BBK9: ‘ನೀನು ಯಾವ ಸೀಮೆ ಫ್ರೆಂಡ್​?’: ಸಂಬರ್ಗಿಗೆ ನೇರವಾಗಿ ಕೇಳಿದ ರೂಪೇಶ್​ ರಾಜಣ್ಣ

TV9kannada Web Team

TV9kannada Web Team | Edited By: Madan Kumar

Updated on: Dec 08, 2022 | 2:53 PM

Rupesh Rajanna | Bigg Boss Kannada: ಕ್ಯಾಪ್ಟನ್ಸಿ ವಿಚಾರವಾಗಿ ರೂಪೇಶ್​ ರಾಜಣ್ಣ ಮತ್ತು ಪ್ರಶಾಂತ್​ ಸಂಬರ್ಗಿ ನಡುವೆ ವಾಗ್ವಾದ ಆಗಿದೆ. ಇಬ್ಬರೂ ಏರುಧ್ವನಿಯಲ್ಲಿ ಮಾತನಾಡಿಕೊಂಡಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಶೋನಲ್ಲಿ ಈ ವಾರ ರೂಪೇಶ್​ ರಾಜಣ್ಣ ಅವರು ಕ್ಯಾಪ್ಟನ್​ ಆಗಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ಕ್ಯಾಪ್ಟನ್ಸಿ ನಿಭಾಯಿಸುತ್ತಿದ್ದಾರೆ. ಆದರೆ ಅವರ ವರ್ತನೆ ಕೆಲವರಿಗೆ ಇಷ್ಟ ಆಗಿಲ್ಲ. ಇದೇ ವಿಚಾರವಾಗಿ ರೂಪೇಶ್​ ರಾಜಣ್ಣ ಮತ್ತು ಪ್ರಶಾಂತ್​ ಸಂಬರ್ಗಿ (Prashanth Sambargi) ನಡುವೆ ವಾಗ್ವಾದ ಆಗಿದೆ. ‘ನೀನು ಯಾವ ಸೀಮೆ ಫ್ರೆಂಡ್​’ ಎಂದು ಸಂಬರ್ಗಿಗೆ ರೂಪೇಶ್​ ರಾಜಣ್ಣ ಅವರು ನೇರವಾಗಿ ಕೇಳಿದ್ದಾರೆ. ಡಿ.8ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಆರಂಭದ ದಿನಗಳಲ್ಲಿ ಸೈಲೆಂಟ್​ ಆಗಿದ್ದ ರೂಪೇಶ್​ ರಾಜಣ್ಣ (Rupesh Rajanna) ಈಗ ವೈಲೆಂಟ್​ ಆಗಿದ್ದಾರೆ. ತುಂಬ ಆತ್ಮವಿಶ್ವಾಸದಿಂದ ಅವರು ಬಿಗ್​ ಬಾಸ್​ ಆಟ ಮುಂದುವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada