BBK9: ಹೊಡೆದಾಡಿಕೊಂಡ ಗುರೂಜಿ-ರೂಪೇಶ್ ರಾಜಣ್ಣ; ಇಬ್ಬರ ಕೋಪದಿಂದ ಕೈ ಮೀರಿತು ಪರಿಸ್ಥಿತಿ
Rupesh Rajanna | Bigg Boss Kannada: ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ರಾಜಣ್ಣ ನಡುವೆ ದೊಡ್ಡ ಜಗಳ ಆಗಿದೆ. ಇಬ್ಬರೂ ಕೈಕೈ ಮಿಲಾಯಿಸಿದ್ದು ನೋಡಿ ಇನ್ನುಳಿದ ಸ್ಪರ್ಧಿಗಳಿಗೆ ಶಾಕ್ ಆಗಿದೆ.
ಬಿಗ್ ಬಾಸ್ (Bigg Boss Kannada Season 9) ಆಟದಲ್ಲಿ ಸ್ಪರ್ಧಿಗಳು ತಮಾಷೆ ಮಾಡಿಕೊಳ್ಳುವುದು ಸಹಜ. ಆದರೆ ಕೆಲವೊಮ್ಮೆ ಅದು ರಾಂಗ್ ಆಗಿ ಬಿಡುತ್ತದೆ. ಈಗ ಆರ್ಯವರ್ಧನ್ ಗುರೂಜಿ (Aryavardhan Guruji) ಹಾಗೂ ರೂಪೇಶ್ ರಾಜಣ್ಣ ನಡುವೆ ಅದೇ ರೀತಿ ಆಗಿದೆ. ಆರಂಭದಲ್ಲಿ ತಮಾಷೆಗೆ ಕೈ-ಕೈ ಮಿಲಾಯಿಸಿದ ಅವರಿಬ್ಬರು ನಂತರದಲ್ಲಿ ಗಂಭೀರವಾಗಿ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಕೋಪ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ದೊಡ್ಡ ಜಗಳ ಆಗಿದೆ. ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಇಬ್ಬರ ಗಲಾಟೆ ಹೈಲೈಟ್ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋನಲ್ಲಿ ರೂಪೇಶ್ ರಾಜಣ್ಣ (Rupesh Rajanna) ಮತ್ತು ಆರ್ಯವರ್ಧನ್ ಗುರೂಜಿ ಅವರು ಗಮನ ಸೆಳೆಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos