Honganasu: ವಸುಗೆ ಬರೆದ ಲವ್ ಲೆಟರ್ ರಹಸ್ಯ ಬಯಲು; ಜಗತಿ ಕೈಗೆ ಸಿಕ್ಕಿಬಿದ್ದ ರಿಷಿ

Honganasu Serial Update: ರಿಷಿ ಮದುವೆ ವಿಚಾರವನ್ನು ಜಗತಿ ಮತ್ತು ಮಹೇಂದ್ರ ಬಳಿ ದೇವಯಾನಿ ಮಾತನಾಡಿದಳು. ‘ಆ ವಿಚಾರ ರಿಷಿಗೆ ಬಿಟ್ಟಿದ್ದು’ ಎಂದು ಜಗತಿ ತಿರುಗೇಟು ನೀಡಿದಳು.

Honganasu: ವಸುಗೆ ಬರೆದ ಲವ್ ಲೆಟರ್ ರಹಸ್ಯ ಬಯಲು; ಜಗತಿ ಕೈಗೆ ಸಿಕ್ಕಿಬಿದ್ದ ರಿಷಿ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 29, 2022 | 6:52 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಗೌತಮ್ ಲವ್ ಪ್ರಪೋಸಲ್‌ ರಿಜೆಕ್ಟ್ ಮಾಡಿದ ವಸುಧರಾ ನೋಡಿ ಪುಲ್ ಖುಷ್ ಆದ ರಿಷಿ. ವಸುಧರಾ ಮನಸ್ಸಲ್ಲಿ ಯಾರೋ ಇದ್ದಾರೆ. ಯಾರು ಅಂತ ಗೊತ್ತಾಗಿಲ್ಲ ಎಂದು ಗೌತಮ್ ರಿಷಿಗೆ ಹೇಳಿದ. ವಸು ಮನಸ್ಸಲ್ಲಿ ಯಾರಿದ್ದಾರೆ ಎಂದು ಮೊದಲು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ ರಿಷಿ. ಇತ್ತ ಗೌತಮ್ ನೀಡಿದ ಪೇಟಿಂಗ್ ಹಿಡಿದು ಇದನ್ನು ಯಾರು ಬಿಡಿಸಿದ್ದು ಅಂತ ಕಂಡುಹಿಡಿಯಲೇ ಬೇಕೆಂದು ಯೋಚಿಸುತ್ತಿದ್ದಾಳೆ ವಸು.

ವಸುಗೆ ಲವ್ ಲೆಟರ್ ಬರೆದಿದ್ದು ಯಾರು ಅಂತ ಜಗತಿಗೆ ಗೊತ್ತಾಗಿರಲಿಲ್ಲ. ಹರಿದು ಬಿಸಾಕಿದ್ದ ಲೆಟರ್ ಅನ್ನು ಮತ್ತೆ ಅಂಟಿಸಿ ಇಟ್ಟುಕೊಂಡಿದ್ದ ರಿಷಿ. ತಾನು ಮಲಗುವ ಬೆಡ್ ಮೇಲೆ ಲೆಟರ್ ಹಿಡಿದು ಕುಳಿತಿದ್ದ ರಿಷಿ ಫೋನ್ ಬಂತು ಎಂದು ಹಾಗೆ ರೂಮಿನಿಂದ ಹೊರಟ. ಅಷ್ಟೊತ್ತಿಗೆ ಜಗತಿ ಮತ್ತು ಮಹೇಂದ್ರ ರಿಷಿ ರೂಮಿಗೆ ಎಂಟ್ರಿ ಕೊಟ್ಟರು. ಬೆಡ್ ಮೇಲೆ ಲವ್ ಲೆಟರ್ ನೋಡಿ ಇಬ್ಬರೂ ಶಾಕ್ ಆದರು. ಅವತ್ತು ಕಾಲೇಜಿನಲ್ಲಿ ಸಿಕ್ಕ ಲೆಟರ್ ಇದೇ ಎಂದು ಜಗತಿಗೆ ಗೊತ್ತಾಯಿತು. ಅದನ್ನು ಬರೆದಿದ್ದು ರಿಷಿನಾ ಎಂದು ಮಹೇಂದ್ರ ಮತ್ತು ಜಗತಿಗೆ ಅಚ್ಚರಿ ಪಟ್ಟರು. ಲವ್ ಲೆಟರ್‌‌ನ ಫೋಟೋ ಕ್ಲಿಕ್ಕಿಸಿಕೊಂಡು ಇಬ್ಬರೂ ರೂಮಿನಿಂದ ಹೊರಟರು.

ತನ್ನ ಚೇಂಬರ್‌ಗೆ ಎಂಟ್ರಿ ಕೊಡುತ್ತಿದ್ದಂತೆ ವಸುನಾ ನೋಡಿ ಖುಷಿಯಾದ ರಿಷಿ. ವಸುಧರಾ ಆಗಲೇ ಕಾಲೇಜಿಗೆ ಬಂದು ಕೆಲಸ ಮಾಡುತ್ತಿದ್ದಳು. ವಸುಧರಾ ಜೊತೆಗಿದ್ದರೆ ರಿಷಿಗೆ ಏನೋ ಖುಷಿ. ಆದರೆ ಅದನ್ನು ಬಾಯ್ಬಿಟ್ಟು ಹೇಳಿಕೊಳ್ಳುತ್ತಿಲ್ಲ ರಿಷಿ. ಮನಸ್ಸಲ್ಲೇ ಖುಷಿ ಪಡುತ್ತಾ ವಸು ಜೊತೆ ಮಾತನಾಡಿದ. ಆದರೆ ಇಬ್ಬರ ರೊಮ್ಯಾಂಟಿಕ್ ಮಾತುಕತೆಯನ್ನು ಬ್ರೇಕ್ ಮಾಡಿದಳು ಸಾಕ್ಷಿ.  ವಸುಧರಾ ಮನಸ್ಸಲ್ಲಿ ಯಾರಿದ್ದಾರೆ ಎಂದು ನೇರವಾಗಿ ಕೇಳಬೇಕು ಅಂದುಕೊಳ್ಳುತ್ತಿದ್ದ ರಿಷಿ. ಆಗ ಸಾಕ್ಷಿ ಬರುತ್ತಿರುವುದನ್ನು ನೋಡಿದ. ಸಾಕ್ಷಿ ಬಂದಿದ್ದು ನೋಡಿ ವಸುಧರಾ ಕೈ ಹಿಡಿದು ಅಲ್ಲಿಂದ ಹೋಗೋಣ ಬಾ ಎಂದು ಎಳೆದುಕೊಂಡು ಹೊರಟ.

ರಿಷಿ ವರ್ತನೆ ನೋಡಿ ಗಾಬರಿಯಾದಳು ವಸು. ಎಲ್ಲಿಗೆ, ಏನಾಯಿತು ಅಂತ ವಸು ಕೇಳಿದರೂ ಹೇಳದೆ ಕೈ ಹಿಡಿದು ಹೊರಟ ರಿಷಿ. ತನ್ನ ಚೇಂಬರ್‌ಗೆ ಬೀಗ ಹಾಕಿ ಲಾಕ್ ಮಾಡುವಂತೆ ಕೆಲಸದವರಿಗೆ ಹೇಳಿ ಲೈಬ್ರರಿಗೆ ಹೋದ. ಸಾಕ್ಷಿ ಬಂದವಳೇ ರಿಷಿ ಎಲ್ಲಿ ಎಂದು ಕೆಲಸದವರ ಬಳಿ ಕೇಳಿದಳು. ರಿಷಿ ಸರ್ ಹೊರ ಹೋದರು ಎಂದು ಹೇಳಿದ. ಎಲ್ಲೋದ ಎಂದು ಯೋಚಿಸುತ್ತಾ ಮನೆ ಕಡೆ ಹೊರಟಳು ಸಾಕ್ಷಿ. ಬಳಿಕ ರಿಷಿ ವಸುಧರಾಳನ್ನು ಕರ್ಕೊಂಡು ಕಾರಿನಲ್ಲಿ ಹೊರಟ. ತನಗೆ ಸಹಾಯ ಮಾಡುವಂತೆ ವಸುನಾ ಕೇಳಿಕೊಂಡ. ವಿಷಯ ಹೇಳದೆ ವಸು ಬಳಿ ಸಹಾಯ ಮಾಡುವಂತೆ ಕೇಳಿಕೊಂಡ ರಿಷಿ. ವಸುಧರಾ ರಿಷಿಗೆ ಸಲಹೆ ನೀಡಿದಳು. ವಸು ಮಾತು ರಿಷಿಗೆ ಖುಷಿ ನೀಡಿತು.

ಇತ್ತ ಜಗತಿ ಮತ್ತು ಮಹೇಂದ್ರ ಇಬ್ಬರೂ ವಸುಧರಾ ಮನೆಗೆ ಎಂಟ್ರಿ ಕೊಟ್ಟಿದ್ದರು. ವಸುಧರಾಗೆ ಗೌತಮ್ ಕೊಟ್ಟಿದ್ದ ಪೇಂಟಿಂಗ್ ನೋಡಿ ಇಬ್ಬರೂ ಅಚ್ಚರಿ ಪಟ್ಟರು. ಅಷ್ಟೊತ್ತಿಗೆ ವಸು ಬಂದಳು. ಪೇಂಟಿಂಗ್ ಮಾಡಿದ್ದು ಯಾರು ಎಂದು ವಸುನಾ ಕೇಳಿದಳು ಜಗತಿ. ವಸು ಗೌತಮ್ ಪ್ರಪೋಸ್ ಮಾಡಿದ ವಿಚಾರವನ್ನು ಬಾಯ್ಬಿಟ್ಟಳು. ರಿಷಿ ಮತ್ತು ವಸು ನಡುವೆ ಪ್ರೀತಿ ಇದ್ದರೂ ಇಬ್ಬರೂ ಹೇಳಿಕೊಳ್ಳುತ್ತಿಲ್ಲ ಎಂದು ಜಗತಿ ಮತ್ತು ಮಹೇಂದ್ರ ಇಬ್ಬರೂ ಲವ್ ಲೆಟರ್ ಅನ್ನು ಸೆಂಡ್ ಮಾಡಿದರು. ಲವ್ ಲೆಟರ್ ಮತ್ತು ಪೇಂಟಿಂಗ್ ಎರಡನ್ನೂ ಹಿಡಿದು ಇದರ ಹಿಂದೆ ಇರೋರು ಒಬ್ರೇನಾ ಅಥವಾ ಬೇರೆ ಬೇರೆನಾ ಎಂದು ಯೋಚಿಸಿದಳು ವಸು. ಇದಲ್ಲಾ ರಿಷಿದೇ ಕೆಲಸ ಎಂದು ವಸುಗೆ ಗೊತ್ತಾಗುತ್ತಾ? ಗೌತಮ್ ಹಾಗೆ ರಿಷಿ ಕೂಡ ವಸುಗೆ ಲವ್ ಪ್ರಪೋಸ್ ಮಾಡ್ತಾನಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?