮನೆಯಿಂದ ಎಲಿಮಿನೇಟ್​ ಆಗಿ ಹೊರ ನಡೆದಿದ್ದಾರೆ.

ಮತ್ತಷ್ಟು ಬಿಗ್​ ಬಾಸ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:17 pm, Sun, 11 December 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ